Advertisement

ಮತ್ತೆ ಪ್ರಧಾನಿ ಗದ್ದುಗೆ ಏರಿದ ಮೋದಿ; ಪಾತಕಿ ದಾವೂದ್ ಗೆ ಕಾಡತೊಡಗಿದೆ ಜೀವಭಯ!ವರದಿ

09:41 AM May 26, 2019 | Nagendra Trasi |

ನವದೆಹಲಿ:ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಚಂಡ ಬಹುಮತದಿಂದ ಪ್ರಧಾನಿ ಗದ್ದುಗೆ ಏರಿದ್ದರಿಂದ ಹೆಚ್ಚು ಚಿಂತೆಗೀಡಾಗಿದ್ದು, ಕುಖ್ಯಾತ ಭೂಗತ ಪಾತಕಿ, ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿರುವುದಾಗಿ ಆಂಗ್ಲ ಮಾಧ್ಯಮ ವೆಬ್ ಸೈಟ್ ವೊಂದು ತಿಳಿಸಿದೆ.

Advertisement

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪಾತಕಿ ದಾವೂದ್ ಹಾಗೂ ಸಹಚರರ ವಿರುದ್ಧ ಕೆಲವು ಕ್ರಮಗಳನ್ನು ಕೈಗೊಂಡಿತ್ತು. ಏತನ್ಮಧ್ಯೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವ ಮೂಲಕ ತಾವು ಸುರಕ್ಷಿತವಾಗಿರಬಹುದು ಎಂದು ವಿಶ್ವಾಸ ಹೊಂದಿದ್ದ ಎಂದು ಮೂಲಗಳು ಹೇಳಿರುವುದಾಗಿ ವರದಿ ವಿವರಿಸಿದೆ.

ಇದೀಗ ನರೇಂದ್ರ ಮೋದಿ ಐತಿಹಾಸಿಕ ಗೆಲುವು ಸಾಧಿಸಿರುವುದು ದಾವೂದ್ ಇಬ್ರಾಹಿಂ ಕಂಗೆಟ್ಟಿದ್ದು, ಪಾಕಿಸ್ತಾನದ ಐಎಸ್ ಐನ ಕೆಲವು ಹಿರಿಯ ಅಧಿಕಾರಿಗಳಲ್ಲಿ ತನ್ನ ಭಯವನ್ನು ತೋಡಿಕೊಂಡಿರುವುದಾಗಿ ವರದಿ ತಿಳಿಸಿದೆ. ಅಷ್ಟೇ ಅಲ್ಲ ಐಎಸ್ ಐ ಮತ್ತು ಪಾಕ್ ಸೇನಾ ಅಧಿಕಾರಿಗಳ ಜೊತೆಗಿನ ಮಾತುಕತೆ ವೇಳೆ ಪ್ರಧಾನಿ ಮೋದಿಯ ಜನಪ್ರಿಯತೆ ಹಾಗೂ ಅಮೆರಿಕ, ಇಸ್ರೇಲ್ ಜೊತೆಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಹೆಚ್ಚು ಕಳವಳ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ.

ಭಾರತೀಯ ಭದ್ರತಾ ಏಜೆನ್ಸಿಯಿಂದ ತನ್ನನ್ನು ಸುರಕ್ಷಿತವಾಗಿಡಿ ಎಂದು ದಾವೂದ್ ಇಬ್ರಾಹಿಂ ಐಎಸ್ ಐ ಮತ್ತು ಪಾಕ್ ಸೇನಾ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ.

ನಿವೃತ್ತ ಐಪಿಎಸ್ ಅಧಿಕಾರಿ ಪಿಕೆ ಜೈನ್ ಝೀ ಮೀಡಿಯಾ ಜೊತೆ ಮಾತನಾಡುತ್ತ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಮೋದಿ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ಪಾಕಿಸ್ತಾನ ಮತ್ತು ದಾವೂದ್ ಇಬ್ರಾಹಿಂಗೆ ಮಾನಸಿಕವಾಗಿಯೂ ಒತ್ತಡ ಹೆಚ್ಚಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಭಾರತೀಯ ಸೇನಾ ಪಡೆ ಕಾರ್ಯಾಚರಣೆ ನಡೆಸುವ ಮೂಲಕ ಐಎಸ್ ಐ ಕೃಪಾಕಟಾಕ್ಷದಲ್ಲಿರುವ ದಾವುದ್ ನನ್ನು ಪತ್ತೆ ಹಚ್ಚಬಲ್ಲದು ಎಂಬ ಭಯ ಕಾಡತೊಡಗಿದೆಯಂತೆ. ಇದಕ್ಕೆ ಅಮೆರಿಕದ ಗುಪ್ತಚರ ಇಲಾಖೆ ಸಿಐಎ ಮತ್ತು ಇಸ್ರೇಲ್ ಭದ್ರತಾ ಏಜೆನ್ಸಿ ಮೊಸ್ಸಾದ್ ಕೂಡಾ ಭಾರತಕ್ಕೆ ನೆರವು ನೀಡುತ್ತದೆ ಎಂಬ ಭೀತಿ ದಾವೂದ್ ಗೆ ಇದ್ದಿರುವುದಾಗಿ ಜೈನ್ ವಿಶ್ಲೇಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next