Advertisement
ನಗರದ ಹಳೆ ಡಿ.ಎ.ಆರ್. ಕಚೇರಿ ಆವರಣದಲ್ಲಿ ಭಾನುವಾರ ನಡೆದ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಭವನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿಪಾಲ್ಗೊಂಡು ಅವರು ಮಾತನಾಡಿದರು. ಸೈನಿಕರು ದೇಶದಗಡಿ ಭಾಗದಲ್ಲಿ ರಕ್ಷಣೆ ನೀಡಿದರೆ, ಪೊಲೀಸರು ದೇಶದಒಳಗೆ ಜನಸಾಮಾನ್ಯರಿಗೆ ರಕ್ಷಣೆ ನೀಡುವ ಮೂಲಕದೇಶಸೇವೆಯಲ್ಲಿ ತೊಡಗಿದ್ದಾರೆ ಎಂದು ಬಣ್ಣಿಸಿದರು.
Related Articles
Advertisement
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಎಸ್.ಎ. ರವೀಂದ್ರನಾಥ್ ಮಾತನಾಡಿ, ಪೊಲೀಸರುಒಳ್ಳೆಯ ರೀತಿಯಲ್ಲಿ ಕೆಲಸ ಮಾಡಬೇಕು. ಯಾರಿಗೇಆಗಲಿ ಪೊಲೀಸ್ ಭಾಷೆಯ ಬಳಸದೆ ಸುಸಂಸ್ಕೃತ ಭಾಷೆಬಳಸಬೇಕು. ಒಳ್ಳೆಯ ಕೆಲಸ ಮಾಡಿದರೆ ನಿವೃತ್ತಿ ನಂತರವೂಆರೋಗ್ಯ ಉತ್ತಮವಾಗಿ ಇರುತ್ತದೆ. ಮುಠಾuಳಗಿರಿ ಕೆಲಸಮಾಡಿದರೆ ಕಾಯಿಲೆ ಬರುತ್ತದೆ.
ನಿವೃತ್ತ ಪೊಲೀಸ್‌ಅಧಿಕಾರಿಗಳ ಭವನಕ್ಕೆ 10 ಲಕ್ಷ ಅನುದಾನ ನೀಡಿದ್ದು,ಇನ್ನೂ ಹೆಚ್ಚಿನ ಸಹಾಯ ಮಾಡಲು ಸಿದ್ಧ ಎಂದು ಭರವಸೆನೀಡಿದರು.ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ,ಐದು ಪೈಸೆ ಕೆಲಸ ಮಾಡಿ ಒಂದು ರೂಪಾಯಿ ಪ್ರಚಾರಪಡೆಯುವಂತಹವರು ಇದ್ದಾರೆ.
ಆ ರೀತಿಯಾಗದೆಇತರರಿಗೆ ಮಾದರಿಯಾಗುವಂತೆ ಪೊಲೀಸ್ ಅಧಿಕಾರಿಗಳು,ಸಿಬ್ಬಂದಿ ಕಾಯಕ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದುಕರೆ ನೀಡಿದರು.ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ನಿವೃತ್ತಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇಲಾಖೆಗೆ ಆಸ್ತಿ ಇದ್ದಂತೆ.ಎಲ್ಲರ ಸಹಕಾರದಿಂದ ಉತ್ತಮ ಭವನ ನಿರ್ಮಾಣವಾಗಿದೆ.
ರಕ್ತದಾನ, ಆರೋಗ್ಯ ಶಿಬಿರದಂತಹ ಒಳ್ಳೆಯ ಕೆಲಸಗಳುಭವನದಲ್ಲಿ ನಡೆಸಬೇಕು ಎಂದು ತಿಳಿಸಿದರು.ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಮತ್ತು ಪೊಲೀಸ್‌ಮಹಾ ನಿರೀಕ್ಷಕ ಡಾ| ಶಂಕರ ಬಿದರಿ ಭವನ ಉದ್ಘಾಟಿಸಿದರು.
ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಸಂಘದ ಅಧ್ಯಕ್ಷ ಜಿ.ಕೆ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.ಸಂಘದ ರಾಜ್ಯಾಧ್ಯಕ್ಷ ಎನ್. ನಾಗರಾಜ್, ಕುಮಾರ್‌ಎಸ್. ಕರ್ನಿಂಗ್, ಎನ್. ಲಿಂಗಾರೆಡ್ಡಿ, ಎಂ.ಎಸ್.ಶಿವಾಚಾರ್ಯ, ಬಿ.ಬಿ. ಸಕ್ರಿ, ಕೆ.ಪಿ. ಚಂದ್ರಪ್ಪ, ಹಾವೇರಿ ಎಸ್ಪಿಹನುಮಂತರಾಯ, ನಿಖೀಲ್ ಕೊಂಡಜ್ಜಿ, ಉಮಾ ಶಂಕರಬಿದರಿ ಇತರರು ಇದ್ದರು. ಸಿದ್ಧಗಂಗಾ ಶಾಲಾ ಮಕ್ಕಳುಪ್ರಾರ್ಥಿಸಿದರು. ರವಿನಾರಾಯಣ ಸ್ವಾಗತಿಸಿದರು.