Advertisement

ದಾವಣಗೆರೆ: ಕಂದಾಯ ಅಧಿಕಾರಿ ಮತ್ತು ಎಸ್‌ಡಿಎ ಲೋಕಾಯುಕ್ತ ಬಲೆಗೆ

11:20 PM Jun 20, 2024 | Team Udayavani |

ದಾವಣಗೆರೆ:ಹಿಟ್ಟಿನ ಗಿರಣಿಯ ಇ-ಸ್ವತ್ತು ಮಾಡಿಕೊಡಲು 15 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ನಗರ ಪಾಲಿಕೆ-1ರ ವಲಯ ಕಚೇರಿಯ ಎಸ್‌ಡಿಎ ಹಾಗೂ ಕಂದಾಯ ಅಧಿಕಾರಿ(ಪ್ರಭಾರ) ಯನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.

Advertisement

ಮಹಾ ನಗರ ಪಾಲಿಕೆ-ವಲಯ 1ರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವೈ.ಲಕ್ಕಪ್ಪ ಹಾಗೂ ಪ್ರಭಾರ ಕಂದಾಯ ಅಧಿಕಾರಿ ಬಿ.ಅನ್ನಪೂರ್ಣ ಲೋಕಾಯುಕ್ತ ಬಲೆಗೆ ಬಿದ್ದವರು.

ಬೇತೂರು ರಸ್ತೆಯ ಇಮಾಂ ನಗರ ವಾಸಿ, ಹಿಟ್ಟಿನ ಗಿರಣಿ ಮಾಲಿಕ ಬಿ.ಚಂದ್ರಶೇಖರ ತಮ್ಮ ಗಿರಣಿ, ವಾಸದ ಮನೆ, ಖಾಲಿ ಜಾಗದ ಅಳತೆ ತಿದ್ದುಪಡಿ ಮತ್ತು ಇ-ಸ್ವತ್ತು ಮಾಡಿಸಲು ಪಾಲಿಕೆ ವಲಯ-1 ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಇ-ಸ್ವತ್ತು ಮಾಡಿಕೊಡಲು ಎಸ್‌ಡಿಎ ಲಕ್ಕಪ್ಪ 15 ಸಾವಿರ ರೂಪಾಯಿಗೆ ಬೇಡಿಕೆ ಇಡಲಾಗಿತ್ತು ಲಂಚ ಕೊಡಲು ಒಪ್ಪದ ಜಾಗದ ಮಾಲೀಕ ಚಂದ್ರಶೇಖರ ಲೋಕಾಯುಕ್ತರಿಗೆ ದೂರು ನೀಡಿದ್ದರು. ಲೋಕಾಯುಕ್ತ ಅಧೀಕ್ಷಕ ಎಂ.ಎಸ್.‌ ಕೌಲಾಪುರೆ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next