Advertisement

ಯುವ ಕಾಂಗ್ರೆಸ್‌ನಿಂದ ವಿವಿಧ ಕಾರ್ಯಕ್ರಮ

07:24 PM Jul 28, 2022 | Team Udayavani |

ದಾವಣಗೆರೆ: ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ಅವರ 75ನೇ ಜನ್ಮದಿನದಅಂಗವಾಗಿ ದಾವಣಗೆರೆಯಲ್ಲಿ ಆ.3ರಂದು ನಡೆಯುವ ಅಮೃತ ಮಹೋತ್ಸವಅಂಗವಾಗಿ ಯುವ ಕಾಂಗ್ರೆಸ್‌ನಿಂದ ಜು.27ರಿಂದ ಆ. 1ರವರೆಗೆ ವಿವಿಧ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು ಯುವಕಾಂಗ್ರೆಸ್‌ ಜಿಲ್ಲಾಧ್ಯಕ್ಷ ನಿಖೀಲ್‌ ಕೊಂಡಜ್ಜಿತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ವೃದ್ಧಾಶ್ರಮದನಿವಾಸಿಗಳಿಗೆ ಹಣ್ಣು, ಬ್ರೆಡ್‌, ಬಿಸ್ಕಿಟ್‌ ವಿತರಣೆ,ಕೇಕ್‌ ಕತ್ತರಿಸುವ ಮೂಲಕ ರಚನಾತ್ಮಕವಾಗಿಸಿದ್ದರಾಮಯ್ಯ ಅವರ 75ನೇ ಜನ್ಮದಿನಆಚರಿಸಲಾಗುವುದು ಎಂದರು.

ಜು. 28ರಂದು ಗುರುವಾರಮಾಯಕೊಂಡ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರಿಗೆಸನ್ಮಾನ, ಚನ್ನಗಿರಿಯಲ್ಲಿ ಅನಾಥಾಶ್ರಮದನಿವಾಸಿಗಳಿಗೆ ಹಣ್ಣು, ಬಿಸ್ಕಿಟ್‌ ವಿತರಣೆ,ಹೊನ್ನಾಳಿಯಲ್ಲಿ ಅಂಧ ಕಲಾವಿದರಿಗೆಗೌರವಾರ್ಪಣೆ ಮಾಡಲಾಗುವುದು.

ಆ. 1 ರಂದು ದಾವಣಗೆರೆ ಉತ್ತರಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದತುರ್ಚಘಟ್ಟದಲ್ಲಿರುವ ವೃದ್ಧಾಶ್ರಮದಲ್ಲಿನನಿವಾಸಿಗಳು, ಜೆ.ಜೆ.ಎಂ ವೈದ್ಯಕೀಯಮಹಾವಿದ್ಯಾಲಯದಲ್ಲಿನ ಒಳರೋಗಿಗಳಿಗೆಹಣ್ಣು ವಿತರಣೆ ಮಾಡಲಾಗುವುದು ಎಂದುಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next