ಹೊಸದಿಲ್ಲಿ: ಕ್ರೊವೇಶಿಯಾ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಡೇವಿಸ್ ಕಪ್ ಪಂದ್ಯಾವಳಿಗೆ ಗುರುವಾರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆರು ಸದಸ್ಯರ ಈ ತಂಡದಲ್ಲಿ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಸ್ಥಾನ ಉಳಿಸಿಕೊಂಡಿದ್ದಾರೆ. ರೋಹಿತ್ ರಾಜ್‌ಪಾಲ್ ಆಡದ ನಾಯಕನಾಗಿ ಮುಂದುವರಿದಿದ್ದಾರೆ.
ಮಾ. 6 ಮತ್ತು 7ರಂದು ಕ್ರೊವೇಶಿಯಾದಲ್ಲಿ ಈ ಪಂದ್ಯಾವಳಿ ನಡೆಯಲಿದೆ.
ಕಳೆದ ವರ್ಷ ಡೇವಿಸ್ ಕಪ್ ಸರಣಿಗಾಗಿ ಮಹೇಶ್ ಭೂಪತಿ ಪಾಕಿಸ್ಥಾನಕ್ಕೆ ತೆರಳಲು ನಿರಾಕರಿಸಿದಾಗ ರೋಹಿತ್ ರಾಜ್‌ಪಾಲ್ ಅವರನ್ನು ಡೇವಿಸ್ ಕಪ್ ತಂಡದ ಕಪ್ತಾನನನ್ನಾಗಿ ನೇಮಿಸಲಾಗಿತ್ತು.
ಕ್ರೊವೇಶಿಯಾ ಸವಾಲು ಕಠಿನ
ಕ್ರೊವೇಶಿಯಾ ವಿರುದ್ಧದ ಸ್ಪರ್ಧೆ ಕುರಿತು ಮಾತಾಡಿದ ರೋಹಿತ್ ರಾಜ್‌ಪಾಲ್, “ಇದೊಂದು ಕಠಿನ ಸವಾಲು. ಅವರು 2018ರ ಚಾಂಪಿಯನ್ ಎಂಬುದನ್ನು ಮರೆಯುವಂತಿಲ್ಲ. ಅವರಿಗೆ ತವರಿನ ಲಾಭವೂ ಇದೆ ಎಂದರು.
ಭಾರತ ತಂಡ: ಪ್ರಜ್ಞೇಶ್ ಗುಣೇಶ್ವರನ್, ಸುಮಿತ್ ನಾಗಲ್, ರಾಮ್‌ಕುಮಾರ್ ರಾಮನಾಥನ್, ರೋಹನ್ ಬೋಪಣ್ಣ, ದಿವಿಜ್ ಶರಣ್, ಲಿಯಾಂಡರ್ ಪೇಸ್.
ನಾಯಕ: ರೋಹಿತ್ ರಾಜ್‌ಪಾಲ್.
ಕೋಚ್: ಜೀಶನ್ ಅಲಿ