Advertisement

ಈದ್‌ ಮಿಲಾದ್‌ ಸಂಭ್ರಮ

11:27 AM Nov 11, 2019 | Naveen |

ದಾವಣಗೆರೆ: ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮಹಮ್ಮದ್‌ ಪೈಗಂಬರ್‌ರವರ 1494ನೇ ಜನ್ಮ ದಿನದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಭಾನುವಾರ ಅತ್ಯಂತ ಸಂಭ್ರಮದಿಂದ ಜಸ್ನೆ ಈದ್‌ ಮಿಲಾದ್‌ ಉನ್ನದಿ ಆಚರಿಸಲಾಯಿತು.

Advertisement

ಆಜಾದ್‌ ನಗರದಲ್ಲಿರುವ ಈದ್‌ ಮಿಲಾದ್‌ ಕಮಿಟಿ ಕಚೇರಿ ಎದುರು ವಿಶೇಷ ಫಾತೇಹಖಾನಿ… ಓದುವ ಮೂಲಕ ಭವ್ಯ ಈದ್‌ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈದ್‌ ಮಿಲಾದ್‌ ಕಮಿಟಿ ಕಚೇರಿ ಎದುರಿನಿಂದ ಪ್ರಾರಂಭವಾದ ಮೆರವಣಿಗೆ ಅಹಮ್ಮದ್‌ನಗರ, ಚಾಮರಾಜ ಪೇಟೆ, ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ, ಬಾರ್‌ಲೈನ್‌ ರಸ್ತೆ, ಅರುಣಾ ಚಿತ್ರಮಂದಿರದ ವೃತ್ತ, ಹಳೆ ಪಿಬಿ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಕೆ.ಆರ್‌. ರಸ್ತೆ ಮೂಲಕ ಮಾಗಾನಹಳ್ಳಿ ರಸ್ತೆಯಲ್ಲಿರುವ ಮಹಮ್ಮದ್‌ ಅಲಿ ಜೋಹರ್‌ ನಗರದಲ್ಲಿನ ಈದ್‌ ಮಿಲಾದ್‌ ಮೈದಾನದಲ್ಲಿ ವಿಶೇಷ ಫಾತೇಹಖಾನಿ ಮೂಲಕ ಮುಕ್ತಾಯವಾಯಿತು.

ವಿನೋಬ ನಗರದಿಂದ ಪ್ರಾರಂಭವಾದ ಈದ್‌ ಮೆರವಣಿಗೆ ಅರುಣಾ ಚಿತ್ರಮಂದಿರ ವೃತ್ತದಲ್ಲಿ ಮುಖ್ಯ ಮೆರವಣಿಗೆ ಸೇರಿ ಮುಂದೆ ಸಾಗಿತು. ಕೆಟಿಜೆ ನಗರ 8 ನೇ ಕ್ರಾಸ್‌ನಿಂದ ಪ್ರಾರಂಭವಾದ ಮೆರವಣಿಗೆ ಶಿವಪ್ಪಯ್ಯ ವೃತ್ತ, ಅಂಬೇಡ್ಕರ್‌ ವೃತ್ತ, ಜಯದೇವ ವೃತ್ತ, ಮಹಾತ್ಮ ಗಾಂಧಿ ವೃತ್ತದಲ್ಲಿ ಮುಖ್ಯ ಮೆರವಣಿಗೆ ಕೂಡಿಕೊಂಡಿತು.

ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಜನಸಾಗರವೇ ಹರಿದು ಬಂತು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಮೆರವಣಿಗೆ ಸಾಗಿ ಬಂದಿತು. ಮೆರವಣಿಗೆ ಸಾಗಿ ಬರುವ ಅಕ್ಕಪಕ್ಕದ ವೃತ್ತ, ಪ್ರಮುಖ ಸ್ಥಳಗಳಲ್ಲಿ ತಂಪು ಪಾನೀಯ, ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು, ಮಕ್ಕಳು ಈದ್‌ ಮೆರವಣಿಗೆ ವೈಭವವನ್ನು ಕಣ್ತುಂಬಿಕೊಂಡರು.

ಮೆರವಣಿಗೆಯಲ್ಲಿ ಅತ್ಯಾಕರ್ಷಕ ಗುಂಬಜ್‌ಗಳು ಕಂಡು ಬಂದವು. ಪ್ರಮುಖ ಸ್ಥಳದಲ್ಲಿ ದತ್‌… ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ಈದ್‌ ಮೆರವಣಿಗೆ ಸಾಗಿ ಬಂದ ಚಾಮರಾಜಪೇಟೆ ವೃತ್ತದಲ್ಲಿ ರಾಷ್ಟ್ರಧ್ವಜ ರಾರಾಜಿಸಿದ್ದು ದೇಶಪ್ರೇಮದ ಪ್ರತೀಕವಾಗಿತ್ತು. ಹಿಂದೂ ಸಮಾಜದ ಮುಖಂಡರು ಸಹ ಈದ್‌ ಮೆರವಣಿಗೆ ಚಾಲನೆ ಸಂದರ್ಭದಲ್ಲಿದ್ದರು.

Advertisement

ಅತ್ಯಂತ ಶಾಂತಿಯುತವಾಗಿ ಸಡಗರ, ಸಂಭ್ರಮದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ನಡೆಯಿತು. ಮೆರವಣಿಗೆ ಹಿನ್ನೆಲೆಯಲ್ಲಿ ಸಾಕಷ್ಟು ಬಂದೋಬಸ್ತ್ಮಾ ಡಲಾಗಿತ್ತು. ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಮಾಡಲಾಗಿತ್ತು. 50 ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ,ವಿಧಾನ ಪರಿಷತ್‌ ಸದಸ್ಯ ಕೆ. ಅಬ್ದುಲ್‌ ಜಬ್ಟಾರ್‌, ಈದ್‌  ಲಾದ್‌ ಕಮಿಟಿ ಅಧ್ಯಕ್ಷ ಖಾಜಿ ಅತಾವುಲ್ಲಾ ರಜ್ವಿ, ಯಾಸೀನ್‌ಪೀರ್‌ ರಜ್ವಿ, ಮುಖಂಡರಾದ ಸಾದಿಕ್‌ ಪೈಲ್ವಾನ್‌, ಹಿಂದೂ ಸಮಾಜದ ಮುಖಂಡ ಕೆ.ಬಿ. ಶಂಕರನಾರಾಯಣ, ಅಯೂಬ್‌ ಪೈಲ್ವಾನ್‌, ಸೈಯದ್‌ ಸೈಪುಲ್ಲಾ, ಅಲ್ಲಾವಲಿ ಗಾಜಿಖಾನ್‌, ಡಿ. ಅಸ್ಲಾಂಖಾನ್‌, ಎಸ್‌.ಎಂ. ಗೌಸ್‌, ಜೆ. ಅಮಾನುಲ್ಲಾ ಖಾನ್‌, ಎಂ. ಟಿಪ್ಪುಸುಲ್ತಾನ್‌, ಸೈಯದ್‌ ಶಾಹೀನ್‌, ಕೋಳಿ ಇಬ್ರಾಹಿಂ, ಅಬ್ದುಲ್‌ ಲತೀಫ್‌, ಟಾರ್ಗೆಟ್‌ ಅಸ್ಲಾಂ, ಎ.ಬಿ. ರಹೀಂಸಾಬ್‌, ಜಬೀವುಲ್ಲಾ, ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next