Advertisement

Davis Cup: ಸುಮಿತ್‌ ನಾಗಲ್‌ ವಾಪಸ್

12:06 AM Aug 17, 2024 | Team Udayavani |

ಹೊಸದಿಲ್ಲಿ: ಸ್ವೀಡನ್‌ ವಿರುದ್ಧ ನಡೆ ಯುವ ಡೇವಿಸ್‌ ಕಪ್‌ ವರ್ಲ್ಡ್ ಗ್ರೂಪ್‌ ಒಂದರ ಮುಖಾಮುಖಿಗಾಗಿ ಭಾರತ ತಂಡ ಪ್ರಕಟಗೊಂಡಿದೆ. ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಸುಮಿತ್‌ ನಾಗಲ್‌ ವಾಪಸಾಗಿದ್ದಾರೆ. ಆದರೆ ಯೂಕಿ ಭಾಂಬ್ರಿ ಹೊರಗುಳಿದಿದ್ದಾರೆ. ಸೆ. 14 ಮತ್ತು 15ರಂದು ನಡೆಯಲಿರುವ ಈ ಪಂದ್ಯಕ್ಕೆ ಅಶುತೋಷ್‌ ಸಿಂಗ್‌ ನೂತನ ಕೋಚ್‌ ಆಗಿರುತ್ತಾರೆ.

Advertisement

ಸುಮಿತ್‌ ನಾಗಲ್‌ ಪಾಕಿಸ್ಥಾನ ವಿರುದ್ಧದ ಡೇವಿಸ್‌ ಕಪ್‌ ಪಂದ್ಯಾವಳಿಯಲ್ಲಿ ಆಡಿರಲಿಲ್ಲ. ರಾಮ್‌ಕುಮಾರ್‌ ರಾಮನಾಥನ್‌, ಎನ್‌. ಶ್ರೀರಾಮ್‌ ಬಾಲಾಜಿ, ಸಿದ್ಧಾರ್ಥ್ ವಿಶ್ವಕರ್ಮ, ನಿಖೀಲ್‌ ಪೂಣಚ್ಚ ಭಾರತ ತಂಡದ ಇತರ ಸದಸ್ಯರು. ಆರ್ಯನ್‌ ಶಾ ಮೀಸಲು ಆಟಗಾರ. ರೋಹಿತ್‌ ರಾಜ್‌ಪಾಲ್‌ ನಾಯಕರಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ಇವರು ಪಾಕಿಸ್ಥಾನಕ್ಕೆ ಹೋಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next