Advertisement

ಬೇರೆ ಕೆಲಸಕ್ಕೆ ಶಿಕ್ಷಕರು ಬೇಡ

12:19 PM Sep 23, 2019 | Naveen |

ದಾವಣಗೆರೆ: ಶಾಲಾ ಅವಧಿಯಲ್ಲಿ ಶಿಕ್ಷಕರನ್ನು ತರಬೇತಿ, ಸಮೀಕ್ಷೆ ಇತರೆ ಕಾರ್ಯಕ್ಕೆ ನಿಯೋಜಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶನಿವಾರ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

Advertisement

ಶಾಲಾ ಅವಧಿಯಲ್ಲಿ ಸೂಕ್ತ ಪರ್ಯಾಯ ವ್ಯವಸ್ಥೆ ಇಲ್ಲದೆ ಶಿಕ್ಷಕರನ್ನು ವಿವಿಧ ತರಬೇತಿ, ಸಮೀಕ್ಷೆಗೆ ನಿಯೋಜನೆ ಮಾಡಲಾಗುತ್ತಿದೆ. ಇಬ್ಬರು-ಮೂವರು ಶಿಕ್ಷಕ-ಶಿಕ್ಷಕಿಯರನ್ನು ಏಕಕಾಲಕ್ಕೆ ನಿಯೋಜನೆ ಮಾಡುವುದರಿಂದ ತರಗತಿಗಳು ನಡೆಯದೇ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಸರ್ಕಾರದ ಕೆಲಸಕ್ಕೆ ಅಡ್ಡಿ ಮಾಡಬೇಕು ಎಂಬ ಇಚ್ಛೆ ಯಾರಿಗೂ ಇಲ್ಲ. ಶಾಲಾ ಅವಧಿಯ ಬದಲಿಗೆ ರಜಾ ಸಂದರ್ಭ ತರಬೇತಿ, ಸಮೀಕ್ಷೆಗೆ ಸೂಕ್ತ ಎಂದು ಮಾಜಿ ಉಪಾಧ್ಯಕ್ಷ ಬಿ.ಜಿ. ಸಂಗಜ್ಜಗೌಡ್ರು
ಅಭಿಪ್ರಾಯಪಟ್ಟರು.

ತೋಳಹುಣಸೆ ಕ್ಷೇತ್ರದ ಸದಸ್ಯ ಉಮೇಶ್‌ನಾಯ್ಕ ಮಾತನಾಡಿ, ಮಧ್ಯ ವಾರ್ಷಿಕ ಪರೀಕ್ಷೆ ಒಂದು ವಾರದ ಮುನ್ನ ಶಿಕ್ಷಕರಿಗೆ ತರಬೇತಿ ನೀಡುವುದರಿಂದ ಯಾವುದೇ ಪ್ರಯೋಜನವೇ ಇಲ್ಲ. ಡಯಟ್‌ ಮತ್ತು ಶಿಕ್ಷಣ ಇಲಾಖೆಗೆ ಸಂಬಂಧವೇ ಇಲ್ಲ ಎಂಬಂತೆ ತರಬೇತಿ ಆಯೋಜಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿ ಗ್ರಾಮದಲ್ಲೂ ಇದೇ ಸಮಸ್ಯೆ ಇದೆ. ಮಕ್ಕಳಿಗೆ ತೊಂದರೆ ಆಗುವುದನ್ನು ಸರ್ಕಾರ ಪರಿಗಣಿಸಿ, ಶಾಲಾ ಅವಧಿಯಲ್ಲಿ ಯಾವುದೇ ತರಬೇತಿ, ಸಮೀಕ್ಷೆಗೆ ಶಿಕ್ಷಕರ ನಿಯೋಜನೆ ಮಾಡಬಾರದು ಎಂದು ಸರ್ವ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂತಿಮವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಧರಿಸಿತು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎನ್‌. ನಾಗರಾಜ್‌, ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಹೆಚ್ಚುವರಿ ಬಸ್‌ ಸೌಲಭ್ಯ ಒದಗಿಸಬೇಕು. ಬಸ್‌ಗಳು ವಿಶ್ವವಿದ್ಯಾಲಯದತನಕ ಹೋಗದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದು ತಿಳಿಸಿದರು.

Advertisement

ಅಂಡರ್‌ ಬ್ರಿಡ್ಜ್ ಬಳಿ ಬಸ್‌ ತಿರುಗಿಸಿಕೊಳ್ಳಲಿಕ್ಕೆ ಆಗುವುದಿಲ್ಲ ಎಂದು ಕೆಎಸ್ಸಾರ್ಟಿಸಿ ಸಂಚಾರ
ನಿಯಂತ್ರಕ ಈಶ್ವರಪ್ಪ ಹೇಳಿದಾಗ, ನಾನೇ ಬಸ್‌ ಓಡಿಸುತ್ತೇನೆ. ಮೊದಲು ಸಮಸ್ಯೆ ಬಗೆಹರಿಸಿ
ಎಂದು ಸೂಚಿಸಿದರು. ಭಾನುವಾರದಿಂದಲೇ ಬೆಳವನೂರುಗೆ ಬಸ್‌ ಬಿಡಬೇಕು. ಇಲ್ಲದೇ
ಹೋದರೆ ಶಿರಮಗೊಂಡನಹಳ್ಳಿಯಲ್ಲಿ ಬಸ್‌ ತಡೆಯಲಾಗುವುದು ಎಂದು ಶಿರಮಗೊಂಡನಹಳ್ಳಿ ಸದಸ್ಯ ಎಂ. ಮಂಜಪ್ಪ ಎಚ್ಚರಿಸಿದರು. ಕಾಡಜ್ಜಿ, ನಾಗನೂರು ಇತರೆ ಗ್ರಾಮಾಂತರ ಭಾಗಕ್ಕೆ ಬಸ್‌ ಸೌಲಭ್ಯಕ್ಕೆ ಸದಸ್ಯರು ಒತ್ತಾಯಿಸಿದರು. ಉಪಾಧ್ಯಕ್ಷ ಎಚ್‌.ಆರ್‌. ಮರುಳಸಿದ್ದಪ್ಪ, ಪ್ರಭಾರಕಾರ್ಯ ನಿರ್ವಹಣಾಧಿಕಾರಿ ಬಿ.ಎಂ. ದಾರುಕೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next