Advertisement

ಸುಶಾಂತ್ ಸಾವಿನ ಕೇಸ್; ಸಿಬಿಐನಿಂದ ಶುಕ್ರವಾರ ಸತತ 10 ತಾಸು, ಇಂದು ಮತ್ತೆ ವಿಚಾರಣೆ

12:20 PM Aug 29, 2020 | Nagendra Trasi |

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿಯನ್ನು ಶುಕ್ರವಾರ(ಆಗಸ್ಟ್ 28, 2020) ಹತ್ತು ಗಂಟೆಗಳ ಕಾಲ ಸಿಬಿಐ ವಿಚಾರಣೆ ನಡೆಸಿದ್ದು. ಶನಿವಾರ (ಆ.29) ಮತ್ತೆ ಸಿಬಿಐ ಅಧಿಕಾರಿಗಳ ಮುಂದೆ ರಿಯಾ ವಿಚಾರಣೆಗೆ ಹಾಜರಾಗಿರುವುದಾಗಿ ವರದಿ ತಿಳಿಸಿದೆ.

Advertisement

ರಿಯಾ ಚಕ್ರವರ್ತಿ (28ವರ್ಷ) ಮತ್ತು ಸುಶಾಂತ್ ಸಿಂಗ್ ರಜಪೂತ್ (34) ಲೀವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿ ಒಟ್ಟಿಗೆ ವಾಸವಾಗಿದ್ದರು. ನಂತರ ಸುಶಾಂತ್ ಸಿಂಗ್ ಸಾವಿಗೆ ಶರಣಾಗುವ ಆರು ದಿನದ (ಜೂನ್ 8, 2020) ಮೊದಲು ರಿಯಾ ಸುಶಾಂತ್ ಮನೆಯಿಂದ ಹೊರನಡೆದಿದ್ದಳು.

ಶುಕ್ರವಾರ ಸಿಬಿಐ ರಿಯಾಗೆ ನಿಶಾಂತ್ ಹಾಗೂ ಅವರ ಕುಟುಂಬದ ಜತೆಗಿನ ಸಂಬಂಧದ ಬಗ್ಗೆ, ಸುಶಾಂತ್ ಮನೆಯಿಂದ ಹೊರನಡೆದಿದ್ದು ಯಾಕೆ? ಮನೆಯಿಂದ ಹೊರಹೋದ ಮೇಲೆ ಸುಶಾಂತ್ ಜತೆ ಸಂವಹನ ನಡೆಸಿದ್ದೀರಾ ಎಂಬ ಪ್ರಶ್ನೆಗಳನ್ನು ಕೇಳಿತ್ತು.

ಇದನ್ನೂ ಓದಿ: ಸುಶಾಂತ್ ಕೇಸ್: ಗೆಳತಿ ರಿಯಾ ಚಕ್ರವರ್ತಿಯನ್ನು ವಶಕ್ಕೆ ತೆಗೆದುಕೊಳ್ಳಿ; ಬಿಜೆಪಿ ನಾಯಕ

ಸುಪ್ರೀಂಕೋರ್ಟ್ ಆದೇಶದಂತೆ ಸಿಬಿಐ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದೆ. ತನ್ನ ಮಗನಿಗೆ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬ ಸದಸ್ಯರು ಮಾನಸಿಕವಾಗಿ ಕಿರುಕುಳ ನೀಡಿದ್ದು, ಆತನಿಂದ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ, ಅಲ್ಲದೇ ಆತನ ಸಾವಿಗೂ ಕಾರಣರಾಗಿದ್ದಾರೆ ಎಂದು ಸುಶಾಂತ್ ತಂದೆ ಕೆಕೆ ಸಿಂಗ್ ಆರೋಪಿಸಿದ್ದರು.

Advertisement

ಇದನ್ನೂ ಓದಿ:ಸುಶಾಂತ್ ಸಿಂಗ್ ಖಾತೆಯಿಂದ 15 ಕೋಟಿ ವರ್ಗಾವಣೆ: ಗೆಳತಿ ರಿಯಾ ಬಂಧನ ಸಾಧ್ಯತೆ?

ಮುಂಬೈನ ಡಿಆರ್‌ಡಿಒ ಕಚೇರಿಯಲ್ಲಿ ನಡೆಸಿದ ವಿಚಾರಣೆ ವೇಳೆ ವಾಟ್ಸ್‌ಆ್ಯಪ್‌ ಚಾಟ್‌ ಗಳನ್ನು ತಾನೇ ಬರೆದಿರುವುದಾಗಿ ತಿಳಿಸಿದ್ದಾರೆ. ಎರಡು ಬಾಕ್ಸ್‌ಗಳಷ್ಟು ವಾಟ್ಸ್‌ಆ್ಯಪ್‌ ಚಾಟ್‌ಗಳ ವಿವರಗಳನ್ನು ಸಂಗ್ರಹಿಸಲಾಗಿದೆ ಎಂದು ಇಂಗ್ಲಿಷ್‌ ಸುದ್ದಿವಾಹಿನಿಗಳು ವರದಿ ಮಾಡಿವೆ.

ಇದನ್ನೂ ಓದಿ: ಸುಶಾಂತ್ ಸೂಸೈಡ್ ಅಲ್ಲ, ದಾವೂದ್ ತಂಡದಿಂದ ಹತ್ಯೆ?ಮಾಜಿ ರಾ ಅಧಿಕಾರಿ ಆರೋಪವೇನು

ರಿಯಾ ಜತೆಗೆ ಅವರ ಸಹೋದರ ಶೊವಿಕ್‌ ಚಕ್ರವರ್ತಿಯೂ ವಿಚಾರಣೆ ಎದುರಿಸಿದ್ದರು. ಈ ಸಂದರ್ಭದಲ್ಲಿ ಹಲವು ಹೆಸರುಗಳು ಬಹಿರಂಗವಾಗಿದೆ ಎನ್ನಲಾಗಿದೆ. ಇದೇ ವೇಳೆ ಎನ್‌ಸಿಬಿ ಕೂಡ ಶೀಘ್ರದಲ್ಲೇ ಅವರ ವಿಚಾರಣೆ ನಡೆಸಲಿದೆ ಎಂದು ವರದಿ ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next