Advertisement

ಎಲೆಬೇತೂರಿನ ಎಲ್ಲೆಡೆ ನುಡಿ ಹಬ್ಬದ ಸಂಭ್ರಮ

05:49 PM Mar 27, 2022 | Team Udayavani |

ದಾವಣಗೆರೆ: ಎಲ್ಲಿ ನೋಡಿದರೂ ಕನ್ನಡದ ಬಾವುಟ,ಕನ್ನಡಮ್ಮನ ಹಬ್ಬಕ್ಕೆ ಶುಭ ಕೋರುವ ಭಿತ್ತಿಪತ್ರ, ತಳಿರು,ತೋರಣ, ರಂಗೋಲಿಯಿಂದ ಶೃಂಗಾರಗೊಂಡ ಮನೆಗಳಅಂಗಳ, ರಸ್ತೆಗಳು..ಒಟ್ಟಾರೆ ಎಲ್ಲವೂ ಕನ್ನಡಮಯ.ಇಂತಹ ಕನ್ನಡದ ವಾತಾವರಣ ಕಂಡು ಬಂದಿದ್ದುಎಲೆಬೇತೂರು ಗ್ರಾಮದಲ್ಲಿ.

Advertisement

ಶನಿವಾರ ಪ್ರಾರಂಭವಾದ11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯವಹಿಸಿರುವ ಐತಿಹಾಸಿಕ ಹಿನ್ನೆಲೆಯ ಎಲೆಬೇತೂರು ಗ್ರಾಮಅಚ್ಚುಕಟ್ಟು, ವಿಜೃಂಭಣೆಯಿಂದ ಕನ್ನಡದ ನುಡಿಹಬ್ಬಕ್ಕೆಮುನ್ನುಡಿ ಬರೆಯುವ ಮೂಲಕ ಕನ್ನಡಾಭಿಮಾನಕ್ಕೆಸಾಕ್ಷಿಯಾಯಿತು.

ಗ್ರಾಮೀಣ ಭಾಗಕ್ಕೆ ಸಾಹಿತ್ಯದ ಸೊಗಡು, ಅಭಿರುಚಿಗೂಗಾವುದ ದೂರ ಎಂಬ ಮಾತಿಗೆ ಅಪವಾದ ಎನ್ನುವಂತೆಸಾಹಿತ್ಯ ಸಮ್ಮೇಳನದ ಮೊದಲ ದಿನದ ವಾತಾವರಣಇತ್ತು. ಕೇವಲ 15 ದಿನಗಳ ಹಿಂದಷ್ಟೇ ನಿಗದಿಯಾದಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಕಟಿಬದ್ಧರಾದಗ್ರಾಮಸ್ಥರು ತಮಗೆ ವಹಿಸಿದ ಜವಾಬ್ದಾರಿಯನ್ನುಸಮರ್ಥವಾಗಿ ನಿರ್ವಹಿಸಿದರು.

ಪ್ರತಿಯೊಬ್ಬರೂ ತಮ್ಮಮನೆಯ ಹಬ್ಬದಂತೆ ಸಕ್ರಿಯವಾಗಿ ಭಾಗವಹಿಸುವಮೂಲಕ ಕನ್ನಡ ಹಬ್ಬದ ಮೆರುಗು ಹೆಚ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next