Advertisement

ಕಷ್ಟಕ್ಕೆ ಸ್ಪಂದಿಸುವುದು ಮಾನವ ಧರ್ಮ

10:17 AM Aug 12, 2019 | Naveen |

ದಾವಣಗೆರೆ: ಮಾನವ ಸಂಕುಲ ಪ್ರಕೃತಿಮುಖೀ ಜೀವನ ನಡೆಸಿದಾಗ ಮಾತ್ರ ಅತಿವೃಷ್ಟಿ, ಅನಾವೃಷ್ಟಿಯಿಂದ ಪಾರಾಗಲು ಸಾಧ್ಯ ಎಂದು ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

Advertisement

ಭಾನುವಾರ ಶ್ರೀ ಜಯದೇವ ಯೋಗ ಮತ್ತು ಧ್ಯಾನ ಕೇಂದ್ರದ ಯೋಗಬಂಧುಗಳು ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೀಡಿದ ಪರಿಹಾರ ಸಾಮಗ್ರಿ ಕಳುಹಿಸಿ ಕೊಡುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಎಲ್ಲರೂ ಪ್ರಕೃತಿಮುಖೀ ಜೀವನ ನಡೆಸಿದರೆ. ಯಾವುದೇ ಅನಾಹುತ ಸಂಭವಿಸುವುದಿಲ್ಲ. ಆದರೆ, ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಹಾಳು ಮಾಡುತ್ತಿರುವುದರಿಂದ ಇಂತಹ ಅವಘಡಗಳು ಸಂಭವಿಸುತ್ತವೆ ಎಂದು ತಿಳಿಸಿದರು.

ಪ್ರಕೃತಿಯ ಅಸಮತೋಲದಿಂದಾಗಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕಳೆದ ವರ್ಷ ಕೊಡಗಿನಲ್ಲಿ ಅತಿವೃಷ್ಟಿ ಸಂಭವಿತ್ತು. ಈ ಬಾರಿ ರಾಜ್ಯದ ಹೆಚ್ಚಿನ ತಾಲೂಕುಗಳಲ್ಲಿ ಅತಿಯಾದ ಮಳೆಯಿಂದ ಲಕ್ಷಾಂತರ ಜನರು ಸಂಕಷ್ಟ ಎದುರಿಸುವಂತಾಗಿದೆ. ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪರಿಸರ ಸಂರಕ್ಷಣೆಯೊಂದಿಗೆ ಜೀವನ ನಡೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.

ಕಷ್ಟದಲ್ಲಿ ಇರುವವರಿಗೆ ಸ್ಪಂದಿಸುವುದು ಮಾನವ ಧರ್ಮ. ಅಂತಹ ಮಾನವ ಧರ್ಮ ಕಾರ್ಯಕ್ಕೆ ಚಿತ್ರದುರ್ಗದ ಮುರುಘಾ ಶರಣರು ಯಾವತ್ತ್ತೂ ಮುಂದು, ಮಳೆಯಿಂದ ತೊಂದರೆ ಒಳಗಾದ ಅಥಣಿ, ಚಿಕ್ಕೋಡಿ ಸೇರಿದಂತೆ ವಿವಿಧ ನೆರೆ ಸಂತ್ರಸ್ತರ ಬಳಿ ಮುರುಘಾ ಶರಣರು ತೆರಳಿ, ಅವರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ, ಅಗತ್ಯವಾಗಿ ಬೇಕಾದ ಮೂಲ ಸೌಲಭ್ಯಗಳನ್ನು ನೀಡಿ, ಅವರಿಗೆ ಧೈರ್ಯ ತುಂಬಿದ್ದಾರೆ ಎಂದು ತಿಳಿಸಿದರು.

ಜಯದೇವ ಯೋಗ ಮತ್ತು ಧ್ಯಾನ ಕೇಂದ್ರದ ಕಾರ್ಯ ಶ್ಲಾಘನೀಯ. ಕಳೆದ ವ‚ರ್ಷ ಕೊಡಗಿನ ಅತಿವೃಷ್ಟಿಯಿಂದ ತೊಂದರೆಗೆ ಒಳಗಾದ ಜನರ ಸಂಕಷ್ಟಗಳಿಗೆ ಸ್ಪಂದಿಸಲಾಗಿತ್ತು. ಈ ವರ್ಷವೂ ತೊಂದರೆಗೆ ಒಳಗಾದ ಉತ್ತರ ಕರ್ನಾಟಕ ಜನರ ಸಮಸ್ಯೆಗೆ ಸ್ಪಂದಿಸುತ್ತಿರುವುದು ಮಾದರಿಯ ಕಾರ್ಯವಾಗಿದೆ ಎಂದರು.

Advertisement

ಲಯನ್ಸ್‌ ಕ್ಲಬ್‌ ಖಜಾಂಚಿ ಎಸ್‌.ಜಿ.ಉಳುವಯ್ಯ, ಬೆಳ್ಳೂಡಿ ಶಿವಕುಮಾರ್‌, ಶರಣಾರ್ಥಿ ಬಕ್ಕಪ್ಪ, ನಿವೃತ್ತ ಶಿಕ್ಷಕ ಕೆ.ಎಂ. ಉಮಾಶಂಕರ್‌, ಮಂಜಣ್ಣ, ಭಾರತಿ, ನೀಲಮ್ಮ, ಗೌರಮ್ಮ, ಗೌರಮ್ಮ, ಅನಿತಾ, ಸುಲೋಚನಾ, ಮಂಜುಳಾ, ಮಮತಾ, ರತ್ನಾ ವಿ.ಕೇಣಿ, ಗಂಗಾ, ಶರಭೇಶ್ವರ ಭಾರತಿ, ಸ್ವರ್ಣಗಾರ ವಿಶ್ವೇಶ್ವರರಾವ್‌, ಗಾಯತ್ರಿ, ಸೂರಜ್‌, ವಿಶ್ವಾರಾಧ್ಯ, ಕಿರಣ್‌, ಭಾರತಿ, ಗಾಯತ್ರಿ, ಎಲ್.ಎಸ್‌.ಚನ್ನಬಸಪ್ಪ, ಸುಮಾ, ಸೋಮಣ್ಣ, ಮಂಜುನಾಥ ,ಜಿ.ಎಸ್‌. ವೀರಣ್ಣ, ಸುಭಾಷ್‌ ಬಣಗಾರ್‌, ಶಾಂತಕುಮಾರ್‌ ಸೋಗಿ, ರವಿಕುಮಾರ್‌, ಸಂಜಕುಮಾರ್‌, ಸಿದ್ದೇಶ್‌, ಪುಟ್ಟರಾಜು ಇತರರು ಇದ್ದರು.

ಒಂದು ಲಕ್ಷ ರೂ. ಮೌಲ್ಯದ ಸೀರೆಗಳು, ಚೂಡಿದಾರ, ಮಕ್ಕಳ ಬಟ್ಟೆಗಳು, ಗರಂ ಟೋಪಿ, ಲುಂಗಿ ಸೇರಿದಂತೆ ರೊಟ್ಟಿ, ಚಟ್ನಿಪುಡಿ, ಪೇಸ್ಟ್‌ ಸೇರಿದಂತೆ ಮೊದಲಾದ ಅಗತ್ಯ ವಸ್ತುಗಳನ್ನು ಸಂತ್ರಸರಿಗೆ ಕಳಿಸಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next