Advertisement

ಗಿಡ ನೆಡಿ ಬಹುಮಾನ ಗೆಲ್ಲಿ ಸ್ಪರ್ಧೆ ಫಲಿತಾಂಶ ಪ್ರಕಟ

11:33 AM Jun 21, 2020 | Naveen |

ದಾವಣಗೆರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿ.ಎಸ್‌. ಚನ್ನಬಸಪ್ಪ ಅಂಡ್‌ ಸನ್ಸ್‌ ನಿಂದ ಏರ್ಪಡಿಸಿದ್ದ “ಗಿಡ ನೆಡಿ ಬಹುಮಾನ ಗೆಲ್ಲಿ’ ಸ್ಪರ್ಧೆಯಲ್ಲಿ ದಾವಣಗೆರೆ ಕೆಟಿಜೆ ನಗರದ 16ನೇ ಕ್ರಾಸ್‌ ನಿವಾಸಿ ಮಂಜುನಾಥ್‌, ಸರಸ್ವತಿ ಬಡಾವಣೆಯ ಶ್ವೇತಾ, ಹರಿಹರದ ಅಯ್ಯಪ್ಪ ಕಾಲೋನಿಯ ಕುಮಾರಸ್ವಾಮಿ ಸಾಲಿಮಠ, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶಿರನಹಳ್ಳಿ ಗ್ರಾಮದ ಸುರೇಶ್‌ (ವಿಜಯನಗರ ಶುಗರ್ಸ್‌), ದಾವಣಗೆರೆಯ ಪಿ.ಜೆ. ಬಡಾವಣೆಯ ಕೆ.ಎಂ. ಪ್ರೀತಿಕುಮಾರ್‌ ಬಹುಮಾನ ಗೆದ್ದಿದ್ದಾರೆ.

Advertisement

ಶನಿವಾರ ನಡೆದ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್‌ ಬೊಮ್ಮನಾರ್‌ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತೋಟಗಾರಿಕಾ ಇಲಾಖೆಯಿಂದ ತರಕಾರಿ ಬೀಜಗಳನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬರು ಮನೆಯಲ್ಲಿಯೇ ತರಕಾರಿ ಬೆಳೆಯುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ ಮಾಲೀಕರಾದ ಬಿ.ಎಸ್‌. ಮೃಣಾಲ್‌ ಮಾತನಾಡಿ, ಮನುಷ್ಯ ಹುಟ್ಟಿದಾಗ ಉಸಿರಿನೊಂದಿಗೆ ಜೀವನ ಪ್ರಾರಂಭಿಸುತ್ತಾನೆ. ಸಾಯುವಾಗ ಉಸಿರಿನಿಂದ ಮುಕ್ತಾಯವಾಗುತ್ತಾನೆ. ಅಂತಹ ಅಮೂಲ್ಯವಾದ ಉಸಿರು ಸಿಗುವುದೇ ಗಿಡ ಮತ್ತು ಮರಗಳಿಂದ. ಪ್ರತಿಯೊಬ್ಬರೂ ಗಿಡ, ಮರ ಬೆಳೆಸುವ ಮೂಲಕ ನಾಡನ್ನು ಉಳಿಸಬೇಕು ಎಂದು ಮನವಿ ಮಾಡಿದರು. ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ ಮಾಲೀಕರಾದ ದೀಪಾ ಶಿವಕುಮಾರ್‌, ಗ್ರಾಹಕರು, ವಿಜೇತರು, ಸಿಬ್ಬಂದಿ ವರ್ಗದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next