Advertisement

ದಾವಣಗರೆ: ಪೊಲೀಸ್ ಭದ್ರತೆಯಲ್ಲಿ ಬಸ್‌ ಸಂಚಾರ ಆರಂಭ; 3 ದಿನದಿಂದ 1.20 ಕೋಟಿ ರೂ. ನಷ್ಟ

03:05 PM Dec 14, 2020 | Mithun PG |

 

Advertisement

ದಾವಣಗರೆ: ನಗರದಲ್ಲಿ ಪೊಲೀಸ್ ಭದ್ರತೆಯಲ್ಲಿ ಸೋಮವಾರ ಬಸ್‌ಗಳ ಸಂಚಾರ ಆರಂಭವಾಗಿದೆ. ಮಧ್ಯಾಹ್ನದವರೆಗೆ ರಾಣೇಬೆನ್ನೂರು, ಚಿತ್ರದುರ್ಗ ಹಾಗೂ ಹರಿಹರ ಪಟ್ಟಣಗಳಿಗೆ ತಲಾ ಎರಡು ಹಾಗೂ ಹರಪನಹಳ್ಳಿಗೆ ಒಂದು ಸೇರಿ 7 ಬಸ್‌ಗಳು ಸಂಚರಿಸಿದವು ಎಂದು ವರದಿಯಾಗಿದೆ.

ಬಸ್ ಸಂಚಾರ ಆರಂಭವಾಗುತ್ತಿರುವ ಸುದ್ದಿ ತಿಳಿದು ವಿವಿಧ ನಗರ ಹಾಗೂ ಪಟ್ಟಣಗಳಿಗೆ ತೆರಳಲು ಜನರು ನಿಲ್ದಾಣಗಳತ್ತ ಬರುತ್ತಿದ್ದು, ಕೆಲವು ಪ್ರಯಾಣಿಕರು ಬೆಳಿಗ್ಗೆಯಿಂದ ಕಾದು ಕುಳಿತಿದ್ದಾರೆ. ಆದರೆ ನಿಗದಿತ ಸಮಯಕ್ಕೆ ಬಸ್‌ಗಳು ಹೊರಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ದಾವಣಗೆರೆ 12 ಹಾಗೂ ಹರಿಹರ ಘಟಕಗಳ 1,132 ನೌಕರರಲ್ಲಿ ಕೇವಲ 14 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾನುವಾರ ರಾತ್ರಿ ಬೆಂಗಳೂರು, ಕಲಬುರ್ಗಿ, ರಾಯಚೂರು, ಹುಮ್ನಾಬಾದ್‌ಗಳಿಗೆ 7 ಬಸ್‌ಗಳು ಸಂಚರಿಸಿವೆ.  ಬೆಳಿಗ್ಗೆಯಿಂದಲೇ ಬಸ್ ಸಂಚಾರ ಆರಂಭವಾಗಿದ್ದು, ಯಾವುದೇ ತೊಂದರೆಯಾಗಿಲ್ಲ. ಚಾಲಕರು ಬಂದ ನಂತರ ‍ಪ್ರಯಾಣಿಕರ ಅಗತ್ಯಗಳನ್ನು ನೋಡಿಕೊಂಡು ಬಸ್‌ಗಳನ್ನು ಕಳುಹಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ತಿಳಿಸಿದರು.

ದಿನಕ್ಕೆ ₹40 ಲಕ್ಷದಂತೆ ಮೂರು ದಿವಸದಿಂದ ₹1.20 ಕೋಟಿ ನಷ್ಟವಾಗಿದೆ. ಚಾಲಕರು ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಸಂಜೆಯ ವೇಳೆಗೆ ಎಲ್ಲವೂ ಸರಿಹೋಗುವ ನಿರೀಕ್ಷೆ ಇದೆ  ಎಂದು ಸಿದ್ದೇಶ್ವರ್ ಈ ವೇಳೆ  ತಿಳಿಸಿದರು.

Advertisement

ಇದನ್ನೂ ಓದಿ: ಮುಗ್ಧರ ಬದುಕಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಚೆಲ್ಲಾಟ: ಸಚಿವ ಸೋಮಣ್ಣ ವಾಗ್ದಾಳಿ

Advertisement

Udayavani is now on Telegram. Click here to join our channel and stay updated with the latest news.

Next