ದಾವಣಗೆರೆ: ಕೇಂದ್ರ ಸರ್ಕಾರ ಆಹಾರಧಾನ್ಯಮೇಲೆ ಶೇ. 5ರಷ್ಟು ತೆರಿಗೆ ( ಜಿಎಸ್‌ಟಿ)ಹಾಕಲು ಉದ್ದೇಶಿಸಿದ್ದು, ಇದನ್ನು ಕೂಡಲೇಕೈಬಿಡಬೇಕು. ಇಲ್ಲದಿದ್ದರೆ ಜಿಲ್ಲಾ ಅಕ್ಕಿಗಿರಣಿದಾರರ ಸಂಘದ ನೇತೃತ್ವದಲ್ಲಿಪ್ರತಿಭಟನೆ ನಡೆಸಲಾಗುವುದು ಎಂದುಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ಬಕ್ಕೇಶ್‌ಎಚ್ಚರಿಕೆ ನೀಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಜಿಎಸ್‌ಟಿಮಂಡಳಿಯ 47ನೇ ಸಭೆಯಲ್ಲಿಬ್ರಾಂಡ್ ಅಲ್ಲದ ಆಹಾರ ಉತ್ಪನ್ನಗಳಮೇಲೆಯೂ ಶೇ. 5ರಷ್ಟು ಜಿಎಸ್‌ಟಿವಿಧಿಸಲು ತೀರ್ಮಾನಿಸಲಾಗಿದೆ. ಕಳೆದ 25ವರ್ಷಗಳಿಂದ ಆಹಾರ ಪದಾರ್ಥಗಳನ್ನುಅವಶ್ಯಕ ವಸ್ತುಗಳೆಂದು ಪರಿಗಣಿಸಿವ್ಯಾಟ್ ಹಾಗೂ ಜಿಎಸ್‌ಟಿಯಿಂದ ಕೇಂದ್ರಹಾಗೂ ರಾಜ್ಯ ಸರ್ಕಾರಗಳು ವಿನಾಯಿತಿನೀಡಿದ್ದವು.
ಈಗ ಆಹಾರ ಪದಾರ್ಥವಾದಅಕ್ಕಿಗೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಿದರೆಒಂದು ಕ್ವಿಂಟಲ್ ಅಕ್ಕಿಗೆ 300-400 ರೂ.ದರ ಹೆಚ್ಚಲಿದೆ ಎಂದರು. ಅಕ್ಕಿ ಗಿರಣಿಮಾಲೀಕರಿಗೆ ಈಗಾಗಲೇ ಭತ್ತ ಬೆಳೆಯಕೊರತೆಯಿಂದ, ದುಬಾರಿ ವಿದ್ಯುತ್‌ದರದಿಂದ, ಕಾರ್ಮಿಕರ ಸಮಸ್ಯೆಯಿಂದಹಲವು ಕಾನೂನಾತ್ಮಕ ಸಮಸ್ಯೆಗಳಿಂದಮಿಲ್‌ಗಳನ್ನು ನಡೆಸುವುದು ದೊಡ್ಡಸವಾಲಾಗಿದೆ. ಶೇ. 18ರಷ್ಟು ಜಿಎಸ್‌ಟಿಏರಿಕೆ ಮಾಡಿರುವುದು ಕೃಷಿ ಆಧಾರಿತಕೈಗಾರಿಕೆಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ.
ಅಕ್ಕಿಗೆ ಜಿಎಸ್‌ಟಿ ವಿಧಿಸುವುದರಿಂದಭತ್ತ ಬೆಳೆಯುವ ರೈತರಿಗೆ, ಸಂಸ್ಕರಣೆ ಮಾಡುವಮಿಲ್‌ಗಳಿಗೆ ಆಹಾರಧಾನ್ಯ ವ್ಯಾಪಾರಿಗಳಿಗೆಹಾಗೂ ಜನಸಾಮಾನ್ಯ ಗ್ರಾಹಕರಮೇಲೆ ಗಂಭೀರ ಪರಿಣಾಮ ಬೀರಲಿದೆ.ದೇಶದ ಹಣದುಬ್ಬರ ಜಾಸ್ತಿಯಾಗುವಜತೆಗೆ ಆಹಾರ ಭದ್ರತೆಗೂ ಮಾರಕವಾಗಲಿದೆ.ಆದ್ದರಿಂದ ಆಹಾರಧಾನ್ಯಗಳಿಗೆತೆರಿಗೆ ವಿನಾಯಿತಿ ಮುಂದುವರಿಸಬೇಕುಎಂದು ಒತ್ತಾಯಿಸಿದರು.ಜಿಲ್ಲಾ ವಾಣಿಜ್ಯ ಸಂಘದ ಶಂಭುಲಿಂಗಪ್ಪ,ಅಕ್ಕಿ ಗಿರಣಿದಾರರ ಸಂಘದ ಅನಿಲಕುಮಾರ್,ರಾಜಗೋಪಾಲ, ಚಂದ್ರಣ್ಣ, ಜಾವೀದ್‌ಇತರರು ಸುದ್ದಿಗೋಷ್ಠಿಯಲ್ಲಿದ್ದರು.