Advertisement

ಮಕ್ಕಳ ತಲೆಗೆ ಧರ್ಮಾಧಾರಿತ ವಿಷಬೀಜ

08:30 PM Jul 24, 2022 | Team Udayavani |

ದಾವಣಗೆರೆ: ಎಲ್ಲದಕ್ಕೂ ಮೀಸಲಾತಿ ಕೇಳುವ, ಅದಕ್ಕಾಗಿ ಹೋರಾಡುವಶೋಷಿತರು, ದಲಿತರು, ಹಿಂದುಳಿದವರು ಪಠ್ಯಪುಸ್ತಕ ಸಮಿತಿ ರಚನೆಯಲ್ಲಿಏಕೆ ಮೀಸಲಾತಿ ಕೇಳಿಲ್ಲ ಎಂದು ಹಿರಿಯ ಚಿಂತಕ ಜಿ.ರಾಮಕೃಷ್ಣಪ್ರಶ್ನಿಸಿದರು.ನಗರದ ಕುವೆಂಪು ಕನ್ನಡಭವನದಲ್ಲಿ ಶನಿವಾರ ಆರಂಭಗೊಂಡ ರಾಜ್ಯಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಸ್ತುತ ಪಠ್ಯಪುಸ್ತಕದಲ್ಲಿ ಮಕ್ಕಳ ತಲೆಗೆ ಧರ್ಮಾಧಾರಿತ ವಿಷಬೀಜಬಿತ್ತಲಾಗುತ್ತಿದೆ. ಪಠ್ಯಪುಸ್ತಕ ಸಮಿತಿ ರಚನೆ ವೇಳೆ ಮೀಸಲಾತಿ ಕೊಡುವಂತೆಕೇಳಬೇಕಿತ್ತು.

Advertisement

ನಮ್ಮ ಮಕ್ಕಳ ಭವಿಷ್ಯ ರೂಪಿಸುವ ಸಮಿತಿಗಳಲ್ಲಿ ನಾವುಇರಲ್ಲಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಬೇಕಿತ್ತು. ಸೇರಿಸಿಕೊಳ್ಳದ್ದರೆ ದೊಣ್ಣೆಹಿಡಿದು ಮೀಸಲಾತಿ ಕೇಳಬೇಕಿತ್ತು. ಆದರೆ, ಯಾರೂ ಅದನ್ನು ಮಾಡಿಲ್ಲ.ಶೇ.40ಕಮಿಶನ್‌ ಎಲ್ಲಿ ಸಿಗುತ್ತೋ ಅಲ್ಲಿ ಹೋಗುವವರು ಇಂದು ನಮ್ಮದೇಶವನ್ನು ಮರುಭೂಮಿ ಮಾಡಲು ಹೊರಟಿದ್ದಾರೆ ಎಂದರು.ಶಿಕ್ಷಣದ ಬಗ್ಗೆ ನಮಗೆ ಕಾಳಜಿ ಕಡಿಮೆ. ಜ್ಞಾನವನ್ನು ಇಂದುಭಾರತೀಕರಣ ಮಾಡಲು ಹೊರಟಿದ್ದೇವೆ. ಶಿಕ್ಷಣ, ದುಡಿಮೆ, ಮಾನವೀಯಸಂಸ್ಕೃತಿ ಮೂರನ್ನೂ ಹೊಲಸು ಮಾಡಲಾಗಿದೆ. ಶಿಕ್ಷಣವನ್ನಂತೂ ತುಳಿದುಚರಂಡಿಗೆ ಹಾಕಿ ಸಂಭ್ರಮಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿದುಡಿಮೆ ಮತ್ತು ಮಾನವೀಯ ಸಂಸ್ಕೃತಿ ಸ್ವಲ್ಪವಾದರೂ ಉಳಿದಿದ್ದರೆಅದಕ್ಕೆ ಚೈತನ್ಯ ತುಂಬುವ ಸಂಕಲ್ಪ ಮಾಡಬೇಕು.

ಶಿಕ್ಷಣಕ್ಕೆ ಮಾರ್ಗದರ್ಶಿಸೂತ್ರ ಬರುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ, ಕುಲ, ಗೋತ್ರ, ಮತಧರ್ಮಗಮನದಲ್ಲಿರಬಾರದು, ಆದರೆ ದಿಕ್ಸೂಚಿ ತಯಾರು ಮಾಡಿದವರಿಗೆಶಿಕ್ಷಣಕ್ಕೆ ಉತ್ತಮ ತಳಪಾಯ ಹಾಕುವ ವ್ಯವಧಾನವೇ ಇಲ್ಲದಿರುವುದುದುರಂತ ಎಂದರು.ಹೋರಾಟದ ಪರ್ವವನ್ನು ಜೀವಂತ ಹಾಗೂ ಶಕ್ತಿಯುತವಾಗಿಮಾಡಬೇಕು. ನಮ್ಮ ಚರ್ಚೆಗಳು ಔಪಚಾರಿಕವಾಗಬಾರದು.ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಡುವ ಪ್ರಜಾಪ್ರಭುತ್ವದ ಸಂಸ್ಕೃತಿಉಳಿಸಬೇಕಾಗಿದೆ. ನಮ್ಮ ದನಿ ಅಡಗಿಸುವ ಪ್ರಯತ್ನ ಹಿಮ್ಮೆಟಿಸಬೇಕು.ಶಿಕ್ಷಣ, ದುಡಿಮೆ ಮಾನವೀಯ ಸಂಸ್ಕೃತಿ ಉಳಿಸಿಕೊಳ್ಳಲು ಹೋರಾಡುವಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದರು.ಸಾಹಿತ್ಯದಲ್ಲಿ ಇಂದು ಸಿದ್ಧಾಂತ ಮತ್ತು ಸತ್ಯ ಎರಡೂ ಇಲ್ಲ.

ಸಾಹಿತ್ಯದಲ್ಲಿ ಸಿದ್ಧಾಂತ ಇರಬಾರದು; ಆದರೆ, ಸತ್ಯ ಇರಬೇಕು ಎಂದುಸಾಹಿತಿಯೊಬ್ಬರು ಹೇಳಿದ್ದರು. ಆದರೆ, ಯಾವುದು ಸತ್ಯ ಯಾವುದುಎಂಬುದನ್ನು ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಸಾಹಿತ್ಯದಲ್ಲಿಸತ್ಯ ಅರಿಯಲು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ ಎಂದರು.ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆವಹಿಸಿದ್ದರು. ಮಾವಳ್ಳಿಶಂಕರ್‌, ಬಿ.ಎಂ. ಹನಿಫ್‌, ಸುಕನ್ಯಾ ಮಾರುತಿ, ಬಿ.ಎಂ.ಹನೀಫ್‌, ಎ.ಬಿ.ರಾಮಚಂದ್ರಪ್ಪ, ಸುಭಾಶ್ಚಂದ್ರ ಇದ್ದರು. ಸಂಚಾಲಕ ಬಿ.ಎನ್‌. ಮಲ್ಲೇಶ್‌ಸ್ವಾಗತಿಸಿದರು. ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next