Advertisement
ಬರ ಪರಿಹಾರ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತಿಯಲ್ಲಿ 13.36 ಕೋಟಿ ಅನುದಾನ ಇದೆ. ಗೋಶಾಲೆ ಪ್ರಾರಂಭಿಸದೇ ಇರುವ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆದರೂ, ದಾವಣಗೆರೆ ಜಿಲ್ಲೆಯಲ್ಲಿ ಗೋಶಾಲೆ ಪ್ರಾರಂಭಿಸಿಲ್ಲ. ಒಂದು ವೇಳೆ ಗೋಶಾಲೆ ಪ್ರಾರಂಭಿಸಿದರೆ ಸುಖಾ ಸುಮ್ಮನೆ ತಲೆ ನೋವು ಎಂಬ ಕೆಟ್ಟ ಪ್ರವೃತ್ತಿ, ಭಾವನೆ ಅಧಿಕಾರಿಗಳಲ್ಲಿ ಇದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕುಗಳು ಬರಪೀಡಿತವಾಗಿವೆ. ಅನುದಾನ ಖರ್ಚು ಮಾಡಿ, ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿತ್ತು. ಆದರೆ, ಸಾಕಷ್ಟು ಅನುದಾನ ಖರ್ಚೇ ಆಗಿಲ್ಲ. ಜಿಲ್ಲೆಯಲ್ಲಿ ಅಗತ್ಯ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸುವುದು ಬಹಳಷ್ಟು ವಿಳಂಬ ಆಗುತ್ತಿದೆ. 6 ತಿಂಗಳಾದರೂ ಕ್ರಿಯಾ ಯೋಜನೆ ರೂಪಿಸದೇ ಇರುವುದು ದೊಡ್ಡ ಸಮಸ್ಯೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಹಂತದಲ್ಲಿ 15ದಿನಗಳ ಒಳಗೆ ಕ್ರಿಯಾಯೋಜನೆ ರೂಪಿಸಿ, ಸ್ಥಾಯಿ ಸಮಿತಿಗಳ ಮೂಲಕ ಮೇ 30ರ ಒಳಗೆ ಅನುಮೋದನೆ ಪಡೆದುಕೊಳ್ಳಬೇಕು. ಜೂನ್ ಒಳಗೆ ಕ್ರಿಯಾ ಯೋಜನೆ ಅನುಮೋದನೆ ಆಗಬೇಕು. ನಂತರ ಜಾರಿಗೆ ತರಲಿಕ್ಕೆ ಸಾಕಷ್ಟು ಸಮಯ ದೊರೆಯಲಿದೆ ಎಂದು ಉಮಾಶಂಕರ್ ತಿಳಿಸಿದರು.
ಬೇಸಿಗೆಯಲ್ಲೇ ಬರ ಪರಿಹಾರ ಕಾಮಗಾರಿ ಕೈಗೊಂಡರೆ ಸೂಕ್ತ. ಜನರಿಗೂ ಸಾಕಷ್ಟು ಅನುಕೂಲ ಆಗುತ್ತದೆ. ಬೇಸಿಗೆಯಲ್ಲೇ ಆಗಬೇಕಾದ ಕೆಲಸ ಗುರುತಿಸಿ, ಮಾಡಬೇಕು. ಅದನ್ನ ಬಿಟ್ಟು ಮಳೆಗಾಲ ಪ್ರಾರಂಭವಾದ ಮೇಲೆ ಕಾಮಗಾರಿ ಮಾಡಿದರೆ ಏನು ಪ್ರಯೋಜನ ಆಗುತ್ತದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಮೇವು ಬ್ಯಾಂಕ್ ಸ್ಥಾಪಿಸಿ ರೈತರಿಗೆ ಮೇವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದು ಬೇಡ. ಬರಗಾಲದಿಂದಾಗಿ ರೈತರಲ್ಲಿ ಮೇವು ಕೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ಕೂಡಲೇ ಎಲ್ಲಾ ತಾಲೂಕುಗಳಲ್ಲಿ ಗೋಶಾಲೆಗಳನ್ನು ತೆರೆದು ಗೋವುಗಳನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲದ ರೈತರ ಗೋವುಗಳನ್ನು ಗೋಶಾಲೆಗಳಲ್ಲಿ ನಿರ್ವಹಣೆ ಮಾಡುವ ಮೂಲಕ ರೈತರಿಗೆ ನೆರವಾಗುವಂತೆ ಸೂಚಿಸಿದರು.
ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿದೆ. ಮುಂದಿನ ಬಾರಿ ರಾಜ್ಯದಲ್ಲಿ 5 ನೇ ಸ್ಥಾನದಲ್ಲಿರಲು ಪ್ರಯತ್ನಿಸಲಾಗುವುದು. ಜಿಲ್ಲೆಯ ಶಾಲೆಗಳಲ್ಲಿ ಬಿಸಿಯೂಟ ನೀಡಲಾಗುತ್ತಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ತಿಳಿಸಿದರು.
ಬರಗಾಲವಿರುವುದರಿಂದ ಶಾಲಾ ಮಕ್ಕಳ ವಯಸ್ಸಿನ ಯಾವುದೇ ಮಗು ಬಂದರೂ ಶಾಲೆಗಳಲ್ಲಿ ಬಿಸಿಯೂಟ ನೀಡುವಂತೆ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಡಿಡಿಪಿಐಗೆೆ ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ 2018-19 ನೇ ಸಾಲಿನಲ್ಲಿ 33.87 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಿದ್ದು ಮಾರ್ಚ್ ಅಂತ್ಯಕ್ಕೆ 39.35 ರಷ್ಟು ಗುರಿ ಸಾಧಿಸಲಾಗಿದೆ ಎಂದು ಉಪ ಯೋಜನಾಧಿಕಾರಿ ಜಿ.ಎಸ್. ಶಶಿಧರ್ ಮಾಹಿತಿ ನೀಡಿದರು.
ಉಪ ಕಾರ್ಯದರ್ಶಿ ಭಿಮಾನಾಯ್ಕ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ತ್ರಿಪುಲಾಂಭ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶಿವಾನಂದ ಕುಂಬಾರ್ ಇತರರು ಇದ್ದರು.
67 ಗ್ರಾಮಗಳಿಗೆ ಟ್ಯಾಂಕರ್ ನೀರುಜಿಲ್ಲೆಯಲ್ಲಿ 67 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರತಿದಿನ 426 ಟ್ಯಾಂಕರ್‌ಗಳನ್ನು ಒದಗಿಸಲಾಗುತ್ತಿದ್ದು, 63 ಖಾಸಗಿ ಬೋರ್‌ವೆಲ್ಗಳಿಂದ 41 ಗ್ರಾಮಗಳಿಗೆ ನೀರು ಕೊಡಲಾಗುತ್ತಿದೆ. ಬರದ ಹಿನ್ನೆಲೆಯಲ್ಲಿ 445 ಬೋರ್‌ವೆಲ್ಗಳನ್ನು ಕೊರೆಯಿಸಲಾಗಿದ್ದು, 442 ಬೋರ್‌ವೆಲ್ಗಳಲ್ಲಿ ನೀರು ಬಂದಿರುತ್ತದೆ. 13 ವಿಫಲವಾಗಿವೆ ಎಂದು ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸಭೆಯಲ್ಲಿ ಮಾಹಿತಿ ನೀಡಿದರು. ಶುದ್ಧ ಕುಡಿಯುವ ನೀರಿನ ಘಟಕಗಳು ಎಲ್ಲೆಡೆ ಸರಿಯಾಗಿ ನಿರ್ವಹಣೆಯಾಗುತ್ತಿವೆಯೇ, ಆರೋಗ್ಯ ಸುಧಾರಣೆಯಾಗಿದೆಯೇ ಎಂಬ ಉಸ್ತುವಾರಿ ಕಾರ್ಯರ್ದರ್ಶಿಗಳ ಪ್ರಶ್ನೆಗೆ ಜನರು ಕುಡಿಯಲು ಮಾತ್ರ ಶುದ್ಧ ನೀರು ಬಳಸುತ್ತಾರೆ. ಉಳಿದ ಚಟುವಟಿಕೆಗಳಿಗೆ ದಿನನಿತ್ಯದ ನೀರನ್ನು ಬಳಸುವುದರಿಂದ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
81.38 ಕೋಟಿ ಪ್ರಸ್ತಾವನೆ
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯ ಅಭಾವದಿಂದ 1,35,661 ಹೆಕೇrರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, 81.38 ಕೋಟಿ ರೂ. ಬೆಳೆಹಾನಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಿಂಗಾರು ಹಂಗಾಮಿನಲ್ಲಿ 9,280 ಹೆಕ್ಟೇರ್‌ನಲ್ಲಿ ಬೆಳೆಹಾನಿಯಾಗಿದೆ. 5.87 ಕೋಟಿ ರೂ. ಬೆಳೆಹಾನಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬೇಸಿಗೆ ಹಂಗಾಮಿನಲ್ಲಿ 260 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಆಗಿದೆ. 35.10 ಲಕ್ಷ ರೂ. ಬೆಳೆಹಾನಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ತಿಳಿಸಿದರು. ಆರೋಗ್ಯ ಜಾಗೃತಿ ಮೂಡಿಸಿ
ಜೂನ್, ಜುಲೈ, ಆಗಸ್ಟ್‌ನಲ್ಲಿ ಡೆಂಘೀ, ಚಿಕೂನ್ ಗುನ್ಯ, ಎಚ್1 ಎನ್1 ತಡೆ ಗಟ್ಟಲು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯಿತಿ ವತಿ ಯಿಂದ ಫಾಗಿಂಗ್ ಮಾಡಿಸುವ ಮೂಲಕ ಸೊಳ್ಳೆಗಳನ್ನು ಹತೋಟಿಗೆ ತರು ವಂತಾಗಬೇಕು. ಆಶಾ ಕಾರ್ಯಕರ್ತೆಯರಿಂದ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಮೂಲಕ ರೋಗಗಳ ಹತೋಟಿಗೆ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಸೂಚಿಸಿದರು.