Advertisement

ಮಾದಿಗ ದಂಡೋರ ಮಹಾಸಭೆಗೆ ಜಿಲ್ಲೆಯಿಂದ 100 ಜನ

05:08 PM Dec 07, 2021 | Team Udayavani |

ದಾವಣಗೆರೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಡಿ.14ರಂದು ನಡೆಯಲಿರುವ ಮಾದಿಗ ದಂಡೋರರಾಷ್ಟ್ರೀಯ ಮಹಾಸಭೆಗೆ ದಾವಣಗೆರೆ ಜಿಲ್ಲೆಯಿಂದ100 ಜನ ತೆರಳಲು ತೀರ್ಮಾನಿಸಲಾಗಿದೆ.

Advertisement

ನಗರದ ಹಳೆ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರದೇವಸ್ಥಾನದಲ್ಲಿ ನಡೆದ ಜಿಲ್ಲಾ ಮಾದಿಗ ದಂಡೋರಸಮಿತಿ ಸಭೆಯಲ್ಲಿಈ ತೀರ್ಮಾನ ಕೈಗೊಳ್ಳಲಾಯಿತು.ಅಧ್ಯಕ್ಷತೆ ವಹಿಸಿದ್ದ ಸಮಿತಿ ಜಿಲ್ಲಾಧ್ಯಕ್ಷ ಎಚ್‌.ಸಿ.ಗುಡ್ಡಪ್ಪ ಮಾತನಾಡಿ, ದೆಹಲಿಯ ಜಂತರ್‌-ಮಂತರ್‌ನಲ್ಲಿ ಡಿ.1 4 ರಂದು ಮಾದಿಗ ದಂಡೋರ ರಾಷ್ಟ್ರೀಯಅಧ್ಯಕ್ಷ ಮಂದಕೃಷ್ಣ ಮಾದಿಗ ಅವರ ಮುಖಂಡತ್ವದಲ್ಲಿರಾಷ್ಟ್ರೀಯ ಮಹಾಸಭೆ ನಡೆಯಲಿದೆ.

ಸಭೆಗೆದಾವಣಗೆರೆ ಜಿಲ್ಲೆಯಿಂದ 100 ಜನ ದೆಹಲಿಗೆತೆರಳಬೇಕಿದೆ. ಡಿ.12ರಂದೇ ದಾವಣಗೆರೆರೈಲ್ವೆ ನಿಲ್ದಾಣದಿಂದ ದೆಹಲಿಗೆ ತೆರಳಲು ಸಿದ್ಧತೆಮಾಡಿಕೊಳ್ಳಬೇಕು. ದೇಶದ ವಿವಿಧ ರಾಜ್ಯಗಳಲ್ಲಿಮಾದಿಗ ಸಮುದಾಯದ ಮೇಲೆ ನಡೆಯುತ್ತಿರುವದೌರ್ಜನ್ಯ ಖಂಡಿಸಿ ಮತ್ತು ಒಳಮೀಸಲಾತಿ ವರ್ಗಿàಕರಣಕ್ಕೆ ಶಿಫಾರಸು ಮಾಡಿರುವ ವರದಿಗಳನ್ನುಆಯಾ ರಾಜ್ಯ ಸರ್ಕಾರಗಳು ಅನುಮೋದಿಸಿ ಕೇಂದ್ರಸರ್ಕಾರಕ್ಕೆ ಸಲ್ಲಿಸುವಂತೆ ಒತ್ತಾಯಿಸಿ ಮಹಾಸಭೆಯನ್ನುದೆಹಲಿಯಲ್ಲಿ ಕರೆಯಲಾಗಿದೆ ಎಂದು ತಿಳಿಸಿದರು.

ಸಮಾಜದ ಮುಖಂಡರಾದ ಎ.ಕೆ. ನಾಗಪ್ಪ, ಎ.ಕೆ.ಪರಸಪ್ಪ, ಕಂದನಕೋವಿ ರಾಜಪ್ಪ, ಕಿತ್ತೂರು ಡಿ.ಎಸ್‌.ಜಯಪ್ಪ, ಎಚ್‌.ಬಸವರಾಜ್‌ ಹುಣಸೆಕಟ್ಟೆ, ದೊಡ್ಮನೆದಾನಪ್ಪ ಶಾಮನೂರು, ದೇವರಾಜ್‌ ಬಸವಾಪುರ,ಕೆ.ಎಂ. ಅಂಜನಪ್ಪ ಹೆಮ್ಮೆನಬೇತೂರು, ಬಿ.ಒ.ಕೃಷ್ಣಮೂರ್ತಿ, ಎಂ. ಆಂಜನೇಯ, ಶಿವಳ್ಳಿ ನಾಗರಾಜ್‌,ಕೆ. ಶಿವರಾಜ್‌, ಗಂಗನರಸಿ ಹನುಮಂತಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next