Advertisement

ಇಸ್ರೇಲ್‌ ಪ್ರಧಾನಿಗೆ ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ

11:22 AM Jan 15, 2018 | Team Udayavani |

ಹೊಸದಿಲ್ಲಿ : ”ಭಾರತ-ಇಸ್ರೇಲ್‌ ನಡುವಿನ ಸ್ನೇಹ ಮತ್ತು ಬಾಂಧವ್ಯದ ಹೊಸ ಯುಗಾರಂಭಕ್ಕೆ ಈ ಮಹೋನ್ನತ ಕ್ಷಣಗಳು ಸಾಕ್ಷಿಯಾಗಿವೆ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಇಂದು ಸೋಮವಾರ ರಾಷ್ಟ್ರಪತಿ ಭವನದಲ್ಲಿ ರತ್ನಗಂಬಳಿಯ ಅದ್ದೂರಿ ಸ್ವಾಗತವನ್ನು ಪಡೆದ ಬಳಿಕ ಸಭಿಕರನ್ನು ಉದ್ದೇಶಿಸಿ ಹೇಳಿದರು. 

Advertisement

“ಇದು ಆರಂಭವಾದದ್ದು ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಇಸ್ರೇಲ್‌ ಭೇಟಿಯೊಂದಿಗೆ. ಆ ಭೇಟಿ ಅದ್ಭುತವಾದ ಹುಮ್ಮಸ್ಸು, ಹುರುಪನ್ನು ಉಭಯ ದೇಶಗಳ ಸ್ನೇಹ ಸಂಬಂಧದಲ್ಲಿ ತುಂಬಿದವು; ಈ ಕ್ಷಣಗಳು ನನಗೆ, ನನ್ನ ಪತ್ನಿಗೆ ಮತ್ತು ಇಸ್ರೇಲ್‌ ನ ಸಮಗ್ರ ಜನತೆಗೆ ಅತ್ಯಂತ ಸಂತಸದಾಯಕವಾಗಿವೆ’ ಎಂದು ನೆತನ್ಯಾಹು ಹೇಳಿದರು. 

ನಿನ್ನೆ ಭಾನುವಾರ ಪ್ರಧಾನಿ ಮೋದಿ ಅವರು ಶಿಷ್ಟಾಚಾರಗಳನ್ನೆಲ್ಲ ಬದಿಗೊತ್ತಿ ಇಸ್ರೇಲ್‌ ಪ್ರಧಾನಿಯನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ವೈಯಕ್ತಿಕವಾಗಿ ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದ್ದರು. 

ಈ ಆತ್ಮೀಯ ಅಪ್ಪುಗೆಯ ಸ್ವಾಗತಕ್ಕೆ ಅಚ್ಚರಿ ವ್ಯಕ್ತಪಡಿಸುತ್ತಾ ನೆತನ್ಯಾಹು ಅವರು ತಮ್ಮ ಟ್ವೀಟ್‌ ನಲ್ಲಿ “ವಿಮಾನ ನಿಲ್ದಾಣಕ್ಕೆ ಖುದ್ದು ಆಗಮಿಸಿದ ಅಪ್ಪುಗೆಯ ಸ್ವಾಗಡ ನೀಡಿದ ನನ್ನ ಉತ್ತಮ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ; ನಾವಿಬ್ಬರೂ ಜತೆಗೂಡಿ ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಹೊಸ ಎತ್ತರಕ್ಕೆ ಒಯ್ಯೋಣ’ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next