Advertisement

15,000 ಕೋಟಿ ಮೌಲ್ಯದ ದಾವೂದ್‌ ಆಸ್ತಿ ಜಪ್ತಿ

03:45 AM Jan 04, 2017 | Team Udayavani |

ಹೊಸದಿಲ್ಲಿ: ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ದಲ್ಲಿ ಮುಂಬಯಿ ಸ್ಫೋಟದ ರೂವಾರಿ ದಾವೂದ್‌ಗೆ  ಸೇರಿದ 15,000 ಕೋ. ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಾಧ್ಯಮ ವರದಿಯೊಂದು ಮಂಗಳವಾರ ಹೇಳಿದೆ.

Advertisement

ದಾವೂದ್‌ಗೆ ಸೇರಿದ ಹೊಟೇಲ್‌ಗ‌ಳು, ಆಸ್ತಿಪಾಸ್ತಿ ಗಳು ಮತ್ತು ಷೇರುಗಳು ಇದರಲ್ಲಿ ಸೇರಿವೆ. ಇತ್ತೀಚಿನ ದಿನಗಳಲ್ಲಿ ಈತನ ಆಸ್ತಿಪಾಸ್ತಿಗಳ ಬಗ್ಗೆ  ಯುಎಇ  ಸರಕಾರ ತನಿಖೆ ಆರಂಭಿ ಸಿತ್ತು ಎಂದು ವರದಿ ತಿಳಿಸಿದೆ.

ಕಳೆದ ವರ್ಷ ಯುಎಇಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಾಗ ದಾವೂದ್‌ ಚಟುವಟಿಕೆಗಳು, ಆಸ್ತಿಪಾಸ್ತಿಗಳ ಬಗ್ಗೆ ಯುಎಇ ಸರಕಾರಕ್ಕೆ ಪಟ್ಟಿ ನೀಡಿ ಬಂದಿದ್ದರು. “ಗೋಲ್ಡನ್‌ ಬಾಕ್ಸ್‌’ ಎಂಬ ಬೇನಾಮಿ ಕಂಪೆನಿ ದಾವೂದ್‌ಗೆ ಸೇರಿದೆ. ಸೋದರ ಅನೀಸ್‌ ಇಬ್ರಾಹಿಂ ಹೆಸರಲ್ಲೂ ಸಾಕಷ್ಟು ಆಸ್ತಿಪಾಸ್ತಿಗಳಿವೆ ಎಂದು ತಿಳಿಸಲಾಗಿತ್ತು. ಇದರ ಆಧಾರ ದಲ್ಲಿ ಈಗ ಯುಎಇ ಕ್ರಮ ಜರಗಿಸುತ್ತಿದೆ ಎನ್ನಲಾಗಿದೆ.

ದಾವೂದ್‌ ಮೊರಕ್ಕೋ, ಸ್ಪೇನ್‌, ಸಿಂಗಾಪುರ, ಥಾಯ್ಲೆಂಡ್‌, ಸೈಪ್ರಸ್‌, ಟರ್ಕಿ, ಭಾರತ, ಪಾಕಿಸ್ಥಾನ ಮತ್ತು ಬ್ರಿಟನ್‌ನಲ್ಲೂ ಸಾಕಷ್ಟು ಆಸ್ತಿಪಾಸ್ತಿ ಹೊಂದಿದ್ದಾನೆ. ಈತ ಸದ್ಯ ಪಾಕಿಸ್ಥಾನದ ಕರಾಚಿಯಲ್ಲಿ ಇದ್ದಾನೆ ಎನ್ನಲಾಗಿದೆ.

ಶೀಘ್ರ ದಾವೂದ್‌ ಭಾರತಕ್ಕೆ: ರಾಜನಾಥ್‌ ಸಿಂಗ್‌
ಹೊಸದಿಲ್ಲಿ:
ಮುಂಬಯಿ ಸರಣಿ ಸ್ಫೋಟದ ಹಂತಕ, ದೇಶಕ್ಕೆ ಬೇಕಾಗಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ನನ್ನು ಬಂಧಿಸಿ ಸದ್ಯದಲ್ಲಿಯೇ ದೇಶಕ್ಕೆ ಕರೆತರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. ಈಗಾಗಲೇ ಪ್ರಯತ್ನ ಸಾಗಿದ್ದು ಅದು ಫ‌ಲ ಕೊಡುವ ಹಂತದಲ್ಲಿದೆ.ಅಲ್ಲದೆ ನೂರಾರು ಅಮಾಯಕ ಜನರ ಸಾವಿಗೆ ಕಾರಣನಾದ ದಾವೂದ್‌ನನ್ನು ದೇಶ‌ಕ್ಕೆ ಹಸ್ತಾಂತರ ಮಾಡುವಂತೆ ಪಾಕ್‌ ಮೇಲೆ ಒತ್ತಡ ಮುಂದುವರಿಯಲಿದೆ. ಇದಲ್ಲದೆ ಪಾಕ್‌ ಮೂಲದ ಜೈಶ್‌ ಎ-ಮೊಹಮ್ಮದ್‌ ಸಂಘಟನೆಯ ಮೌಲಾನ ಮಸೂದ್‌ ಅಜರ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದೂ ಸಾರುವಂತೆ ಚೀನದ ಮೇಲೂ ಸರಕಾರ ಒತ್ತಡ ಹಾಕುತ್ತಿದೆ ಎಂದು ಸಚಿವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next