Advertisement

ತಾಂಡಾಗಳನ್ನು ಕಂದಾಯ ಗ್ರಾಮ ಮಾಡಿ

12:03 PM Feb 15, 2020 | Naveen |

ದಾವಣಗೆರೆ: ಬಂಜಾರ ಸಮಾಜದವರು ಬಿಸಿಲಿನಲ್ಲಿ ಕಟ್ಟಿಗೆ, ಕವಳೆ ಹಣ್ಣು ಮಾರಾಟ ಮಾಡುತ್ತಾ ಕಷ್ಟದ ನಡುವೆಯೂ ಸ್ವಾಭಿಮಾನ ಜೀವನ ನಡೆಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಸಮಾಜದವರು ವಾಸಿಸುವ ತಾಂಡಾಗಳಿಗೆ ಕಂದಾಯ ಗ್ರಾಮ ಮಾನ್ಯತೆ ನೀಡಬೇಕು ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್‌ ಮನವಿ ಮಾಡಿದ್ದಾರೆ.

Advertisement

ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಶುಕ್ರವಾರ ಶ್ರೀ ಸಂತ ಸೇವಾಲಾಲ್‌ ಮಹಾರಾಜರ 281ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಬೇಕು. ಸಮಾಜ ಬಾಂಧವರು ಕಷ್ಟದ ಕಾರಣ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವುದು, ಕೆಲಸಕ್ಕೆ ವಲಸೆ ಹೋಗುವುದು ಇದೆ. ಹಾಗಾಗಿ ಮೂಲಭೂತ ಸೌಲಭ್ಯಗಳ ಕಲ್ಪಿಸಬೇಕು ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಚಿನ್ನಿಕಟ್ಟಿಯಿಂದ ಹೊಸಜೋಗದವರೆಗೆ 55 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ, 71 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆಗೆ ಮುಖ್ಯಮಂತ್ರಿಗಳು ಅನುಮತಿ ನೀಡಬೇಕು. ಸೂರಗೊಂಡನಕೊಪ್ಪ ಇತರೆ ಭಾಗದಲ್ಲಿ ಇರುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕೆರೆ ತುಂಬಿಸುವ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ನೀಡಬೇಕು. ಸೂರಗೊಂಡನಕೊಪ್ಪಕ್ಕೆ ಈಗ ಬಂಜಾರ ಸಮುದಾಯದವರ ಜೊತೆಗೆ ಎಲ್ಲಾ ಸಮುದಾಯದವರು ಬರುತ್ತಾರೆ. ಇದೊಂದು ಪ್ರವಾಸಿ ತಾಣವಾಗುತ್ತಿದೆ. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮ ರೂಪಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next