Advertisement
ಬುಧವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಮಶಾನಗಳಲ್ಲಿ ಗುಂಡಿ ತೆಗೆಯುವುದನ್ನು ಒಳಗೊಂಡಂತೆ ಇನ್ನು ಕೆಲವು ಕಡೆ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರು ಕೇಳಿ ಬಂದಿವೆ.
Related Articles
Advertisement
ಪ್ರತಿಧ್ವನಿಸಿದ ಡೊರ್ ನಂಬರ್ ವಿಷಯ : ನಗರ ಪಾಲಿಕೆಯ ವಿವಿ ವಾರ್ಡ್‌ಗಳಲ್ಲಿ ಸಮಸ್ಯ ಗಮನಕ್ಕೂ ತಾರದೇ ಡೋರ್ ನಂಬರ್ ನೀಡಲಾಗಿದೆ. ಬಿ.ಜಿ. ಅಜಯ್‌ಕುಮಾರ್ ಅಧಿಕಾರ ಅಧಿಯಲ್ಲಿ ಡೋರ್ ನಂಬರ್ ನೀಡುವ ಸಂಬಂಧ ಐವರ ಸಮಿತಿ ರಚನೆ ಮಾಡಲಾಗುವುದು. ಸಮಿತಿ ಸರಳ ಪರಿಶೀಲನೆ ಕೈಗೊಂಡು ವರದಿ ಸಲ್ಲಿಸಿದ ನಂತರವೇ ಡೋರ್ ನಂಬರ್ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೇ ಈವರೆಗೆ ಸಮಿತಿಯ ರಚನೆಯನ್ನೇ ಮಾಡಿಲ್ಲ. ಅಧಿಕಾರಿಗಳು ಯಾರ ಗಮನಕ್ಕೂ ತಾರದೆ ಡೋರ್ ನಂಬರ್ ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಎ. ನಾಗರಾಜ್, ಕೆ. ಚ ಮನ್ ಸಾಬ್, ಅಬ್ದುಲ್ ಲತೀಫ್ ಇತರರು ತೀವ್ರ ಆಕ್ಷೇಪ ವ್ಯಕ ಪಪಡಿಸಿದರು.
ಐವರ ಸಮಿತಿ ರಚನೆ ಮಾಡುವ ಬಗ್ಗೆ ತೀರ್ಮಾನವೇ ಆಗಿರಲಿಲ್ಲ ಎಂದು ಮೇಯರ್ ಬಿ.ಜಿ. ಅಜಯ್ ಕುಮಾರ್ ಹೇಳಿದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು, ಐವರ ಸಮಿತಿ ರಚನೆಯ ಬಗ್ಗೆ ಚರ್ಚೆ ತೀರ್ಮಾನವೂ ಆಗಿತ್ತು.
ರಾಜೀವಗಾಂಧಿ ಯೋಜನೆಯಡಿ ಆಜಾದ್ ನಗರ, ಜಾಲಿನಗರ ಇತರೆ ಕೊಳಚೆ ಪ್ರದೇಶಗಳ ಸೇರ್ಪಡೆ ಮಾಡಿ ಸರ್ಕಾರದ ಅನುಮೋದನೆಗೆ ಕಳಿಸಬೇಕು ಎಂದು ವಿಪಕ್ಷ ನಾಯಕ ಎ. ನಾಗರಾಜ್, ಕೆ. ಚಮನ್ ಸಾಬ್ ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಯೋಜನೆಯ ಅನುದಾನ ವಾಪಸ್ ಆಗದಂತೆ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಸೂಚಿಸಿದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎ. ರವೀಂದ್ರನಾಥ್, ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮಾ ಪ್ರಕಾಶ್, ಎಲ್.ಡಿ. ಗೋಣೆಪ್ಪ, ರೇಣುಕಾ ಶ್ರೀನಿವಾಸ್, ಗೀತಾ ದಿಳ್ಯೆಪ್ಪ ಇತರರು ಇದ್ದರು.
ಇದನ್ನೂ ಓದಿ : ಗಣೇಶನಿಗೆ ಇಷ್ಟವಾದ ಮೋದಕ ಮಾಡುವುದು ಹೇಗೆ ಎಂದು ನಿಮಗೆ ಗೊತ್ತಿದೆಯಾ..? ಇಲ್ಲಿದೆ ಮಾಹಿತಿ