Advertisement
ನಗರದ ಜಯದೇವ ವೃತ್ತದ ಶಿವಯೋಗಾಶ್ರಮದಲ್ಲಿ ಶುಕ್ರವಾರ ವಿರಕ್ತಮಠ ಶಿಚವಯೋಗಾಶ್ರಮ, ವಚನ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್, ಸ್ಫೂರ್ತಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಶರಣ ಸಂಗಮ ಹಾಗೂ ಬಸವಣ್ಣನವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
Related Articles
Advertisement
ಶರಣ ಸಂಸ್ಕೃತಿಯು ಶ್ರಮ ಸಂಸ್ಕೃತಿಯಾಗಿದೆ. ಶ್ರಮಜೀವಿಗಳೇ ನಿಜವಾದ ಶರಣರು. ಅನುಭವ ಮಂಟಪದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಸವಣ್ಣ ನೀಡಿದ್ದರು. ಆದರೆ, ಪ್ರಸ್ತುತ ಅಭಿಪ್ರಾಯಕ್ಕೂ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಗುಂಡೇಟು ಬೀಳುತ್ತಿರುವುದು ನಿಜಕ್ಕೂ ದುರಂತ ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಸಮಾಜವನ್ನು ಕಟ್ಟಿದರು. ಕಾಯಕದಿಂದಲೇ ಜೀವನದ ಪ್ರಗತಿ ಎಂಬುದನ್ನು ಸಾರಿದರು. ಕಾಯಕವನ್ನು ಮಾಡದ ಗುರು, ಲಿಂಗ, ಜಂಗಮನನ್ನು ತಿರಸ್ಕರಿಸಿದರು. ಯಾರೇ ಆಗಲಿ ಅನುಭವ ಮಂಟಪದಲ್ಲಿ ಕಡ್ಡಾಯವಾಗಿ ಕಾಯಕ ಮಾಡಬೇಕೆಂಬ ಆದರ್ಶವನ್ನು ಪ್ರತಿಪಾದಿಸಿದರು. ಅಂತಹ ಆದರ್ಶವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಮದು ಹೇಳಿದರು.
ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಶೇ.91ಕ್ಕಿಂತ ಹೆಚ್ಚು ಅಂಕ ಪಡೆದ ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಪೂಜಾ ಅವರನ್ನು ಸನ್ಮಾನಿಸಲಾಯಿತು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಾಜಶೇಖರ್ ಗುಂಡಗತ್ತಿ, ಸ್ಫೂರ್ತಿ ಪ್ರಕಾಶನದ ಎಂ. ಬಸವರಾಜು, ಸಾಹಿತಿ ಮಹಾಂತೇಶ್ ನಿಟ್ಟೂರು, ಸುಭಾಶಿಣಿ ಮಂಜುನಾಥ್ ಉಪಸ್ಥಿತರಿದ್ದರು. ತಾರೇಶ್ ಸ್ವಾಗತಿಸಿದರು. ಗಂಗಾಧರ್ ಬಿ.ಎಲ್. ನಿಟ್ಟೂರು ನಿರೂಪಿಸಿದರು. ತೆಲಿಗಿ ವೀರಭದ್ರಪ್ಪ ವಂದಿಸಿದರು.
ಕವಿಗೋಷ್ಠಿಯಲ್ಲಿ ಬಸವಣ್ಣನವರ ಕುರಿತು ಕವಿತೆಗಳುಬಸವಜಯಂತಿ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಕೆ.ಎನ್ ಸ್ವಾಮಿ ಅವರ (ಕಾರುಣ್ಯ ಸಿಂಧೂ ಬಸವಣ್ಣ ), ಯೋಗೀಂದ್ರನಾಯ್ಕ (ಜಗಜ್ಯೋತಿ), ಮಲ್ಲಮ್ಮ ನಾಗರಾಜ್ ಅಣ್ಣ ಮತ್ತೆ ಹುಟ್ಟಿ ಬಾ ಶೀರ್ಷಿಕೆಯ ಕವನ ವಾಚನ ಮಾಡಿದರು. ನಂತರ ನೀಲಗುಂದ ಜಯಮ್ಮ, ಪ್ರೊ| ಅಂಜಿನಪ್ಪ ಸೇರಿದಂತೆ ವಿವಿಧ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ಮಂಡಿಸಿದರು.