Advertisement
ಶನಿವಾರ ಮಹತ್ವದ ಡಬಲ್ಸ್ ಪಂದ್ಯ ನಡೆಯಲಿದೆ. ಬಹುತೇಕ ತನ್ನ ಅಂತಿಮ ಡೇವಿಸ್ ಕಪ್‌ನಲ್ಲಿ ಆಡುತ್ತಿರುವ ಲಿಯಾಂಡರ್ ಪೇಸ್ ಅವರು ವಿಷ್ಣುವರ್ಧನ್ ಜತೆಗೂಡಿ ನ್ಯೂಜಿಲ್ಯಾಂಡಿನ ಆರ್ಟೆಮ್ ಸಿತಾಕ್ ಮತ್ತು ಮೈಕಲ್ ವೀನಸ್ ಅವರನ್ನು ಎದುರಿಸಲಿದ್ದಾರೆ. ಸಿತಾಕ್ ಮತ್ತು ವೀನಸ್ ಸಾಕಷ್ಟು ಅನುಭವಿ ಡಬಲ್ಸ್ ಆಟಗಾರರಾಗಿರುವ ಕಾರಣ ಅವರಿಬ್ಬರು ಪೇಸ್-ವಿಷ್ಣು ಅವರಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಯಿದೆ.
ತನ್ನ 55ನೇ ಡೇವಿಸ್ ಕಪ್ ಹೋರಾಟದಲ್ಲಿ ಆಡುತ್ತಿರುವ 18 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಪೇಸ್ ಅವರಿಗೆ ಡಬಲ್ಸ್‌ನಲ್ಲಿ ವಿಶ್ವದಾಖಲೆ ನಿರ್ಮಿಸುವ ಅವಕಾಶ ಲಭಿಸಿದೆ. ಇಷ್ಟರವರೆಗೆ 42 ಡಬಲ್ಸ್ ಪಂದ್ಯಗಳಲ್ಲಿ ಜಯಿಸಿ ಇಟಲಿಯ ನಿಕೋಲ ಪೀಟ್ರಾಂಗೆಲಿ ಜತೆ ಸಮಬಲ ಸಾಧಿಸಿರುವ ಪೇಸ್ ಅವರೀಗ ನೂತನ ವಿಶ್ವದಾಖಲೆಗೈಯುವ ಹೊಸ್ತಿಲಲ್ಲಿ ಇದ್ದಾರೆ. ಒಂದು ವೇಳೆ ಡಬಲ್ಸ್‌ನಲ್ಲಿ ಗೆದ್ದರೆ ವಿಶ್ವದಾಖಲೆಗೈಯುವುದರ ಜತೆ ಡೇವಿಸ್ ಕಪ್ ಇತಿಹಾಸದ ಅತ್ಯಂತ ಯಶಸ್ವಿ ಡಬಲ್ಸ್ ಆಟಗಾರ ಎಂದೆನಿಸಿಕೊಳ್ಳಲಿದ್ದಾರೆ. ಮೊದಲ ದಿನದ ಎರಡು ಸಿಂಗಲ್ಸ್ ಜಯಿಸಿರುವ ಭಾರತ ಶನಿವಾರವೇ ಹೋರಾಟ ಗೆಲ್ಲುವ ಸಾಧ್ಯತೆಯಿದೆ. ಅನುಭವಿ ಪೇಸ್ ಡಬಲ್ಸ್‌ನಲ್ಲಿ ಆಡುವ ಕಾರಣ ಭಾರತ ಸುಲಭ ಜಯದ ನಿರೀಕ್ಷೆಯಲ್ಲಿದೆ.
Related Articles
Advertisement
ಇತ್ತೀಚೆಗಿನ ದಿನಗಳಲ್ಲಿ ಫಾರ್ಮ್ಗೆ ಮರಳಲು ಒದ್ದಾಡು ತ್ತಿರುವ ರಾಮ್‌ಕುಮಾರ್ ಈ ಪಂದ್ಯದಲ್ಲಿ ಉತ್ತಮ ಸರ್ವ್ ನೀಡಿದರಲ್ಲದೇ ರಿಟರ್ನ್ಸ್ ಮತ್ತು ದೀರ್ಘ ರ್ಯಾಲಿಯ ಆಟವಾಡಿ ಪಂದ್ಯ ಗೆದ್ದರು. ನಾಲ್ಕನೇ ಗೇಮ್‌ನಲ್ಲಿ ಸರ್ವೀಸ್ ಬ್ರೇಕ್ ಮಾಡಿದ ರಾಮ್‌ಕುಮಾರ್ ಕೇವಲ ಅರ್ಧ ಗಂಟೆಯಲ್ಲಿ ಮೊದಲ ಸೆಟ್ ಗೆದ್ದಿದ್ದರು.
ದ್ವಿತೀಯ ಮತ್ತು ಮೂರನೇ ಸೆಟ್‌ನಲ್ಲಿ ಸ್ಟಾಥಂ ಪ್ರಬಲ ಹೋರಾಟ ನೀಡಿದರು. ಆದರೆ ರಾಮ್‌ನಾಥನ್ ಅಮೋಘವಾಗಿ ಆಡಿ ಗೆಲುವಿನ ನಗೆ ಚೆಲ್ಲಿದರು.
ಯೂಕಿ ಗೆಲುವುಮೊದಲೆರಡು ಗೇಮ್ ಕಳೆದುಕೊಂಡ ಬಳಿಕ ಪಂದ್ಯದಲ್ಲಿ ಹಿಡಿತ ಸಾಧಿಸಿದ ಯೂಕಿ 5-3 ಮುನ್ನಡೆ ಸಾಧಿಸಿ 47 ನಿಮಿಷಗಳಲ್ಲಿ ಮೊದಲ ಸೆಟ್ ತನ್ನದಾಗಿಸಿಕೊಂಡರು. ದ್ವಿತೀಯ ಸೆಟ್‌ನ ಆರಂಭದಲ್ಲೂ ಯೂಕಿ ಮತ್ತೆ ಎಡವಿದರು. 0-2 ಹಿನ್ನಡೆಯ ಬಳಿಕ ಪ್ರಾಬಲ್ಯ ಸ್ಥಾಪಿಸಲು ಯಶಸ್ವಿಯಾದ ಯೂಕಿ ನೇರ ಸೆಟ್‌ಗಳಿಂದ ಪಂದ್ಯ ಗೆಲ್ಲಲು ಯಶಸ್ವಿಯಾದರು. ಈ ಹೋರಾಟವನ್ನು ಅವರು ಎರಡು ತಾಸು ಮತ್ತು 10 ನಿಮಿಷಗಳಲ್ಲಿ ಗೆದ್ದರು.