ದಾವಣಗೆರೆ: ಮಹಿಳೆಯರಿಗೆ ಸಮಾನತೆಯನೀಡುವ ಜೊತೆಗೆ ಸಮಸ್ಯೆಗಳ ವಿಮೋಚನೆಗೆಹೋರಾಟವನ್ನ ಮೊದಲು ಪ್ರಾರಂಭಿಸಿದ ಕೀರ್ತಿವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದುವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಹೇಳಿದರು.
ಗುರುವಾರ ಸಂಜೆ ಶಿವಯೋಗಿ ಮಂದಿರದಲ್ಲಿನಡೆದ “ಶರಣ ಸಂಗಮ’ ಮತ್ತು ಉಪನ್ಯಾಸಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳುಆಶೀರ್ವಚನ ನೀಡಿದರು. 12ನೇ ಶತಮಾನದಲ್ಲಿಮಹಿಳೆಯರನ್ನು ಮಹಿಳೆಯರಾಗಿ ಕಾಣುವವಾತಾವರಣ ಇರಲಿಲ್ಲ. ಅಂತಹ ಕಾಲಘಟದಲ್ಲಿಬಸವಣ್ಣನವರು ಮಹಿಳೆಯರನ್ನು ಮಹಿಳೆಯರಾಗಿನೋಡಿ, ಅನುಭವ ಮಂಟಪದಲ್ಲಿ ಸಮಾನತೆಯಕಲ್ಪಿಸಿಕೊಟ್ಟರು ಎಂದು ಸ್ಮರಿಸಿದರು.ಅನಾದಿ ಕಾಲದಿಂದಲೂ ಮಹಿಳೆಯರನ್ನುಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕಕ್ಷೇತ್ರಗಳಲ್ಲಿ ದೂರವೇ ಇಡಲಾಗಿತ್ತು.
ಪುರುಷನಾಗಿಜನ್ಮ ತಾಳಿದಾಗಲೇ ಮಹಿಳೆಯರಿಗೆ ಮುಕ್ತಿ ಸಾಧ್ಯಎಂದು ನಂಬಿಸಲಾಗಿತ್ತು. ನ ಸ್ತ್ರೀ ಸ್ವಾತಂತ್ರÂಮರ್ಹತಿಎಂದು ಹೇಳುತ್ತಾ ಹೆಣ್ಣು ಮಕ್ಕಳಿಗೆ ಸ್ವಾತಂತ್ರÂಎಂಬುದೇ ಇರಲಿಲ್ಲ. ಹೆಣ್ಣುಮಕ್ಕಳನ್ನು ಅಕ್ಷರಶಃಗುಲಾಮರನ್ನಾಗಿಸಿದ ಕಾಲದಲ್ಲಿ ಬಸವಣ್ಣನವರುಮಹಿಳೆಯರಿಗಿದ್ದ ಎಲ್ಲ ಸಂಕೋಲೆ ತೆಗೆದೊಗೆದುಸರ್ವ ಸಮಾನತೆ, ಸ್ವಾತಂತ್ರÂ ನೀಡಿದರು ಎಂದರು.ಅಂದು ಬಸವಣ್ಣನವರು ನೀಡಿದ ಸಮಾನತೆ,ಸ್ವಾತಂತ್ರÂ ಇಂದಿನ ಆಧುನಿಕ ಕಾಲದಲ್ಲಿ ಮಹಿಳಾಸಬಲೀಕರಣಕ್ಕೆ ಕಾರಣವಾಗಿದೆ. ಮಹಿಳೆಯರುಎಲ್ಲ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸಬಲರಾಗುವಂತಹವಾತಾವರಣ ನಿರ್ಮಾಣ ಆಗಬೇಕಿದೆ.
ಮಹಿಳೆಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ,ಆರ್ಥಿಕ ಬಲ ಹೆಚ್ಚಿಸುವುದೇ ಸಬಲೀಕರಣಎಂದರ್ಥ. ಸಬಲೀಕರಣ ಎನ್ನುವುದುಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹಾಗೂಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ ಎಂದುತಿಳಿಸಿದರು.ಇಂದಿನ ಕಾಲದಲ್ಲೂ ಅನೇಕ ಮಹಿಳೆಯರುಸರ್ವ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳದೇಇರುವುದು ಸಹ ಕಂಡು ಬರುತ್ತಿದೆ. ಮಹಿಳೆಯರುಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಂತಹಸಾಮರ್ಥ್ಯ ಬೆಳೆಸಿಕೊಳ್ಳಬೇಕು.
ಮಹಿಳೆಯರಿಗೆಸಂಪೂರ್ಣ ಸ್ವಾತಂತ್ರÂ ನೀಡಬೇಕಾಗಿದೆ ಎಂದರು.ಬಸವಣ್ಣನವರು ಒಳಗೊಂಡಂತೆ ಬಸವಾದಿಶರಣರು 12ನೇ ಶತಮಾನದಲ್ಲಿ ಅನುಭವಮಂಟಪದಲ್ಲಿ ಮಹಿಳೆ ಯರಿಗೆ ಸಂಪೂರ್ಣವಾದಸ್ವಾತಂತ್ರÂ ನೀಡಿದ್ದರು. 21ನೇ ಶತಮಾನದಲ್ಲಿಮಹಿಳೆಯರಿಗೆ ಇನ್ನೂ ಸಂಪೂರ್ಣ ಸ್ವಾತಂತ್ರÂನೀಡಲಾಗುತ್ತಿಲ್ಲ.
ಎಲ್ಲರೂ ಆದ್ಯ ಕರ್ತವ್ಯದಂತೆಮಹಿಳೆಯರಿಗೆ ಸಂಪೂರ್ಣವಾದ ಸ್ವಾತಂತ್ರÂನೀಡಬೇಕು ಎಂದರು. ಮೇಯರ್ ಜಯಮ್ಮಗೋಪಿ ನಾಯ್ಕ,ಕಾಂಗ್ರೆಸ್ ಇಂಟಕ್‌ನ ಮಹಿಳಾವಿಭಾಗ ರಾಜ್ಯಾಧ್ಯಕ್ಷೆ ಸವಿತಾಬಾಯಿ ಮಲ್ಲೇಶ್‌ನಾಯ್ಕ, ಮಿಮಿಕ್ರಿ ಕಲಾವಿದ ಬಿ.ಜಿ. ಪ್ರಸಿದ್ಧ ಇತರರುಇದ್ದರು. ಭರಮಸಾಗರದ ಬಾಪೂಜಿ ಸಂಯುಕ್ತಪಿಯು ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ|ಮಮತಾ “ಮಹಿಳಾ ಸಬಲೀಕರಣ, ಅದರ ಕಲ್ಪನೆ’ವಿಷಯದ ಕುರಿತು ಉಪನ್ಯಾಸ ನೀಡಿದರು. ಪಿ.ಸಿ.ಆಶಾ ಸ್ವಾಗತಿಸಿದರು. ಅನುರಾಧ ನಿರೂಪಿಸಿದರು.ರುದ್ರಾಕ್ಷಿಬಾಯಿ ಶರಣು ಸಮರ್ಪಿಸಿದರು.