Advertisement
ಮಂಗಳವಾರ ಅಂತರ್ಜಾಲದಲ್ಲಿ ಪ್ರಕಟಗೊಂಡ ಫಲಿತಾಂಶದ ಪ್ರಕಾರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 23,557 ವಿದ್ಯಾರ್ಥಿಗಳಲ್ಲಿ 20,325 ವಿದ್ಯಾರ್ಥಿಗಳು (ಶೇ.86.28) ತೇರ್ಗಡೆಯಾಗಿದ್ದಾರೆ.
Related Articles
Advertisement
ಜಿಲ್ಲೆಯ 177 ಸರ್ಕಾರಿ ಪ್ರೌಢಶಾಲೆಗಳಲ್ಲಿ 29 ಶಾಲೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. 172 ಅನುದಾನಿತ ಶಾಲೆಗಳ ಪೈಕಿ 6, 137 ಅನುದಾನರಹಿತ ಶಾಲೆಗಳಲ್ಲಿ 24 ಶಾಲೆಯಲ್ಲಿ ಶೇ.100 ಫಲಿತಾಂಶ ಬಂದಿದೆ. ಯಾವುದೇ ಶಾಲೆ ಶೂನ್ಯ ಫಲಿತಾಂಶ ಪಡೆದಿಲ್ಲ ಎಂಬುದು ಗಮನಾರ್ಹ.
ಎಲ್ಲಾ 7 ಶೈಕ್ಷಣಿಕ ವಲಯಗಳಿಂದ ಪರೀಕ್ಷೆ ಬರೆದಿದ್ದ 11,521 ಬಾಲಕರಲ್ಲಿ 9,676 ಬಾಲಕರು ತೇರ್ಗಡೆ ಯಾಗಿದ್ದಾರೆ. 12,306 ಬಾಲಕಿಯರಲ್ಲಿ 10,649 ಬಾಲಕಿಯರು ತೇರ್ಗಡೆಯಾಗುವ ಮೂಲಕ ಎಂದಿನಂತೆ ಮೇಲುಗೈ ಸಾಧಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 14,793 ವಿದ್ಯಾರ್ಥಿಗಳಲ್ಲಿ 12,400(ಶೇ.83.82), ಆಂಗ್ಲ ಮಾಧ್ಯಮದ 7,889 ವಿದ್ಯಾರ್ಥಿಗಳಲ್ಲಿ 7,269(ಶೇ.92.14), ಉರ್ದು ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 875 ವಿದ್ಯಾರ್ಥಿಗಳಲ್ಲಿ 656(ಶೇ.74.97) ವಿದ್ಯಾರ್ಥಿಗಳು ಪಾಸಾಗಿದ್ದಾರೆ.
•ಗೌರಮ್ಮ ಪ್ರೌಢಶಾಲೆಗೆ ಶೇ.100 ಫಲಿತಾಂಶ:ದಾವಣಗೆರೆಯ ವಿನೋಬ ನಗರ 3ನೇ ಮುಖ್ಯರಸ್ತೆ, 9ನೇ ಅಡ್ಡ ರಸ್ತೆಯಲ್ಲಿನ ಶ್ರೀ ಯಜಮಾನ್ ಬೆಳ್ಳೊಡಿ ಸೋಮಶೇಖರಪ್ಪ ಗೌರಮ್ಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 36 ವಿದ್ಯಾರ್ಥಿಗಳಲ್ಲಿ ನಾಲ್ವರು ವಿಶಿಷ್ಟ ದರ್ಜೆ, 32 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. •ಶ್ರೀ ಬಕ್ಕೇಶ್ವರ ಪ್ರೌಢಶಾಲೆ: ಎಂಸಿಸಿ ಎ ಬ್ಲಾಕ್‌ನಲ್ಲಿರುವ ಶ್ರೀ ಬಕ್ಕೇಶ್ವರ ಪ್ರೌಢಶಾಲೆಗೆ ಶೇ.92.8 ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 28 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆರ್. ಮಂಜುನಾಥ್(ಶೇ.92), ವೀರೇಂದ್ರ (ಶೇ.84.32), ಸಂಜನಾ ಬದ್ಯಾ(ಶೇ.88), ರೇವತಿಬಾಯಿ (ಶೇ.77.28), ಶಬಾನಬಾನು(ಶೇ.77.12) ಅಂಕ ಪಡೆದಿದ್ದಾರೆ. ಸಂಗೀತಾ ಎಂಬ ವಿದ್ಯಾರ್ಥಿನಿ ಕನ್ನಡದಲ್ಲಿ 125ಕ್ಕೆ 122, ವೀರೇಂದ್ರ ಹಿಂದಿಯಲ್ಲಿ 95ಮ ಸಮಾಜ ವಿಜ್ಞಾನದಲ್ಲಿ 94 ಅಂಕ ಗಳಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ಕೆ. ಈಶಾನಾಯ್ಕ ತಿಳಿಸಿದ್ದಾರೆ.