Advertisement

ಮೀಸಲು ಹೋರಾಟ ತೀವ್ರಗೊಳಿಸಲು ನಿರ್ಧಾರ

08:12 PM May 14, 2022 | Team Udayavani |

ದಾವಣಗೆರೆ: ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆಒತ್ತಾಯಿಸಿ ತೀವ್ರ ಸ್ವರೂಪದ ಹೋರಾಟ ನಡೆಸಲುಮಂಗಳವಾರ ನಾಯಕರ ಹಾಸ್ಟೆಲ್‌ನಲ್ಲಿ ನಡೆದನಾಯಕ ಸಮಾಜದ ಜಿಲ್ಲಾ ಮಟ್ಟದ ಸಭೆಯಲ್ಲಿನಿರ್ಧರಿಸಲಾಯಿತು.ವಾಲ್ಮೀಕಿ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗಕ್ಷೇತ್ರದಲ್ಲಿ ಅನ್ವಯವಾಗುವಂತೆ ಶೇ. 7.5 ಮೀಸಲಾತಿನೀಡಬೇಕು ಎಂದು ಒತ್ತಾಯಿಸಿ ರಾಜನಹಳ್ಳಿ ವಾಲ್ಮೀಕಿಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಫೆ.10ರಿಂದ ಬೆಂಗಳೂರಿನ ಸ್ವಾತಂತ್ರÂ ಉದ್ಯಾನದಲ್ಲಿನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ,ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಸಭೆಯಲ್ಲಿತೀವ್ರ ಆಕ್ರೋಶ ವ್ಯಕ್ತವಾಯಿತು.

Advertisement

ವಾಲ್ಮೀಕಿ ಶ್ರೀಗಳ ಹೋರಾಟಕ್ಕೆ 90 ದಿನಗಳುಕಳೆದರೂ ಸರ್ಕಾರದಿಂದ ಈ ಕ್ಷಣಕ್ಕೂ ಯಾವುದೇರೀತಿಯ ಆಶ್ವಾಸನೆ, ನಿರ್ಧಾರವಾಗಲೀ ಹೊರಬಂದಿಲ್ಲ. ಹಾಗಾಗಿ ಶ್ರೀಗಳು ರಾಜ್ಯದಾದ್ಯಂತಹೋರಾಟ ನಡೆಸಲು ಅಗತ್ಯ ರೂಪುರೇಷೆಸಿದ್ಧಪಡಿಸಲು ಆದೇಶಿಸಿದ್ದಾರೆ. ಅದರ ಪ್ರಕಾರಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಭಾಗದಲ್ಲಿ ತೀವ್ರಸ್ವರೂಪದ ಹೋರಾಟ ನಡೆಸಲಾಗುವುದು. ಜಿಲ್ಲಾಕೇಂದ್ರ ದಾವಣಗೆರೆ ಒಳಗೊಂಡಂತೆ ಎಲ್ಲ ತಾಲೂಕಿನಲ್ಲಿಹೋರಾಟ ನಡೆಸಲು ಚರ್ಚಿಸಲಾಯಿತು.

ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ನಡೆಸುತ್ತಿರುವಹೋರಾಟದ 95ನೇ ದಿನ ಮೇ 15ರಂದುಮಾಧ್ಯಮ ಗೋಷ್ಠಿ ನಡೆಸಿ ಮುಂದಿನ ಹಂತದಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯಲುತೀರ್ಮಾನಿಸಲಾಯಿತು.ದಾವಣಗೆರೆ ತಾಲೂಕು ನಾಯಕ ಸಮಾಜದಅಧ್ಯಕ್ಷ ಹದಡಿ ಎಂ.ಬಿ. ಹಾಲಪ್ಪ ಅಧ್ಯಕ್ಷತೆವಹಿಸಿದ್ದರು.

ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ,ಮಹಿಳಾ ಘಟಕದ ಅಧ್ಯಕ್ಷೆ ವಿಜಯಶ್ರೀ, ನಿವೃತ್ತಪ್ರಾಧ್ಯಾಪಕ ಡಾ| ಎ.ಬಿ. ರಾಮಚಂದ್ರಪ್ಪ, ಎನ್‌.ಎಂ.ಆಂಜನೇಯ ಗುರೂಜಿ, ಎಸ್‌.ಟಿ. ನೌಕರರ ಸಂಘದಜಿಲ್ಲಾಧ್ಯಕ್ಷ ಶ್ರೀನಿವಾಸಮೂರ್ತಿ, ಮಾರುತಿ, ಕೆಪಿಸಿಸಿಸದಸ್ಯ ಅಣಜಿ ಅಂಜಿನಪ್ಪ, ಗದಿಗೇಶ್‌, ನಾಗನೂರುನಾಗೇಂದ್ರಪ್ಪ, ಕಾಟೀಹಳ್ಳಿ ಶೇಖರಪ್ಪ, ಆನಗೋಡುತಿಪ್ಪಣ್ಣ, ವಿನಾಯಕ, ನಾಗಣ್ಣ, ಮಳ್ಳೆಕಟ್ಟೆ ರೇವಪ್ಪ,ಶ್ಯಾಗಲೆ ಸತೀಶ್‌, ಮಂಜುನಾಥ್‌, ವಿಜಯಕುಮಾರ್‌,ಬಿ.ಎನ್‌. ಸತೀಶ್‌ ಇತರರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next