Advertisement

ಸರ್ಕಾರಿ ಶಾಲೆ ಸಂರಕ್ಷಣೆಗೆ ಬದ್ಧ

03:32 PM Jun 15, 2022 | Team Udayavani |

ದಾವಣಗೆರೆ: ಆಧುನಿಕ ಯುಗದಲ್ಲಿ ಹಣಕ್ಕಿಂತಲೂ ಶಿಕ್ಷಣ ಅತ್ಯಂತ ಮುಖ್ಯ. ಹಾಗಾಗಿ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದುಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಕರೆ ನೀಡಿದರು.ತಾಲೂಕಿನ ಹಳೆ ಬಿಸಲೇರಿ ಗ್ರಾಮದಲ್ಲಿ ದಾನಿಗಳಾದಗೌರಮ್ಮ ಕುಂದೂರು ವೀರಭದ್ರಪ್ಪ ಟ್ರಸ್ಟ್‌ ಹಾಗೂಕುಂದೂರು ಕನ್ಸಟ್ರಕ್ಷನ್‌ ನಿರ್ಮಿಸಿರುವ ನೂತನ ಶಾಲಾ ಕಟ್ಟಡದ ಹಸ್ತಾಂತರ ಸಮಾರಂಭದಲ್ಲಿ ಅವರುಮಾತನಾಡಿದರು.

Advertisement

ರಾಜ್ಯಾದ್ಯಂತ ಅವಶ್ಯಕತೆ ಇರುವಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡದೊಂದಿಗೆಮೂಲ ಸೌಲಭ್ಯಗಳನ್ನು ನೀಡಿ ಗುಣಮಟ್ಟದಶಿಕ್ಷಣ ನೀಡುವ ಧ್ಯೇಯವನ್ನು ಸರ್ಕಾರ ಹೊಂದಿದೆಎಂದರು.ಈ ಹಿಂದೆ ಗ್ರಾಮಗಳಲ್ಲಿ ಶಾಲೆಗೆ ಬೇಕಾದ ಅಗತ್ಯಮೂಲ ಸೌಲಭ್ಯಗಳನ್ನು ಗ್ರಾಮಸ್ಥರೇ ಒದಗಿಸುತ್ತಿದ್ದರು.ಗುರುಕುಲ ಪದ್ಧತಿಯಲ್ಲಿ ಋಷಿ ಮುನಿಗಳಿಗೆ ರಾಜರುಕಲಿಕೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದರು.

ಮುಂದುವರಿದ ಭಾಗದಂತೆ ಸರ್ಕಾರಿ ಶಾಲೆಯನ್ನುದತ್ತು ಪಡೆದು ಅಭಿವೃದ್ಧಿಗೊಳಿಸಿ ಸುಸಜ್ಜಿತಕಟ್ಟಡಗಳನ್ನು ನಿರ್ಮಿಸಿ ತಾನು ಹುಟ್ಟಿದ ನೆಲಕ್ಕೆ ಕೊಡುಗೆ ನೀಡಿದ ಕೆ.ವಿ. ಬಸವನಗೌಡ ಹಾಗೂ ಅವರಕುಟುಂಬದವರ ಸಾಮಾಜಿಕ ಸೇವಾ ಕಾರ್ಯವನ್ನುಎಲ್ಲರೂ ಸ್ಮರಿಸಲೇಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ರೂಪಿಸಿರುವ ನೂತನರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಿಳಿಸಿರುವಂತೆ ಸ್ಕೂಲ್‌ಕಾಂಪ್ಲೆಕ್ಸ್‌ ಎನ್ನುವ ಅಂಗನವಾಡಿ ಒಳಗೊಂಡ ಶಾಲಾ ಪರಿಕಲ್ಪನೆಯನ್ನು ಮೊದಲ ಬಾರಿಗೆ ಹಳೆಬಿಸಲೇರಿಯ ನೂತನ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ಅಳವಡಿಸಿಕೊಂಡು ಕಟ್ಟಡ ನಿರ್ಮಾಣಮಾಡಿರುವುದು ಉತ್ತಮ ಆಲೋಚನೆಯಾಗಿದೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next