Advertisement

ಪರೀಕ್ಷೆ ಮುಗಿದ 2 ದಿನದಲ್ಲಿ ಫಲಿತಾಂಶ ಪ್ರಕಟ!

04:32 PM Oct 28, 2020 | Suhan S |

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯವು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆ ಮುಗಿದ 48 ಗಂಟೆಗಳಲ್ಲಿ ಮೌಲ್ಯಮಾಪನ ಮುಗಿಸಿ, ಇದಾದ ಕೇವಲ ಎರಡೇ ಎರಡು ತಾಸಿನಲ್ಲಿಯೇ ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದೆ. ಫಲಿತಾಂಶದ ಜತೆಗೆ ಡಿಜಿಟಲ್‌ ಅಂಕಪಟ್ಟಿಯನ್ನೂ ಒದಗಿಸಿದ್ದು ವಿಶೇಷವಾಗಿದೆ.

Advertisement

ಕೋವಿಡ್ ವೈರಸ್‌ ದಾಳಿಯಿಂದ ಎದುರಾದ ಹಲವು ಸಂಕಷ್ಟ, ಅಡೆತಡೆಗಳ ನಡುವೆಯೂ ವಿವಿ ಸೆಪ್ಟೆಂಬರ್‌ 14ರಿಂದ ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಿತು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂತಿಮ ವರ್ಷದ ಜೊತೆಗೆ ಹಿಂಬಾಕಿ ಪತ್ರಿಕೆಗಳಿಗೂ ಪರೀಕ್ಷೆ ಸಹ ನಡೆಸಿತು. ಅಕ್ಟೋಬರ್‌ 23ಕ್ಕೆ ಎಲ್ಲ ಪರೀಕ್ಷೆಗಳು ಮುಗಿದು, ಈಗ ಫಲಿತಾಂಶವನ್ನೂ ಪ್ರಕಟಿಸಿದೆ. ಕೆಲವು ವಿಭಾಗಗಳ ಪರೀಕ್ಷಾ ಕಾರ್ಯ ಮುಗಿದ ಮರುದಿನವೇ ಫಲಿತಾಂಶವನ್ನೂ ಪ್ರಕಟಿಸಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕೆ, ಉದ್ಯೋಗಕ್ಕೆ ಸೇರಲು ನೆರವಾಗಿದೆ.

ಫಲಿತಾಂಶ ವಿವರ.. : ಸ್ನಾತಕೋತ್ತರ ಅಧ್ಯಯನ ಪರೀಕ್ಷೆಗೆ ಒಟ್ಟು 2211 ವಿದ್ಯಾರ್ಥಿಗಳು ಹಾಜರಾಗಿದ್ದು ಸರಾಸರಿ ಶೇ. 95ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ನಿಕಾಯದಲ್ಲಿ 707, ವಾಣಿಜ್ಯ ನಿಕಾಯದಲ್ಲಿ 871 ಮತ್ತು ಕಲಾ ನಿಕಾಯದಲ್ಲಿ 633 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ವಿಶ್ವವಿದ್ಯಾನಿಲಯದಲ್ಲಿ ಈ ಬಾರಿ ಅಂತಿಮ ವರ್ಷದ ಸ್ನಾತಕಪರೀಕ್ಷೆಗೆ ಒಟ್ಟು 44651 ವಿದ್ಯಾರ್ಥಿಗಳು ಹಾಜರಾಗಿದ್ದು, ಸರಾಸರಿ ಶೇ.72ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ 86, ವಾಣಿಜ್ಯ ವಿಭಾಗದಲ್ಲಿ ಶೇ 79ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಿಜ್ಞಾನ ವಿಭಾಗದಲ್ಲಿಶೇ.62ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಿಂಬಾಕಿಉಳಿಸಿಕೊಂಡಿದ್ದ ಒಟ್ಟು 34206 ವಿದ್ಯಾರ್ಥಿಗಳು ಪರೀಕ್ಷೆಗೆಹಾಜರಾಗಿದ್ದರು. ಇದರಿಂದಾಗಿ 33845 ಸ್ನಾತಕ ಪದವಿಯವಿದ್ಯಾರ್ಥಿಗಳು ಹಾಗೂ 361 ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 121 ಕಾಲೇಜುಗಳು ಹಾಗೂ ಒಂದು ಸಂಯೋಜಿತ ಕಾಲೇಜು ಇದೆ. ಸ್ನಾತಕ ಪದವಿಯಲ್ಲಿ ಕಲೆ, ವಿಜ್ಞಾನ, ವಾಣಿಜ್ಯ, ಬಿಬಿಎ, ಬಿಬಿಎಂ, ಬಿಸಿಎ, ಬಿಇಡಿ, ಬಿಬಿಎ, ಬಿಎಸ್ಸಿ ಹಾಸ್ಪಿಟಾಲಿಟಿ, ಬಿಪಿಇಡಿ, ಬಿಎಸ್‌ ಡಬ್ಲ್ಯು ವಿಭಾಗದಲ್ಲಿ ಪ್ರತ್ಯೇಕ ಪರೀಕ್ಷೆ ನಡೆದಿವೆ. ಇನ್ನು ಸ್ನಾತಕೋತ್ತರ ಪದವಿಯಲ್ಲಿ ನಾಲ್ಕು ನಿಕಾಯಗಳ 25 ವಿಭಾಗಗಳಲ್ಲೂ ಏಕಕಾಲಕ್ಕೆ ಪರೀಕ್ಷೆ ನಡೆಸಲಾಗಿದೆ.

Advertisement

ಪರೀಕ್ಷೆ ನಡೆದ ತಕ್ಷಣ ಪತ್ರಿಕೆಗಳನ್ನು ಗಂಟುಕಟ್ಟಿ ಮೌಲ್ಯಮಾಪನ ಕೇಂದ್ರಕ್ಕೆ ರವಾನಿಸಲಾಗಿತ್ತು.ಪತ್ರಿಕೆಗಳು ಕಚೇರಿ ಸೇರಿದ ತಕ್ಷಣ ಡಿಕೋಡಿಂಗ್‌ ಮಾಡಿಮೌಲ್ಯಮಾಪನಕ್ಕೆ ಒದಗಿಸಲಾಗುತ್ತಿತ್ತು .ಪರೀಕ್ಷೆಯಸಂದರ್ಭದಲ್ಲಿಯೇ ಪ್ರಾಯೋಗಿಕ ಪರೀಕ್ಷೆಯನ್ನೂ ಮಾಡಲಾಗಿದೆ. ಮೌಲ್ಯಮಾಪನ ಮುಗಿಸಿದ ನಂತರ ಉತ್ತರ ಪತ್ರಿಕೆಗಳನ್ನು ಡಿಕೋಡಿಂಗ್‌ ಮಾಡಿ, ದಾಖಲೆಗಳನ್ನು ಪರಿಶೀಲಿಸಿ, ವåತ್ತೂಮ್ಮೆ ಅವಲೋಕನ ಮಾಡಿ ಕೇವಲ ಎರಡು ಗಂಟೆಗಳಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ.  ಪ್ರೋ| ಅನಿತಾ, ಕುಲಸಚಿವೆ, ದಾವಣಗೆರೆ ವಿವಿ

ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಸಾಕಾರ ನೀಡಿ, ಉತ್ತಮ ಭವಿಷ್ಯಕ್ಕೆ ದಾರಿತೋರುವ ಉದ್ದೇಶದಿಂದ ಯುಜಿಸಿ ಮತ್ತು  ರಾಜ್ಯ ಸರ್ಕಾರದಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಿರೀಕ್ಷೆಗೂ ಮೀರಿ ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಫಲಿತಾಂಶ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳಿಗೆ ಫಲಿತಾಂಶದ ಜೊತೆಗೆ ಡಿಜಿಟಲ್‌ಅಂಕಪಟ್ಟಿಯನ್ನೂ ಒದಗಿಸಿದ್ದು ವಿಶೇಷವಾಗಿದೆ.  –ಪ್ರೊ| ಶರಣಪ್ಪ ವಿ. ಹಲಸೆ, ಕುಲಪತಿ, ದಾವಣಗೆರೆ ವಿವಿ

 

Advertisement

Udayavani is now on Telegram. Click here to join our channel and stay updated with the latest news.

Next