Advertisement

ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ  ಕ್ರಮ

02:13 PM Feb 15, 2022 | Team Udayavani |

ದಾವಣಗೆರೆ: ವಿದ್ಯಾರ್ಥಿಗಳು ಎಂತದ್ದೇಸಂದರ್ಭವೇ ಆಗಲಿ ಅಂಜುವ,ಅಳಕುವ, ಹೆದರುವ ಅಗತ್ಯವೇಇಲ್ಲ. ಜಿಲ್ಲಾಡಳಿತ ವಿದ್ಯಾರ್ಥಿಗಳಸುರಕ್ಷತೆಗೆ ಎಲ್ಲ ರೀತಿಯ ಅಗತ್ಯ ಕ್ರಮತೆಗೆದುಕೊಂಡಿದೆ ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ತಿಳಿಸಿದರು.

Advertisement

ಸೋಮವಾರ ನಗರದ ಮೋತಿವೀರಪ್ಪ, ಸೀತಮ್ಮ ಕಾಲೇಜಿಗೆಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜಿಲ್ಲೆಯಲ್ಲಿ ಸರ್ಕಾರಿ, ಅನು ದಾನಿತ,ಅನುದಾನರಹಿತ 460 ಪ್ರೌಢಶಾಲೆಗಳಿವೆ. ಹೈಕೋರ್ಟ್‌ ಆದೇಶದಂತೆಪ್ರೌಢಶಾಲೆಗಳನ್ನ ಪುನರಾರಂಭಮಾಡಲಾಗಿದೆ. ಎಲ್ಲಿಯೂ ಯಾವುದೇರೀತಿಯ ಅಹಿತಕರ ಘಟನೆ ನಡೆದಿಲ್ಲಎಂದರು.ನಗರ ಮತ್ತು ಗ್ರಾಮೀಣ ಭಾಗದಲ್ಲಿಯಾವುದೇ ರೀತಿಯ ಅಹಿತಕರಘಟನೆ ನಡೆಯದಂತೆ ಮುಂಜಾಗ್ರತಾಕ್ರಮವಾಗಿ ನೋಡಲ್‌ ಅಧಿಕಾರಿಗಳನ್ನುನೇಮಿಸಲಾಗಿದೆ.

ಅವರು ಸ್ಥಳದಲ್ಲೇಮೊಕ್ಕಾಂ ಮಾಡಿದ್ದಾರೆ. ನಾನು, ಜಿಲ್ಲಾರಕ್ಷಣಾಧಿಕಾರಿ, ಅಪರ ಜಿಲ್ಲಾಧಿಕಾರಿಒಳಗೊಂಡಂತೆ ಎಲ್ಲ ಅಧಿಕಾರಿಗಳುμàಲ್ಡ್‌ನಲ್ಲಿ ಇದ್ದೇವೆ. ನಮ್ಮ ತಂಡಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ.ಮಕ್ಕಳು ಶಾಲೆಗೆ ಬರುವುದುಜ್ಞಾನಾರ್ಜನೆಗಾಗಿ. ಅಂತಹಯಾವುದೇ ವಿದ್ಯಾರ್ಥಿ ಅಂಜುವ,ಅಳಕುವ, ಹೆದರುವ ಅಗತ್ಯವೇಇಲ್ಲ. ಜಿಲ್ಲಾಡಳಿತ ಎಲ್ಲ ರೀತಿಯಸುರಕ್ಷತಾ ಕ್ರಮ ತೆಗೆದುಕೊಂಡಿದೆ.

ನಾನು ಭೇಟಿ ನೀಡಿದ ಶಾಲೆಗಳಲ್ಲಿಎಲ್ಲ ಸಮುದಾಯದ ಮಕ್ಕಳನ್ನುಮಾತನಾಡಿಸಿದಾಗ ಯಾವುದೇರೀತಿಯ ಭಯ, ಅಂಜುವವಾತಾವರಣ ಇಲ್ಲ. ಏನೂ ತೊಂದರೆಆಗಿಲ್ಲ ಎಂದು ತಿಳಿಸಿದ್ದಾರೆ/ ಎಲ್ಲರೂಧೈರ್ಯ, ಆತ್ಮವಿಶ್ವಾಸದಿಂದ ಶಾಲೆಗಳಿಗೆಎಂದಿನಂತೆ ಆಗಮಿಸಿದ್ದಾರೆ.ಹೈಕೋರ್ಟ್‌ ನೀಡುವ ಆದೇಶವನ್ನುಕಟ್ಟುನಿಟ್ಟಾಗಿ ಪಾಲನೆ ಮಾಡಲುಜಿಲ್ಲಾಡಳಿತ ಎಲ್ಲ ರೀತಿಯಲ್ಲಿಸಿದ್ಧವಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next