ದಾವಣಗೆರೆ: ಜಿಲ್ಲೆಯ ಎಲ್ಲಶಾಲಾ-ಕಾಲೇಜುಗಳು ಭಾನುವಾರಸಂಜೆಯೊಳಗೆ ಆನ್ ಇಲ್ಲವೇ ಆಫ್‌ಲೈನ್‌ನಲ್ಲಿವಿದ್ಯಾರ್ಥಿ ಗಳ ಪೋಷಕರ ಸಭೆ ನಡೆಸಿ ಅವರಲ್ಲಿವಿಶ್ವಾಸ ತುಂಬುವ ಕೆಲಸ ಮಾಡಬೇಕು.ಯಾರೂ ಈ ಬಗ್ಗೆ ಆತಂಕಕ್ಕೊಳಗಾಗುವುದುಬೇಡ. ಫೆ. 14ರಿಂದ (ಸೋಮವಾರದಿಂದ)ಒಂಭತ್ತು ಹಾಗೂ ಹತ್ತನೇ ತರಗತಿಆರಂಭಿಸಲು ಎಲ್ಲ ರೀತಿಯ ಮುನ್ನೆಚ್ಚರಿಕಾಕ್ರಮಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾಸಭಾಂಗಣದಲ್ಲಿ ಶನಿವಾರ ನಡೆದ ಕಾಲೇಜುಗಳಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿಅವರು ಮಾತನಾಡಿದರು. ವಿದ್ಯಾರ್ಥಿಗಳುಹೈಕೋರ್ಟ್ ಪ್ರಸ್ತುತ ನೀಡಿದಮಧ್ಯಂತರ ಆದೇಶದಂತೆ ಶಾಲಾಸಮವಸ್ತ್ರದಲ್ಲಿ ಶಾಲೆಗೆ ಬರಬೇಕು.ಗೊಂದಲದ ವಾತಾವರಣ ತಿಳಿಯಾಗುವರೆಗೆಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳುಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ.
ಜತೆಗೆ ಶಿಕ್ಷಕರು, ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳು, ಅನಿವಾರ್ಯ ಸಂದರ್ಭದಲ್ಲಿಪೋಷಕರನ್ನು ಹೊರತುಪಡಿಸಿ ಬೇರೆಯವರುಶಾಲಾ ಆವರಣ ಪ್ರವೇಶ ಮಾಡಬಾರದುಎಂದು ನಿರ್ದೇಶನ ನೀಡಲಾಗಿದೆ.ಯಾವುದೇ ಸಮಸ್ಯೆಯಾದರೆ 112 ಸಂಖ್ಯೆಗೆಕರೆ ಮಾಡಿದರೆ ತಕ್ಷಣ ಪೊಲೀಸ್ ಸಿಬ್ಬಂದಿಸ್ಪಂದಿಸುತ್ತಾರೆ ಎಂದರು.ಗೊಂದಲದ ವಾತಾವರಣತಿಳಿಯಾಗುವವರೆಗೂ ಎಲ್ಲ ಜಿಲ್ಲಾ ಮಟ್ಟದಅಧಿಕಾರಿಗಳು ಜಿಲ್ಲೆಯ ಎಲ್ಲೆಡೆ ಸಂಚರಿಸಿಪರಿಸ್ಥಿತಿ ಅವಲೋಕನ ಮಾಡುತ್ತಾರೆ.
ಇಡೀ ಜಿಲ್ಲಾಡಳಿತ, ಪೊಲೀಸ್ ಇಲಾಖೆವಿದ್ಯಾರ್ಥಿಗಳು ಹಾಗೂ ಶಿಕ್ಷಕರ ರಕ್ಷಣೆ, ಭದ್ರತೆಗೆಬದ್ಧವಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕಶಿಕ್ಷಣ ಇಲಾಖೆ ಉಪನಿರ್ದೇಶಕರು, ಕ್ಷೇತ್ರಶಿಕ್ಷಣಾಧಿಕಾರಿಗಳು ಶಿಕ್ಷಕರ, ಪ್ರಾಂಶುಪಾಲರಸಭೆ ಕರೆಯದೆ ಅವರು ಶಾಲೆಯಲ್ಲೇಇರುವಂತೆ ನೋಡಿಕೊಳ್ಳಬೇಕು. ಜತೆಗೆಶಿಕ್ಷಣ ಇಲಾಖೆಯಲ್ಲಿ ಯಾರಿಗೂ ರಜೆಕೊಡಬಾರದು ಎಂದು ಸೂಚನೆ ನೀಡಿದರು.
ಜಿಲ್ಲೆಯ ಪದವಿ ತರಗತಿಗಳಲ್ಲಿ30,828, ಪಿಯು ತರಗತಿಗಳಲ್ಲಿ 38,190ಹಾಗೂ ಪ್ರೌಢಶಾಲೆಗಳಲ್ಲಿ 1.15ಲಕ್ಷವಿದ್ಯಾರ್ಥಿಗಳಿದ್ದಾರೆ. ಅವರ ಭವಿಷ್ಯರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆಎಂದರು.