ದಾವಣಗೆರೆ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರುಸೇರಿದಂತೆ ಎಲ್ಲ ಭಾರತೀಯರನ್ನುಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದುದಾವಣಗೆರೆಯ ಭಾರತೀಯ ಸೌಹಾರ್ದಸಂಘ ಒತ್ತಾಯಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಸಂಘದ ರಾಷ್ಟ್ರೀಯಅಧ್ಯಕ್ಷ ಎನ್.ಎಂ. ಆಂಜನೇಯಗುರೂಜಿ, ಕನ್ನಡಿಗರು ಸೇರಿದಂತೆಅನೇಕ ಭಾರತೀರು ವಿದ್ಯಾಭ್ಯಾಸ ಇತರೆಕಾರಣಗಳಿಗೆ ಉಕ್ರೇನ್‌ಗೆ ತೆರಳಿದವರುಅಲ್ಲಿ ಸಿಲುಕಿಕೊಂಡಿದ್ದಾರೆ. ಯುದ್ಧದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
ಭಾರತೀಯರನ್ನು ಸುರಕ್ಷಿತವಾಗಿಕರೆತರಲು ಪ್ರಧಾನಿ ಮಂತ್ರಿಯವರುಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಮಾಡಿದರು.ದಾವಣಗೆರೆ ಜಿಲ್ಲೆಯ ಐವರುಸೇರಿದಂತೆ ಬಹಳಷ್ಟು ಜನ ಕನ್ನಡಿಗರೂಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ.ಜಿಲ್ಲಾಡಳಿತ ಸಹ ಎಲ್ಲರನ್ನು ಸುರಕ್ಷಿತವಾಗಿವಾಪಾಸ್ ಕರೆ ತರುವ ನಿಟ್ಟಿನಲ್ಲಿ ಸೂಕ್ತಕ್ರಮ ತೆಗೆದುಕೊಳ್ಳಬೇಕು. ಸಂಘದಎಲ್ಲ ಪದಾಧಿಕಾರಿಗಳು ಉಕ್ರೇನ್‌ನಲ್ಲಿಸಿಲುಕಿಕೊಂಡಿರುವ ಮನೆಗೆ ತೆರಳಿಸಾಂತ್ವನ,ಧೈರ್ಯ ತುಂಬುವ ಕೆಲಸಮಾಡಲಾಗುವುದು ಎಂದು ತಿಳಿಸಿದರು.
ಈಚೆಗೆ ಸಾಕಷ್ಟು ಅಹಿತಕರ ಘಟನೆಗಳುನಡೆಯುತ್ತಿರುವದ ಕಾಣಬಹುದು. ಗಲಭೆ,ಗಲಾಟೆಯಿಂದ ಯಾವುದೇ ಪ್ರಯೋಜನಇಲ್ಲ. ನಾವೆಲ್ಲರೂ ಒಂದು. ದೇಶದಲ್ಲಿಪ್ರತಿಯೊಬ್ಬರು ಕಾನೂನು ಸುವ್ಯವಸ್ಥೆಕಾಪಾಡಿಕೊಳ್ಳಬೇಕು. ಎಲ್ಲ ಜಾತಿ, ಮತಧರ್ಮೀಯರು ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು.
ಸಣ್ಣ ಪುಟ್ಟವಿಷಯಗಳಿಗೆ ತಲೆಕೆಡಿಸಿಕೊಳ್ಳದೆ ತಮ್ಮಕಾಯಕದಲ್ಲಿ ತೊಡಗಿಸಿಕೊಳ್ಳಬೇಕುಎಂದರು.ಸಂಘದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಬುತ್ತಿ ಹುಸೇನ್ ಪೀರ್,ಎಸ್.ಬಿ. ಮಹಬೂಬ್, ಅಂಜುಂಹುಸೇನ್ ಸುದ್ದಿಗೋಷಿzಯಲ್ಲಿದ್ದರು.