Advertisement

ವಿದ್ಯಾರ್ಥಿಗಳ ಅನುಕೂಲಕ್ಕೆ ಜಂಟಿ ಒಪ್ಪಂದ

05:03 PM Feb 23, 2022 | Team Udayavani |

ದಾವಣಗೆರೆ: ದಾವಣಗೆರೆಯ ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯದಎಐಎಂಎಲ್‌ ವಿಭಾಗದಲ್ಲಿ ಸೂಕ್ಷ್ಮಸ್‌ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಉದ್ಘಾಟನೆಮತ್ತು ಎಐಎಂಎಲ್‌ ವಿಭಾಗ ಮತ್ತುಸೂಕ್ಷ್ಮಸ್‌ ಕಂಪನಿ ಜೊತೆಗೆ ಜಂಟಿಯಾಗಿಒಪ್ಪಂದ ಸಹಿ ಹಾಕಲಾಯಿತು.ಎಐಎಂಎಲ್‌ ವಿಭಾಗದ ಮುಖ್ಯಸ್ಥಕೀರ್ತಿಪ್ರಸಾದ್‌ ಮಾತನಾಡಿ,ಎಐಎಂಎಲ್‌ ವಿಭಾಗ ಮತ್ತು ಸೂಕ್ಷ್ಮಸ್‌ಕಂಪನಿ ಒಪ್ಪಂದದಿಂದ ವಿದ್ಯಾರ್ಥಿಗಳಸರ್ವತೋಮುಖ ಬೆಳವಣಿಗೆಗೆಸಹಕಾರಿ ಆಗಲಿದೆ.

Advertisement

ಒಪ್ಪಂದದಡಿಯಲ್ಲಿಸಾಕಷ್ಟು ತಾಂತ್ರಿಕ ಚಟುವಟಿಕೆಗಳುಮತ್ತು ಕೈಗಾರಿಕಾ ಕೌಶಲ್ಯತೆಗಳಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿನೀಡಲಾಗುವುದು ಎಂದು ತಿಳಿಸಿದರು.ಸೂಕ್ಷ್ಮಸ್‌ ಕಂಪನಿಯಅಕಾಡೆಮಿಕ್‌ ಮುಖ್ಯಸ್ಥ ಎಂ. ಕಾರ್ತಿಕ್‌ಮಾತನಾಡಿ, ವಿದ್ಯಾರ್ಥಿಗಳಿಗೆಎಲ್ಲ ರೀತಿಯ ತರಬೇತಿ ನೀಡಿಕೈಗಾರಿಕೆಗಳಿಗನುಗುಣವಾಗಿ ತಯಾರುಮಾಡುವ ಜವಾಬ್ದಾರಿ ಹೊಂದಿದ್ದೇವೆ.ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಮತ್ತುಬೆಂಬಲ ಬೇಕಾಗಿದೆ ಎಂದು ಮನವಿ ಮಾಡಿದರು.

ಪ್ರಾಂಶುಪಾಲ ಡಾ|ವೈ. ವಿಜಯಕುಮಾರ್‌ ಮಾತನಾಡಿ,ವಿದ್ಯಾರ್ಥಿಗಳು ಒಪ್ಪಂದದ ಸದುಪಯೋಗ ಪಡೆದುಕೊಂಡು ಉತ್ತಮವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕುಎಂದರು. ತರಬೇತಿ ಮತ್ತು ಉದ್ಯೋಗವಿಭಾಗದ ಮುಖ್ಯಸ್ಥ ಪ್ರೊ| ಟಿ.ಆರ್‌.ತೇಜಸ್ವಿ ಕಟ್ಟಿಮನಿ, ಕೈಗಾರಿಕೆಗಳಲ್ಲಿ ಇರುವಅವಕಾಶ ಗಳನ್ನು ವಿದ್ಯಾರ್ಥಿಗಳಿಗೆಮನದಟ್ಟು ಮಾಡಿದರು. ಬಿ.ಯು.ಮೇಘನಾ ಪ್ರಾರ್ಥಿಸಿದರು. ಸಿ. ಕಾವ್ಯವಂದಿಸಿದರು. ಕೆ. ಆಶಾ ಅತಿಥಿಗಳನ್ನುಪರಿಚಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next