ದಾವಣಗೆರೆ: ಬೆಂಗಳೂರು ಮೂಲದ ಪ್ರೇಮಿಗಳಿಬ್ಬರು ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ನಾಗರತ್ನ ಮತ್ತು ಚರಣ್ ಆತ್ಮಹತ್ಯೆ ಮಾಡಿಕೊಂಡಿರುವರು ಎಂದು ತಿಳಿದು ಬಂದಿದೆ. ಇಬ್ಬರು ನಾಪತ್ತೆ ಆಗಿದ್ದ ಬಗ್ಗೆ ಬೆಂಗಳೂರಿನ ರಾಜ ಗೋಪಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಮಾಹಿತಿ ನೀಡಿರುವ ಎಸ್‍ಪಿ ಸಿ.ಬಿ.ರಿಷ್ಯಂತ್, ನಾಗರತ್ನ ಎನ್ನುವ ಮಹಿಳೆ ಪ್ರಸನ್ನ ಎನ್ನುವ ವ್ಯಕ್ತಿಯ ಜತೆ ಮದುವೆ ಆಗಿದ್ದು, ಚರಣ್ ಎನ್ನುವ ಹುಡುಗನೊಂದಿಗೆ ಪ್ರೀತಿಯಲ್ಲಿ ಬಿದ್ದ ಕಾರಣ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದ ಕೆರೆಯಲ್ಲಿ ಬಿದ್ದು ಮೃತ ಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಬ್ಬರೂ ವೇಲ್ ಸುತ್ತಿಕೊಂಡು ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ನೀರಿಗೆ ಬೀಳುವ ಮುನ್ನ ನೀರಿನಲ್ಲಿ ಆಟ ಆಡುತ್ತಿದ್ದ ವ್ಯಕ್ತಿಯೊಬ್ಬ ನೋಡಿದ್ಧಾರೆ. ಬೆಂಕಿಕೆರೆ ಕೆರೆಯಲ್ಲಿ ಇಬ್ಬರ ಮೃತದೇಹ ಗುರುವಾರ ದೊರೆತಿದೆ ಎಂದು ತಿಳಿಸಿದ್ದಾರೆ.
ನಾಗರತ್ನ ಆಧಾರ್ ಕಾರ್ಡ್ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚರಣ್ ಆಧಾರ್ ಕಾರ್ಡು ಮಾಡಿಸಲು ಬಂದಾಗ ಚರಣ್ ಹಾಗೂ ನಾಗರತ್ನ ಇಬ್ಬರು ಪರಿಚಯವಾಗಿದ್ದು, ನಂತರ ಪ್ರೀತಿಗೆ ತಿರುಗಿ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚರಣ್ ಎನ್ನುವ ವ್ಯಕ್ತಿ ಟಿವಿಎಸ್ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ನಾಗರತ್ನಳ ಗಂಡ ಪೀಣ್ಯದ ಕೈಗಾರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಂತರ ಸತ್ಯಾಂಶ ತಿಳಿಯಲಿದೆ ಎಂದು ತಿಳಿಸಿದ್ದಾರೆ.