Advertisement

ದಾವೂದ್‌ ನಂಟನ ವಿರುದ್ಧ ಚಾರ್ಜ್‌ಶೀಟ್‌

10:00 AM Dec 26, 2019 | Team Udayavani |

ಹೊಸದಿಲ್ಲಿ: ಪಾಸ್‌ಪೋರ್ಟ್‌ ನಕಲು ಪ್ರಕರಣ ಸಂಬಂಧ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಆಪ್ತ ಸಹಚರ ಫಾರೂಕ್‌ ಟಕ್ಲಾ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. 1993ರ ಮುಂಬಯಿ ಬಾಂಬ್‌ ಸ್ಫೋಟದ ಬಳಿಕ ಸುಳ್ಳು ಗುರುತಿನ ಮೂಲಕ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು, ಫಾರೂಕ್‌ ನಕಲಿ ಪಾಸ್‌ಪೋರ್ಟ್‌ ಬಳಸಿಕೊಂಡಿದ್ದ.

Advertisement

2018ರಲ್ಲಿ ಆತ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಆತನನ್ನು ಸೆರೆಹಿಡಿಯಲಾಗಿತ್ತು. ಬಂಧನದ ವೇಳೆ ಆತ ಮುಷ್ತಾಕ್‌ ಮೊಹಮ್ಮದ್‌ ಮಿಯಾನ್‌ ಎಂಬ ಹೆಸರುಳ್ಳ ಪಾಸ್‌ಪೋರ್ಟ್‌ ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next