ದಾವಣಗೆರೆ: ತಾಲೂಕಿನ ಕುರ್ಕಿಗ್ರಾಮವನ್ನು ಅಮೃತ ಗ್ರಾಮಯೋಜನೆಗೆ ಸೇರ್ಪಡೆಗೆ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದ್ದಾರೆ.
ತಾಲೂಕಿನ ಹಿರೇತೊಗಲೇರಿಗ್ರಾಮದಲ್ಲಿ ಸ್ವತ್ಛ ಸಂಕೀರ್ಣ, ಕುರ್ಕಿಯಲ್ಲಿಸಾರ್ವಜನಿಕ ಗ್ರಂಥಾಲಯ ಕಟ್ಟಡದಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಸ್ಥರಿಗೆ ಸ್ವತ್ಛತೆಯಬಗೆಗೆ ಬಹಳ ಅರಿವಿದೆ. ತುಂಬಾಉತ್ತಮವಾಗಿ ಸ್ವತ್ಛ ಸಂಕೀರ್ಣ ಘಟಕನಿರ್ಮಿಸಿಕೊಂಡಿದ್ದಾರೆ. ಕುರ್ಕಿ ಗ್ರಾಮದಲ್ಲಿನಿರ್ಮಿಸಿರುವ ಗ್ರಂಥಾಲಯ ಗ್ರಾಮಸ್ಥರವಿದ್ಯಾ ಭ್ಯಾಸದ ಕಾಳಜಿ ತೋರಿಸುತ್ತದೆಎಂದು ಸಂತಸ ವ್ಯಕ್ತಪಡಿಸಿದರು.
ಗ್ರಾಮದ ಮಹಿಳೆಯರು ಸ್ವ ಸಹಾಯಸಂಘಗಳಲ್ಲಿ ಸಕ್ರಿಯವಾಗಿದ್ದಾರೆ. ಪ್ರತಿಮನೆಗಳಲ್ಲಿ ಶೌಚಾಲಯ ನಿರ್ಮಿಸುವಹಾಗೂ ಬಳಸುವ ಮೂಲಕ ಸ್ವತ್ಛತೆಗೆಹಾಗೂ ನೈರ್ಮಲ್ಯಕ್ಕೆ ಹೆಚ್ಚು ಗಮನಹರಿಸಬೇಕು ಎಂದು ಮನವಿಮಾಡಿದರು.ನರೇಂದ್ರ ಮೋದಿ ನೇತೃತ್ವದಸರ್ಕಾರ ಜಲಜೀವನ್ ಮಿಷನ್ ಅಡಿಪ್ರತಿ ಮನೆಗೆ ನಳದ ಮೂಲಕ ನೀರುಕೊಡಲು ಕಾಯೊìàನ್ಮುಖವಾಗಿದೆ.2024 ರ ವೇಳೆಗೆ ಪ್ರತಿ ಮನೆಯೂ ನಲ್ಲಿನೀರಿನ ಸಂಪರ್ಕ ಹೊಂದಲಿವೆ. ಕುರ್ಕಿಗ್ರಾಮ ಬಹುಗ್ರಾಮ ಕುಡಿಯುವ ನೀರುಯೋಜನೆಗೆ ಆಯ್ಕೆಯಾಗಿದೆ ಎಂದುತಿಳಿಸಿದರು.ಸಂಸದ ಡಾ| ಜಿ.ಎಂ. ಸಿದ್ದೇಶ್ವರಮಾತನಾಡಿ, ಜಿಲ್ಲೆಯ 365 ಗ್ರಾಮಗಳಿಗೆಜಲ ಜೀವನ್ ಮಿಷನ್‌ನಡಿ ನೀರುಪೂರೈಕೆ ಆಗುತ್ತಿದೆ.
ಇನ್ನುಳಿದಗ್ರಾಮಗಳಿಗೂ ನೀರು ಸರಬರಾಜುಮಾಡಲಾಗುವುದು. ಗ್ರಾಮದಲ್ಲಿ ಸ್ವತ್ಛಸಂಕೀಣರ ಸರ್ಕಾರದ ಲೆಕ್ಕಕ್ಕಿಂತಲೂದೊಡ್ಡದ್ದಾಗಿ ನಿರ್ಮಿಸಿರುವುದುಗ್ರಾಮಸ್ಥರ ಕಾಳಜಿಯ ಪ್ರತೀಕವಾಗಿದೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಒಣ ತ್ಯಾಜ್ಯ ಘಟಕದೊಂದಿಗೆ ಹಸಿತ್ಯಾಜ್ಯ ಘಟಕ ಮಾಡಿಕೊಳ್ಳುವುದರಿಂದರೈತರಿಗೆ ಒಳ್ಳೆಯ ಗೊಬ್ಬರ ದೊರೆಯಲಿದೆ. ಮಹಿಳಾ ಸ್ವ ಸಹಾಯಸಂಘಗಳು ಸದೃಢವಾಗಲಿದೆ. ಗ್ರಾಮಪಂಚಾಯತಿಗೆ ಆದಾಯವೂ ಬರಲಿದೆಎಂದು ತಿಳಿಸಿರು.ಶಾಸಕ ಪ್ರೊ| ಎನ್. ಲಿಂಗಣ್ಣಮಾತನಾಡಿ, ಗ್ರಾಮಕ್ಕೆ ಸರ್ಕಾರಿ ಪಿಯುಕಾಲೇಜು ಮಂಜೂರು ಮಾಡಿಸಲು ಸರ್ವರೀತಿಯ ಪ್ರಯತ್ನ ಮಾಡಲಾಗುವುದುಎಂದು ತಿಳಿಸಿದರು.ಜಿಲ್ಲಾ ಪಂಚಾಯತ್ ಸಿಇಒ ಡಾ|ವಿಜಯ ಮಹಾಂತೇಶ ದಾನಮ್ಮನವರ್‌ಮಾತನಾಡಿ, ಜಿಲ್ಲೆಯಲ್ಲಿ ಕೇಂದ್ರ ಮತ್ತುರಾಜ್ಯದ ನರೇಗಾ, ಜಲ ಜೀವನ್‌ಮಿಷನ್, ಸ್ವತ್ಛ ಭಾರತ್ ಗ್ರಾಮೀಣಯೋಜನೆಯನ್ನು ಯಶಸ್ವಿಯಾಗಿಅನುಷ್ಠಾನಗೊಳಿಸುತ್ತಿದ್ದೇವೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣಉದ್ಯೋಗ ಖಾತರಿ ಯೋಜನೆಯಡಿಜಿಲ್ಲೆಗೆ 31 ಲಕ್ಷ ಮಾನವ ದಿನ ಗುರಿಇದ್ದು, 28ಲಕ್ಷ ಗುರಿ ಮುಟ್ಟಿದ್ದೇವೆ.ಪ್ರತಿಶತ ಶೇ.90 ರಷ್ಟು ಸಾಧನೆಯಾಗಿದೆ.ಜಲಜೀವನ್ ಮಿಷನ್ ಯೋಜನೆಯಡಿ2020-21 ರಲ್ಲಿ 356 ಕಾಮಗಾರಿಗಳಲ್ಲಿ355 ಕಾಮಗಾರಿಗಳಿಗೆ ಆದೇಶ ಕೊಟ್ಟಿದ್ದುಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿದೆ.62 ಕಾಮಗಾರಿ ಮುಕ್ತಾಯವಾಗಿದೆ.21-22 ಸಾಲಿನಲ್ಲಿ 125 ಕಾಮಗಾರಿಗಳಲ್ಲಿ32 ಕಾಮಗಾರಿಗಳಿಗೆ ಟೆಂಡರ್ ಕರೆದು 7ಕಾಮಗಾರಿಗೆ ಕೆಲಸ ನಡೆಯುತ್ತಿದೆ. 40ಡಿಪಿಸ್ ಆಗಬೇಕಿದೆ ಎಂದರು.ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಬಿ. ಆನಂದ್ ಇತರರು ಇದ್ದರು.