Advertisement
ತಮ್ಮ ಕಚೇರಿ ಸಭಾಂಗಣದಲ್ಲಿ ಭಾರತೀಯ ಜನಗಣತಿ 2021ರ ಪೂರ್ವಭಾವಿಯಾಗಿ ನಡೆಸಬೇಕಾದ ತಯಾರಿ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲು ಏರ್ಪಡಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
ಹೆಚ್ಚಿದ್ದು ಇದಕ್ಕೆ ಅನುಗುಣವಾಗಿ ಬ್ಲಾಕ್ ಗಳನ್ನು ವಿಂಗಡಿಸಿಕೊಳ್ಳಬೇಕು. ಈ ಜನಗಣತಿ ಚುನಾವಣೆ ಜನಸಂಖ್ಯೆಗೂ ಸಂಬಂಧಿ ಸಿದ್ದರಿಂದ ವಾರ್ಡ್, ಬೂತ್‌ಗಳನ್ನು ಬದಲಾಯಿಸದಂತೆ ಗಣತಿ ಪ್ರದೇಶಗಳನ್ನು ವಿಂಗಡಿಸಬೇಕು ಎಂದು
ತಿಳಿಸಿದರು.
Advertisement
ಪ್ರಥಮ ಬಾರಿಗೆ ಜನಗಣತಿಯನ್ನು ಮೊಬೈಲ್ ಆ್ಯಪ್ ಬಳಸಿ ಮಾಡಲಾಗುತ್ತಿದೆ. ಇದು ಮ್ಯಾನುವಲ್‌ಗಿಂತ ಸುಲಭವಾಗಿದ್ದು, ಈ ಗಣತಿ ಆ್ಯಪ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ನಾವು ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ನೀಡುತ್ತೇವೆ. ಮಾಸ್ಟರ್ ಟ್ರೈನರ್ ಈ ಆ್ಯಪ್ ಬಳಕೆ ಬಗ್ಗೆ ತರಬೇತಿ ನೀಡುವರು ಎಂದು ತಿಳಿಸಿದರು.
150 ರಿಂದ 180 ಮನೆಗಳಿಗೆ ಅಥವಾ 650 ರಿಂದ 800 ಜನಸಂಖ್ಯೆಗೆ ಒಬ್ಬ ಗಣತಿದಾರರನ್ನು ನೇಮಿಸಿಬೇಕು. 6 ಜನ ಗಣತಿದಾರರಿಗೆ ಒಬ್ಬ ಸೂಪರ್‌ವೈಸರ್ ನೇಮಿಸಬೇಕಿದ್ದು. ಇವರು ಹೈಸ್ಕೂಲ್ ಶಿಕ್ಷಕರಾಗಿರಬೇಕು. ಬ್ಲಾಕ್ ಗಳಲ್ಲಿ ಒಬ್ಬ ಕಂಪ್ಯೂಟರ್ ಆಪರೇಟರ್ನೇಮಿಸಿಕೊಳ್ಳಬಹುದಾಗಿದೆ. ಗಣತಿಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ನಿಗದಿತ ಸಂಭಾವನೆ ಅದರಲ್ಲೂ ಮೊಬೈಲ್ ಬಳಸಿ ಗಣತಿ ಮಾಡುವವರಿಗೆ ಹೆಚ್ಚಿನ ಸಂಭಾವನೆ ನೀಡಲಾಗುವುದು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಮಾತನಾಡಿ, ಆದಷ್ಟು ಬೇಗ ಚಾರ್ಜ್ ಆಫೀಸರ್‌ಗಳು ಸಭೆ ನಡೆಸಿ, ಕ್ಷೇತ್ರ ಅಧಿಕಾರಿಗಳನ್ನು ನೇಮಿಸಬೇಕು.
ಗ್ರಾಮ ಲೆಕ್ಕಿಗರು, ಪಿಡಿಒ, ಸರ್ವೇಯರ್ ಹಾಗೂ ನಗರ ಪ್ರದೇಶಗಳಲ್ಲಿ ಬಿಲ್ ಕಲೆಕ್ಟರ್, ಅಭಿಯಂತರರು ಗಣತಿ ಬ್ಲಾಕ್‌ಗಳನ್ನು ಗುರುತಿಸಿಕೊಡಬೇಕು. ಗಣತಿದಾರರನ್ನಾಗಿ
ನೇಮಿಸಲು ಗ್ರಾಮ ಲೆಕ್ಕಿಗರು ಗಣಿತ, ಇಂಗ್ಲಿಷ್ ಮತ್ತು ವಿಜ್ಞಾನ ಶಿಕ್ಷಕರ ಪಟ್ಟಿ ಪಡೆದು ನೀಡಬೇಕು. ಎಲ್ಲ ಹಂತದ ಅಧಿಕಾರಿಗಳು/ ಸಿಬ್ಬಂದಿ ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಂಡು, ಸಹಕಾರದೊಂದಿಗೆ ಕೆಲಸ ನಿರ್ವಹಿಸಬೇಕು. ಜನಗಣತಿಗೆ ಎಲ್ಲರೂ
ಪೂರಕ ಸಿದ್ದತೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಮಾಸ್ಟರ್ ಟ್ರೈನರ್ ಎಂ. ಮಂಜುನಾಥ ಸ್ವಾಮಿ, ದಕ್ಷಿಣ ವಲಯ ಕ್ಷೇತ್ರದ ಶಿಕ್ಷಣಾಧಿಕಾರಿ ಬಿ.ಸಿ ಸಿದ್ದಪ್ಪ, ಶೀರಸ್ತೇದಾರ್ ನಾಗಲಿಂಗೇಶ್ವರ, ಜಗಳೂರು ಶೀರಸ್ತೇದಾರ್
ಸುನೀಲ್ ಕುಮಾರ್ ಡಿ.ಆರ್., ಚನ್ನಗಿರಿ ಶೀರಸ್ತೇದಾರ್ ಬಿ.ಎಸ್.ಅರುಣ್‌ಕುಮಾರ್, ಇತರರು ಉಪಸ್ಥಿತರಿದ್ದರು.