Advertisement

ವಿವಿಧೆಡೆ ಬಸವಣ್ಣನ ಸ್ಮರಣೆ

11:40 AM Apr 27, 2020 | Naveen |

ದಾವಣಗೆರೆ: ಪ್ರತಿಯೊಬ್ಬರು ನಿಸ್ವಾರ್ಥ ಕಾಯಕದ ಮೂಲಕ ದೇವರನ್ನು ಕಾಣಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ತಿಳಿಸಿದರು.

Advertisement

ಭಾನುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ದಿನದಲ್ಲಿ ಒಂದು ನಿಮಿಷವಾದರೂ ಬಸವಣ್ಣನವರಾಗುವ ಪ್ರಯತ್ನವನ್ನು ನಾವೆಲ್ಲ ಮಾಡಬೇಕು ಎಂದರು. ಮನಸ್ಸಿನಲ್ಲಿ ಸ್ವಾರ್ಥ ಮತ್ತು ದ್ವೇಷ, ಅಸೂಯೆ ಇಟ್ಟುಕೊಂಡು ಎಷ್ಟು ಪೂಜೆ ಮಾಡಿದರೂ ಯಾವುದೇ ಪ್ರ ಪ್ರಯೋಜನ ಇಲ್ಲ. ಬದಲಾಗಿ ಒಳ್ಳೆಯ ಮನದಿಂದ ಪೂಜೆ ಮಾಡಬೇಕು. ದಾವಣಗೆರೆಯವರೇ ಆದ ಹಿರಿಯರಾದ ಹರ್ಡೇಕರ್‌ ಮಂಜಪ್ಪನವರು ಆರಂಭಿಸಿದ ಬಸವ ಜಯಂತಿಯನ್ನು ದಾವಣಗೆರೆಯಲ್ಲೇ ಸರಳವಾಗಿ ಆಚರಿಸುತ್ತಿರುವುದು ಹಾಗೂ ಇಲ್ಲಿ ಸೇವೆ ಸಲ್ಲಿಸುತ್ತಿರುವುದು ಕೂಡ ನನ್ನ ಸೌಭಾಗ್ಯ ಎಂದರು.

ಬಸವ ಬಳಗದ ಸಂಚಾಲಕ ಸಿದ್ದರಾಮಣ್ಣ ಮಾತನಾಡಿ, ನಾವೆಲ್ಲಾ ಬಸವನ ಹೃದಯ ಬಳ್ಳಿಗಳು. ಜಗತ್ತಿಗೇ ಬೆಳಕು ನೀಡಿದ ಜಗಜ್ಯೋತಿ ಬಸವಣ್ಣನವರು ನುಡಿದಂತೆ ನಡೆದ ಮಹಾನ್‌ ಚೇತನ. ಎಲ್ಲ ಜಾತಿ, ಧರ್ಮ, ಮತದವರನ್ನು ಒಟ್ಟುಗೂಡಿಸಿ ಸಮಾನತೆಯ ಎತ್ತಿ ಹಿಡಿದವರು. ಕಾಯಕದಲ್ಲಿ ದೇವರನ್ನು ಕಂಡು ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರು ನಮ್ಮ ನಿಮ್ಮೆಲ್ಲರೂ ಮಧ್ಯೆಯೂ ಇರಬೇಕು. ಎಲ್ಲಿ ನೋಡಿದರಲ್ಲಿ ಬಸವಣ್ಣ ಕಾಣಬೇಕು ಎಂದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ, ಬಸವ ಬಳಗದ ಎಚ್‌.ಎಂ. ಸ್ವಾಮಿ, ಮಹಾಂತೇಶ್‌ ಅಗಡಿ, ರೈತ ಮುಖಂಡ ಬಲ್ಲೂರು ರವಿಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಕೆ.ಎಸ್‌. ಗೋವಿಂದರಾಜ್‌, ಬಸವ ಬಳಗದ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next