Advertisement

ದಾವಣಗೆರೆ: ಸಮಾಜಮುಖಿ ಸಂಶೋಧನೆಗೆ ಒತ್ತು ಕೊಡಿ: ಪ್ರೊ| ಇಂದುಮತಿ

05:46 PM Mar 22, 2024 | Team Udayavani |

ಉದಯವಾಣಿ ಸಮಾಚಾರ
ದಾವಣಗೆರೆ: ಸಮಾಜದ ಎಲ್ಲ ವರ್ಗಗಳ ಸಮಗ್ರ ಸುಸ್ಥಿರ ಅಭಿವೃದ್ಧಿಯ ದೂರದೃಷ್ಟಿಯಿಂದ ಕೂಡಿದ ಸಂಶೋಧನೆಗಳಿಗೆ ಸಂಶೋಧನಾ ವಿದ್ಯಾರ್ಥಿಗಳು ಪ್ರಥಮ ಆದ್ಯತೆ ನೀಡಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ| ಎಸ್‌. ಇಂದುಮತಿ ಕರೆ ನೀಡಿದರು.

Advertisement

ನವದೆಹಲಿಯ ಐಸಿಎಸ್‌ಎಸ್‌ ಆರ್‌ ಪ್ರಾಯೋಜಕತ್ವದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಯನ
ವಿಭಾಗದ ವತಿಯಿಂದ ಗುರುವಾರ ನಡೆದ ಯುವ ಪ್ರಾಧ್ಯಾಪಕರ ಸಾಮರ್ಥ್ಯವೃದ್ಧಿ ಮತ್ತು ಸಂಶೋಧನಾ ವಿನ್ಯಾಸ ಹಾಗೂ ದತ್ತಾಂಶ ವಿಶ್ಲೇಷಣೆ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಅಭಿವೃದ್ಧಿ ಅನುಷ್ಠಾನದಲ್ಲಿ ಸಂಶೋಧನೆಗಳ ಶಿಫಾರಸುಗಳು, ವಿಪುಲ ಅವಕಾಶ ಪಡೆಯುವಂತಾಗಬೇಕು. ಪ್ರಸ್ತುತ ಮಾತ್ರವಲ್ಲ, ಭವಿಷ್ಯದ ದೃಷ್ಟಿಯಿಂದ ಸಂಶೋಧನೆಗಳು ನಡೆಯುವಂತಾಗಬೇಕು.

ಸದಾ ಸಮಾಜಮುಖಿ ಸಂಶೋಧನೆಗಳು ದೇಶದ ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಸ್ಪ ಬೆಳವಣಿಗೆಗೆ ಪೂರಕವಾಗಿರಬೇಕು. ಅತಿ ಮುಖ್ಯವಾಗಿ ಪರಿಸರವನ್ನು ರಕ್ಷಿಸುವ, ಜನರನ್ನು ಸಂಕಷ್ಟದಿಂದ ಪಾರು ಮಾಡುವ ಜೊತೆಗೆ ಸ್ವಾವಲಂಬನೆಯ ಬದುಕಿಗೆ ಪ್ರೇರೇಪಿಸುವ ನಿಟ್ಟಿನಲ್ಲಿ ಯೋಜನೆಗಳು ಸಿದ್ಧವಾಗಬೇಕು. ಯಾವುದೇ ಸಂಶೋಧನೆಗೆ ಸಂಗ್ರಹಿಸುವ ದತ್ತಾಂಶಗಳು ವಾಸ್ತವ ನೆಲೆಯನ್ನು ಅರ್ಥೈಸುವಂತಿರಬೇಕು. ಸಮಸ್ಯೆಯ ಮೂಲವನ್ನು ಅರ್ಥ ಮಾಡಿಕೊಂಡು ಪರಿಹಾರ
ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ತಂತ್ರಾಂಶಗಳು ಜನಸ್ನೇಹಿಯಾಗಿವೆ. ತಂತ್ರಜ್ಞಾನ ಮತ್ತು ತಂತ್ರಾಂಶಗಳು
ಸಂಶೋಧನೆಯ ಮಾಹಿತಿ ಸಂಗ್ರಹ ಹಾಗೂ ಫಲಿತಾಂಶ ಪಡೆಯಲು ಸಹಕಾರಿಯಾಗಿವೆ. ಸಂಶೋಧನಾರ್ಥಿಗಳು ಅಧ್ಯಯನ,
ಸಂಶೋಧನೆಯ ಜೊತೆಗೆ ತಂತ್ರಜ್ಞಾನ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮ ಗುಣಮಟ್ಟದ ಮತ್ತು
ಮೌಲ್ಯವ ರ್ಧಿತ ಫಲಿತಾಂಶವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್‌ ಸಾಕ್ಷರತೆ ಪ್ರಭಾವ ಹೆಚ್ಚಾಗುತ್ತಿದೆ.

ಇದು ಡಿಜಿಟಲ್‌ ಸಾಕ್ಷರತೆಯು ಅಂತರವನ್ನು ಹೆಚ್ಚಿಸುತ್ತಿದೆ. ಇದು ಬೆಳವಣಿಗೆಯ ವೇಗದ ಮೇಲೂ ಪರಿಣಾಮ ಬೀರುವ ಸಾಧ್ಯತೆ
ಹಿನ್ನೆಲೆಯಲ್ಲಿ ಸಂಶೋಧನೆ, ಅಧ್ಯಯನ ಅವಲೋಕನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ಬಿ.ಡಿ. ಕುಂಬಾರ ಮಾತನಾಡಿ, ಸುಸ್ಥಿರತೆಯೊಂದಿಗೆ ನಾವೀನ್ಯತೆಯನ್ನೂ ಭವಿಷ್ಯದ ಚಿಂತನೆಯ ಪರಿಕಲ್ಪನೆಗಳ ಶ್ರೇಣಿಯನ್ನು ಪರಿಶೊಧೀಸುತ್ತವೆ.

Advertisement

ಹೊಸತನ ರೂಪಿಸುವ ಜೊತೆಗೆ ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ ಪ್ರಜ್ಞೆಯನ್ನೂ ಬೆಳೆಸಲು ಜಾಗೃತಿಯ ಆಂದೋಲನ
ಆಗಬೇಕಾಗಿದೆ. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ, ಕೌಶಲ್ಯಗಳ ಕೊರತೆಗಳು ತೀವ್ರ ಹಿನ್ನಡೆಗೆ ಕಾರಣವಾಗುತ್ತಿವೆ. ಉದ್ಯೋಗಾಧಾರಿತ ಶಿಕ್ಷಣ ಮತ್ತು ಜೀವನಾಧಾರಿತ ಶಿಕ್ಷಣದ ಪರಿಕಲ್ಪನೆ ಯನ್ನು ಅರ್ಥ ಮಾಡಿಸಬೇಕಾಗಿದೆ. ವಾಸ್ತವದ ನೆಲೆಯಲ್ಲಿ ನಿಂತು ಭವಿಷ್ಯವನ್ನು ಕಟ್ಟುವ ಕೆಲಸ  ಆಗಬೇಕಾಗಿದೆ ಎಂದು ಆಶಿಸಿದರು. ಕಾರ್ಯಕ್ರಮದ ಸಂಯೋಜಕ ಹಾಗೂ
ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ| ಹುಚ್ಚೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಹಿರಿಯ
ಪ್ರಾಧ್ಯಾಪಕರಾದ ಪ್ರೊ| ಕೆ.ಬಿ. ರಂಗಪ್ಪ, ಪ್ರೊ| ಎಸ್‌. ಸುಚಿತ್ರಾ, ಪ್ರೊ| ಆರ್‌. ಮಾದಪ್ಪ ಇತರರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next