Advertisement
ಆದರೆಈ ಸಾಂಕ್ರಾಮಿಕ ಎಲ್ಲೆಡೆ ತನ್ನ ಕಬಂಧಬಾಹುಗಳನ್ನುಚಾಚಿದ್ದ ಸಮಯದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ,ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕೈಗೊಂಡಕಾರ್ಯ ಮಾತ್ರ ಅನನ್ಯ.ಸೋಂಕು ಹೆಚ್ಚುತ್ತಿದ್ದಂತೆ ತಮ್ಮ ಕ್ಷೇತ್ರ ಹೊನ್ನಾಳಿಹಾಗೂ ನ್ಯಾಮತಿ ತಾಲೂಕಿನ ಪ್ರತಿ ಗ್ರಾಮಗಳಿಗೆನಿರಂತರವಾಗಿ ಭೇಟಿ ನೀಡಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿದರು.
Related Articles
Advertisement
75 ಜನರ ಪ್ರಾಣ ಉಳಿಸಿದ ಪ್ರಜ್ಞಾವಂತ : ಎರಡನೇಅಲೆಯಲ್ಲಿ ಕೊರೊನಾ ಉಲ್ಬಣಗೊಂಡಿದ್ದ ವೇಳೆಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ದಿಢೀರ್ ಆಕ್ಸಿಜನ್‌ಖಾಲಿಯಾಗಿತ್ತು. ಎರಡು ಬಾರಿ 75 ಸೋಂಕಿತರುಜೀವನ್ಮರಣ ಹೋರಾಟದಲ್ಲಿದ್ದಾಗ ವೈದ್ಯರು ಆಕ್ಸಿಜನ್‌ಇಲ್ಲ ಎಂದು ಕೈಚೆಲ್ಲಿದರು. ಆಗ ಕೊರೊನಾ ಬಗ್ಗೆ ಸಭೆನಡೆಸುತ್ತಿದ್ದ ರೇಣುಕಾಚಾರ್ಯರು ಸಭೆ ಮೊಟಕುಗೊಳಿಸಿತಕ್ಷಣ ಹರಿಹರ ಸದರನ್ ಗ್ಯಾಸ್ ಏಜೆನ್ಸಿಗೆ ಹೋಗಿಆಕ್ಸಿಜನ್ ತಂದರು.
ಮತ್ತೂಮ್ಮೆ ಭದ್ರಾವತಿಯಸದರನ್ ಗ್ಯಾಸ್ ಏಜನ್ಸಿಗೆ ರಾತ್ರೋರಾತ್ರಿ ಹೋಗಿಆಕ್ಸಿಜನ್ ತಂದು 75 ಜನರ ಪ್ರಾಣ ಉಳಿಸಿದರು.ಬೆಳಗಿನ ಉಪಹಾರ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಕೊರೊನಾ ಪೀಡಿತರು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೋಗಿಗಳು, ಪೊಲೀಸರು, ಆರೋಗ್ಯ ಇಲಾಖೆಯ ನೌಕರರಿಗೆ ಸೇರಿದಂತೆ ಇತರರಿಗೆ ಪ್ರತಿದಿನ ಸುಮಾರು ಎರಡರಿಂದ ಮೂರು ಸಾವಿರ ಜನರಿಗೆ ಉಪಹಾರದವ್ಯವಸ್ಥೆ ಮಾಡಿ ಸ್ವತಃ ಬಡಿಸುವ ಮೂಲಕ ಅನ್ನದಾತಎನಿಸಿಕೊಂಡವರು.
ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ದಿನದಿಂದದಿನಕ್ಕೆ ನೂರಾರು ಕೊರೊನಾ ಸೋಂಕಿತರಿಗೆ ಆಸ್ಪತ್ರೆಗೆದಾಖಲಾಗುತ್ತಿದ್ದಾಗ ಬೆಡ್‌ಗಳ ಕೊರತೆ ಉಂಟಾದಾಗ ತಕ್ಷಣ ಅರಬಗಟ್ಟೆ ವಸತಿ ನಿಲಯವನ್ನು 800 ಬೆಡ್‌ಗಳಕೊರೊನಾ ಕೇರ್ ಸೆಂಟರ್ ಅನ್ನು ಪ್ರಾರಂಭಿಸಿದರು.ಆ ಸೆಂಟರ್‌ನಲ್ಲಿ ಪ್ರತಿದಿನ ದಾಖಲಾಗುವವರಸಂಖ್ಯೆ ದ್ವಿಗುಣಗೊಳ್ಳುತ್ತಿದ್ದಂತೆ ಅವರಿಗೆಲ್ಲ ಪ್ರತಿನಿತ್ಯಊಟ ಉಪಹಾರ ವ್ಯವಸ್ಥೆ ಮಾಡಿದರು.
ಕೇಂದ್ರದಲ್ಲಿಮನರಂಜನಾ ಕಾರ್ಯಕ್ರಮ ಆಯೋಜಿಸಿ ಒಂದು ತಿಂಗಳಕಾಲ ಅವರೇ ಕೇಂದ್ರದಲ್ಲಿ ವಾಸ್ತವ್ಯ ಮಾಡಿದರು.ಸೋಂಕಿತರಿಗೆ ಯೋಗ ಕಲಿಸಿದರು.ಪಕ್ಷಾತೀತ ಕಾರ್ಯಕ್ಕೆ ಪ್ರಶಂಸೆ ಸುರಿಮಳೆ:ರೇಣುಕಾಚಾರ್ಯರ ಬಗ್ಗೆ ದೇಶ-ವಿದೇಶಗಳಲ್ಲಿ,ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆವ್ಯಕ್ತವಾಯಿತು. ವಿವಿಧ ಪಕ್ಷದ ಮುಖಂಡರು ಸಹ ಅವರಸೇವಾಕಾರ್ಯವನ್ನು ಮೆಚ್ಚಿ ಮಾತನಾಡಿದರು. ಮಾಜಿಸಿಎಂ ಯಡಿಯೂರಪ್ಪ ಅವರು “ರಾಜ್ಯದ ಮಾದರಿಶಾಸಕ’ ಎಂದು ಹೊಗಳಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.