Advertisement

ಪಾಕಿಸ್ಥಾನ ಪ್ರವಾಸಕ್ಕೆ ಬಲಿಷ್ಠ ಪಡೆ

01:58 AM Aug 06, 2019 | Sriram |


ಹೊಸದಿಲ್ಲಿ: ಮುಂದಿನ ತಿಂಗಳು ಪಾಕಿಸ್ಥಾನದಲ್ಲಿ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಾವಳಿ ಆಡಲಿರುವ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಎಲ್ಲ ಅಗ್ರ ಆಟಗಾರರು ಪಾಲ್ಗೊಳ್ಳಲಿದ್ದಾರೆ.

Advertisement

ಪ್ರಜ್ಞೆàಶ್‌ ಗುಣೇಶ್ವರನ್‌ ಮತ್ತು ರಾಮ್‌ಕುಮಾರ್‌ ರಾಮನಾಥನ್‌ ಸಿಂಗಲ್ಸ್‌ ಸವಾಲು ಎದುರಿಸಲಿದ್ದು, ರೋಹನ್‌ ಬೋಪಣ್ಣ-ದಿವಿಜ್‌ ಶರಣ್‌ ಜೋಡಿ ಡಬಲ್ಸ್‌ ನಲ್ಲಿ ಸೆಣಸಲಿದೆ.

ಸಾಕೇತ್‌ ಮೈನೆನಿ ವಾಪಸ್‌
ಸುಮಿತ್‌ ನಗಲ್‌ ಗಾಯಾಳಾಗಿ ಹಿಂದೆ ಸರಿಯಲು ನಿರ್ಧರಿಸಿದ್ದರಿಂದ ಸಾಕೇತ್‌ ಮೈನೆನಿ ಭಾರತ ತಂಡಕ್ಕೆ ವಾಪಸಾದರು. ಮೈನೆನಿ ಸಿಂಗಲ್ಸ್‌ ಹಾಗೂ ಡಬಲ್ಸ್‌ ಗಳೆರಡರಲ್ಲೂ ಆಡುವ ಛಾತಿ ಹೊಂದಿದ್ದಾರೆ. ಅವರು ಒಂದು ವರ್ಷದ ಬಳಿಕ ತಂಡಕ್ಕೆ ಕರೆ ಪಡೆದಿದ್ದಾರೆ.

ಕಳೆದ ಸೆಪ್ಟಂಬರ್‌ನಲ್ಲಿ ಕೋಲ್ಕತಾದಲ್ಲಿ ನಡೆದ ಇಟೆಲಿ ವಿರುದ್ಧದ ಪಂದ್ಯಾವಳಿ ವೇಳೆ ಮೈನೆನಿ ತಂಡದಲ್ಲಿದ್ದರು. ಆದರೆ ಆಡುವ ಅವಕಾಶ ಲಭಿಸಿರಲಿಲ್ಲ. ಇದಕ್ಕೂ ಮುನ್ನ ಸರ್ಬಿಯಾ ಪ್ರವಾಸದ ವೇಳೆ “ವರ್ಲ್ಡ್ ಗ್ರೂಪ್‌ ಪ್ಲೇ ಆಫ್’ ಕೂಟದಲ್ಲಿ ರೋಹನ್‌ ಬೋಪಣ್ಣ ಜತೆ ಡಬಲ್ಸ್‌ ಆಡಿದ್ದರು. ಕಳೆದ ವಾರವಷ್ಟೇ ಅರ್ಜುನ್‌ ಖಾಢೆ ಜತೆ “ಚೆಂಗುx ಚಾಲೆಂಜರ್‌’ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಇವರ ಪಾಲಿಗಿದೆ.ಪಾಕಿಸ್ಥಾನ ವಿರುದ್ಧ ಈವರೆಗೆ 6 ಸಲ ಡೇವಿಸ್‌ ಕಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಭಾರತ ಎಲ್ಲದರಲ್ಲೂ ಗೆದ್ದು ಅಜೇಯ ದಾಖಲೆ ಕಾಯ್ದುಕೊಂಡಿದೆ.

ಭಾರತ ತಂಡ: ಪ್ರಜ್ಞೇಶ್ ಗುಣೇಶ್ವರನ್‌, ರಾಮ್‌ಕುಮಾರ್‌ ರಾಮನಾಥನ್‌, ಸಾಕೇತ್‌ ಮೈನೆನಿ, ರೋಹನ್‌ ಬೋಪಣ್ಣ, ದಿವಿಜ್‌ ಶರಣ್‌.

Advertisement

ಮೀಸಲು ಆಟಗಾರ: ಶಶಿಕುಮಾರ್‌ ಮುಕುಂದ್‌.
ನಾಯಕ: ಮಹೇಶ್‌ ಭೂಪತಿ.
ಕೋಚ್‌: ಜೀಶನ್‌ ಅಲಿ.

Advertisement

Udayavani is now on Telegram. Click here to join our channel and stay updated with the latest news.

Next