Advertisement

ಡೇವಿಡ್‌ ವಾರ್ನರ್‌ಗೆ ಬೌನ್ಸರ್‌ ಏಟು

11:27 AM Aug 16, 2017 | Team Udayavani |

ಡಾರ್ವಿನ್‌: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ಡೇವಿಡ್‌ ವಾರ್ನರ್‌ ಅವರಿಗೆ ಬೌನ್ಸರ್‌ ಏಟು ಬಿದ್ದಿದೆ. ಇದರಿಂದ ಅವರು ಪಂದ್ಯ ದಿಂದ ನಿವೃತ್ತರಾಗಿದ್ದಾರೆ.

Advertisement

ಮಂಗಳವಾರ ಡಾರ್ವಿನ್‌ನಲ್ಲಿ ನಡೆದ ದೇಶಿ ತಂಡಗಳ ಅಭ್ಯಾಸ ಪಂದ್ಯ ದಲ್ಲಿ ಈ ಘಟನೆ ಸಂಭವಿಸಿದೆ. ವೇಗಿ ಜೋಶ್‌ ಹ್ಯಾಝಲ್‌ವುಡ್‌ ಅವರ ಬೌನ್ಸರ್‌ ಒಂದನ್ನು ಹುಕ್‌ ಮಾಡುವ ಯತ್ನದಲ್ಲಿ ಚೆಂಡು ವಾರ್ನರ್‌ ಆವರ ಕುತ್ತಿಗೆಗೆ ಒಂದು ಪಾರ್ಶ್ವಕ್ಕೆ ಬಂದು ಆಪ್ಪಳಿಸಿದೆ.  ಕೂಡಲೇ ಮೈದಾನದಲ್ಲಿ ಕುಸಿದ ವಾರ್ನರ್‌, ಅಷ್ಟೇ ಬೇಗ ಚೇತರಿಸಿ ಕೊಂಡು ಎದ್ದು ನಿಂತಿದ್ದಾರೆ. ತಂಡದ ವೈದ್ಯರಾದ ರಿಚರ್ಡ್‌ ಸಾ ಮೈದಾನಕ್ಕೆ ಧಾವಿಸಿ ವಾರ್ನರ್‌ಗೆ ಪ್ರಥಮ ಚಿಕಿತ್ಸೆ ನೀಡಿದರು. ವಾರ್ನರ್‌ ಮತ್ತೆ ಬ್ಯಾಟಿಂಗ್‌ ಮುಂದುವರಿಸಲಿಲ್ಲ. ಆಗ ಅವರು 2 ರನ್‌ ಮಾಡಿದ್ದರಷ್ಟೇ. ಇದು ದ್ವಿತೀಯ ಇನ್ನಿಂಗ್ಸ್‌ ಬ್ಯಾಟಿಂಗ್‌ ಆಗಿತ್ತು. ಮೊದಲ ಸರದಿಯಲ್ಲಿ ವಾರ್ನರ್‌ ಕೇವಲ 4 ರನ್‌ ಮಾಡಿ ಔಟಾಗಿದ್ದರು.

ಬಾಂಗ್ಲಾದೇಶ ಪ್ರವಾಸ ಕೈಗೊಳ್ಳ ಲಿರುವ ಆಸ್ಟ್ರೇಲಿಯ  ಕ್ರಿಕೆಟ್‌ ತಂಡಕ್ಕೆ ಡಾರ್ವಿನ್‌ನಲ್ಲಿ ಡೇವಿಡ್‌ ವಾರ್ನರ್‌ ಇಲೆವೆನ್‌ ಮತ್ತು ಸ್ಟೀವನ್‌ ಸ್ಮಿತ್‌ ಇಲೆವೆನ್‌ ತಂಡಗಳ ನಡುವೆ ತ್ರಿದಿನಅಭ್ಯಾಸ ಪಂದ್ಯವನ್ನು ಆಯೋ ಜಿಸಲಾಗಿತ್ತು. ಪಂದ್ಯದ 2ನೇ ದಿನ ಈ ದುರ್ಘ‌ಟನೆ ಸಂಭವಿಸಿದೆ.

ಇದು ಗಂಭೀರ ಸ್ವರೂಪದ ಏಟಲ್ಲ ಎಂಬುದಾಗಿ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಕುತ್ತಿಗೆ ಭಾಗದಲ್ಲಿ ಸ್ವಲ್ಪ ನೋವು ಹಾಗೂ ಊತ ಇದೆ ಎಂದಿದ್ದಾರೆ. 
ಮತ್ತೂಬ್ಬ ವೇಗಿ ಪ್ಯಾಟ್‌ ಕಮಿನ್ಸ್‌ ಕೂಡ ವಾರ್ನರ್‌ ಆರೋಗ್ಯದಿಂದ ಇದ್ದಾರೆ ಎಂದು ತಿಳಿಸಿದ್ದಾರೆ. ವಾರ್ನರ್‌ ಅಂತಿಮ ದಿನ ಕಣಕ್ಕಿಳಿಯುವರೋ ಎಂಬುದು ಬುಧವಾರ ಬೆಳಗ್ಗೆಯಷ್ಟೇ ತಿಳಿದು ಬರಲಿದೆ.

ವೇತನ ವಿವಾದಗಳನ್ನೆಲ್ಲ ಒಂದು ಹಂತಕ್ಕೆ ಬಗೆಹರಿ ಸಿಕೊಂಡಿರುವ ಆಸ್ಟ್ರೇಲಿಯ ಕ್ರಿಕೆಟಿಗರು ಶುಕ್ರವಾರ ಬಾಂಗ್ಲಾದೇಶಕ್ಕೆ ವಿಮಾನ ಏರಲಿದ್ದಾರೆ. ಈ ಸರಣಿಯ ವೇಳೆ 2 ಟೆಸ್ಟ್‌ ಪಂದ್ಯ ಗಳನ್ನು ಆಡಲಾಗುವುದು. ಇದು 2006ರ ಬಳಿಕ ಬಾಂಗ್ಲಾ ದೇಶಕ್ಕೆ ಆಸ್ಟ್ರೇಲಿಯ ಕೈಗೊಳ್ಳುತ್ತಿರುವ ಮೊದಲ ಪ್ರವಾಸ ಎಂಬುದು ಉಲ್ಲೇಖನೀಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next