Advertisement

ಕ್ವಾರಂಟೈನ್‌ಗೆ ಜನರ ವಿರೋಧ

11:48 AM May 25, 2020 | Naveen |

ದಾವಣಗೆರೆ: ಜನವಸತಿ ಪ್ರದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಬಾರದು ಎಂದು ವಿರೋಧಿಸಿ ಭಾನುವಾರ ಕೆ.ಬಿ. ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದರು.

Advertisement

ಕೆ.ಬಿ. ಬಡಾವಣೆಯ 1ನೇ ಮುಖ್ಯ ರಸ್ತೆ, 1ನೇ ಕ್ರಾಸ್‌ನ ಎಲಿಗಾರ್‌ ಶಿವಪ್ಪ ರಸ್ತೆಯಲ್ಲಿರುವ ಹಾಸ್ಟೆಲ್‌ ನಲ್ಲಿ ಕ್ವಾರಂಟೈನ್‌ ಮಾಡಲಾಗುವುದು ಎಂಬ ವಿಷಯ ಬಹಳ ದಿನಗಳಿಂದಲೂ ಕೇಳಿ ಬರುತ್ತಿದೆ. ವಾರ್ಡ್‌ನ ಜನಪ್ರತಿನಿಧಿಗಳು, ಮುಖಂಡರ ಭೇಟಿ ಮಾಡಿ, ಇಲ್ಲಿ ಯಾವುದೇ ಕಾರಣಕ್ಕೂ ಕ್ವಾರಂಟೈನ್‌ ಮಾಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದೇವೆ. ಆದರೂ ಕ್ವಾರಂಟೈನ್‌ಗಾಗಿ ಹಾಸ್ಟೆಲ್‌ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿವೆ. ಯಾವುದೇ ಕಾರಣಕ್ಕೂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಬಾರದು ಎಂದು ಪ್ರತಿಭಟನಾಕಾರರು ತಾಕೀತು ಮಾಡಿದರು.

ಸರ್ಕಾರದ ಆದೇಶ, ನಿಯಮಗಳಿಗೆ ವಿರೋಧ ಇಲ್ಲ. ಆದರೆ ಜನನಿಬಿಡ ಪ್ರದೇಶಗಳ ಬದಲಿಗೆ ಇತರೆಡೆ ಕ್ವಾರಂಟೈನ್‌ ಮಾಡುವುದು ಸೂಕ್ತ. ಕೆ.ಬಿ. ಬಡಾವಣೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಯೋವೃದ್ಧರು, ಮಕ್ಕಳು ಇದ್ದಾರೆ. ಅತೀ ಸೂಕ್ಷ್ಮ ಪರಿಸ್ಥಿತಿ ಇರುವಾಗ ಕ್ವಾರಂಟೈನ್‌ ಮಾಡುವುದರಿಂದ ಇತರರಿಗೆ ತೊಂದರೆ ಆಗುತ್ತದೆ. ಅಲ್ಲದೆ ಕ್ವಾರಂಟೈನ್‌ ಮಾಡಬೇಕು ಎಂದುಕೊಂಡಿರುವ ಹಾಸ್ಟೆಲ್‌ನಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಹಾಗಾಗಿ ಯಾವುದೇ ಕಾರಣಕ್ಕೂ ಇಲ್ಲಿ ಕ್ವಾರಂಟೈನ್‌ ಮಾಡಬಾರದು. ಎಂತದ್ದೇ ಪರಿಸ್ಥಿತಿಯಲ್ಲಿ ಕ್ವಾರಂಟೈನ್‌ಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next