ದಾವಣಗೆರೆ: ಭಾನುವಾರದಿಂದ(ಡಿ.1) ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ (ನಗದು ರಹಿತ ಪ್ರಯಣ) ಸೌಲಭ್ಯಕ್ಕೆ ದಾವಣಗೆರೆ ತಾಲೂಕಿನ ಹೆಬ್ಟಾಳು ಟೋಲ್‌ಗೇಟ್‌ನಲ್ಲಿ ಶೇ.30ರಷ್ಟು ವಾಹನಗಳು ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿವೆ. ದಾವಣಗೆರೆ ಜಿಲ್ಲೆಯಲ್ಲಿ ಈ ಹಿಂದಿನ ರಾಷ್ಟ್ರೀಯ ಹೆದ್ದಾರಿ-4 ಈಗ ರಾಷ್ಟ್ರೀಯ ಹೆದ್ದಾರಿ-48 ಆಗಿ ಪರಿವರ್ತನೆ ಗೊಂಡಿದೆ. ಹೆಬ್ಟಾಳು ಟೋಲ್ ಪ್ಲಾಜಾದಲ್ಲಿ ದಿನಕ್ಕೆ ಸರಾಸರಿ 20-25 ಸಾವಿರದಷ್ಟು ವಾಹನ ಸಂಚರಿಸುತ್ತವೆ. ಅವುಗಳಲ್ಲಿ ಈವರೆಗೆ ಶೇ.30 ರಷ್ಟು ವಾಹನಗಳು ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿದ್ದು, ಇನ್ನೂ ಕಾಲಾವಕಾಶ ಇರುವ ಕಾರಣಕ್ಕೆ ಫಾಸ್ಟ್‌ಟ್ಯಾಗ್ ಅಳವಡಿಕೊಳ್ಳುವ ವಾಹನಗಳ ಸಂಖ್ಯೆ ಹೆಚ್ಚಾಗಬಹುದು ಎಂಬುದು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನಿರೀಕ್ಷೆ.
Advertisement
ಡಿ.1ರ ಭಾನುವಾರದಿಂದ ಫಾಸ್ಟ್‌ಟ್ಯಾಗ್ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ ಹೆಬ್ಟಾಳು ಟೋಲ್ ಪ್ಲಾಜಾದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಕಡೆಯ ವಾಹನಗಳಿಗೆ ಪ್ರತ್ಯೇಕವಾಗಿ ಮೂರು ಪಾಯಿಂಟ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿರುವ ವಾಹನಗಳು ತಮಗಾಗಿ ನಿಗದಿಪಡಿಸಿರುವ ಪಾಯಿಂಟ್ ಮೂಲಕ ಸಂಚರಿಸುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಒಂದೊಮ್ಮೆ ಗೊತ್ತಿದ್ದೂ, ಗೊತ್ತಿಲ್ಲದೆಯೋ ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿರದ ವಾಹನಗಳು ಫಾಸ್ಟ್‌ಟ್ಯಾಗ್ ರೀಡರ್ ಪಾಯಿಂಟ್‌ನಲ್ಲಿ ಸಂಚರಿಸಿದರೆ ದುಪ್ಪಟ್ಟು ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ!. ಆ ಬಗ್ಗೆಯೂ ಟೋಲ್ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.
ರಿಂದಲೂ ಫಾಸ್ಟ್‌ಟ್ಯಾಗ್ ಅಳವಡಿಕೆ ನಡೆದಿದೆ. ಆದರೆ, ಕೆಲವಾರು ಕಾರಣಗಳಿಂದ ಜಾರಿಗೆ ಬಂದಿರಲಿಲ್ಲ. ಇ-ಆಡಳಿತದ ಮೂಲಕ ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಸಾಮಾನ್ಯ ಸೇವಾ ಕೇಂದ್ರಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಕೆಲ ಸಮಯದ ನಂತರ ವಾಹನಗಳ ಶೋರೂಂನವರಿಗೆ ಅವಕಾಶ ಮಾಡಿಕೊಡಲಾಯಿತು. ನಿರೀಕ್ಷಿತ ಪ್ರಮಾಣದ ಪ್ರಗತಿ ಸಾಧ್ಯವಾಗಲಿಲ್ಲ. ಸಾಕಷ್ಟು ಹೋರಾಟದ ನಂತರ ಈಗ ಸಾಮಾನ್ಯ ಸೇವಾ ಕೇಂದ್ರಗಳಿಗೆ ಅವಕಾಶ ನೀಡಲಾಗಿದೆ. ಸಾಮಾನ್ಯ ಸೇವಾ ಕೇಂದ್ರಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಅವಕಾಶ ನೀಡುವುದರಿಂದ ಸಾಕಷ್ಟು ಅನುಕೂಲ ಆಗುತ್ತದೆ. ಸ್ಥಳೀಯರೇ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇರುವುದರಿಂದ ವಾಹನ ಮಾಲಿಕರಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಅನುಕೂಲ ಆಗುತ್ತದೆ. ಯಾವುದೇ ಸಂದರ್ಭದಲ್ಲಾದರೂ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಅಲ್ಲದೆ ವಾಹನ ಮಾಲೀಕರು ನೇರ ಸಂಪರ್ಕಕ್ಕೆ ಬರುವುದರಿಂದ ಫಾಸ್ಟ್‌ಟ್ಯಾಗ್ ಬಗ್ಗೆ ಮಾಹಿತಿ, ಅನುಕೂಲ… ಎಲ್ಲವನ್ನೂ ತಿಳಿಸುವ ಮೂಲಕ ಸರ್ಕಾರದ ಯೋಜನೆ ಜಾರಿಗೆ ಬರಲು ನೆರವು ಆಗುತ್ತದೆ ಎನ್ನುತ್ತಾರೆ ಸಾಮಾನ್ಯ ಸೇವಾ ಕೇಂದ್ರದ ಎಂ.ಜಿ. ಶ್ರೀಕಾಂತ್. ಉಚಿತ ಅಲ್ಲವೇ ಅಲ್ಲ: ದಾವಣಗೆರೆಯಲ್ಲಿ ಖಾಸಗಿ ಬ್ಯಾಂಕ್ ಜೊತೆಗೆ ಎರಡು ಸಾಮಾನ್ಯ ಸೇವಾ ಕೇಂದ್ರಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಅವಕಾಶ ನೀಡಲಾಗಿದೆ. ಪ್ರತಿ ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಮುಂದೆ ಬರುತ್ತಿದ್ದಾರೆ. ಈಚೆಗೆ ಮನೆ ಮನೆಗೆ ತೆರಳಿ ಫಾಸ್ಟ್‌ಟ್ಯಾಗ್ ಸೌಲಭ್ಯ ಒದಗಿಸಲಾಗುತ್ತಿದೆ. ಅನೇಕ ವಾಹನ ಮಾಲಿಕರು ಫಾಸ್ಟ್‌ಟ್ಯಾಗ್ ಉಚಿತ ಎಂದೇ ಭಾವಿಸಿದ್ದಾರೆ. ಫಾಸ್ಟ್‌ಟ್ಯಾಗ್ ಉಚಿತವಲ್ಲ. ಕ್ಲಾಸ್-1, ಕ್ಲಾಸ್-2, ಕ್ಲಾಸ್-3, ಕ್ಲಾಸ್-4, ಕ್ಲಾಸ್-5, 2, 3ಆ್ಯಕ್ಸೆಲ್, 16 ವ್ಹೀಲ್…
ಎಲ್‌ಎಂವಿ, ಎಲ್‌ಎಂಜಿ… ಹೀಗೆ ಪ್ರತಿಯೊಂದು ವಾಹನಕ್ಕೆ ನಿಗದಿಪಡಿಸಿರುವ ಫಾಸ್ಟ್‌ಟ್ಯಾಗ್ ದರ ಪ್ರತ್ಯೇಕವಾಗಿ ಪಾವತಿಸಿ, ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳಬೇಕು.
Related Articles
Advertisement