Advertisement

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಯಕರ್ತರ ಪ್ರತಿಭಟನೆ

03:49 PM Feb 11, 2022 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ 2022-23ನೇಸಾಲಿನ ಬಜೆಟ್‌ನಲ್ಲಿ ಸರ್ವರಿಗೆ ಉಚಿತವಾಗಿ ಶಿಕ್ಷಣ,ಆರೋಗ್ಯ ಸೇವೆ ಒದಗಿಸುವ ಘೋಷಣೆ ಮಾಡಬೇಕು.ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿ ವರದಿ ಬಿಡುಗಡೆಮಾಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ (ಡಿಎಸ್‌-4) ಕಾರ್ಯಕರ್ತರುನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆನಡೆಸಿದರು.
ಸ್ವಾತಂತ್ರಾÂ ನಂತರದ ಏಳು ದಶಕಗಳಲ್ಲಿ ಯಾವುದೇಸರ್ಕಾರ ಸರ್ವರಿಗೆ ಉಚಿತವಾಗಿ ಶಿಕ್ಷಣ ಮತ್ತು ಆರೋಗ್ಯಸೇವೆ ಒದಗಿಸಿಲ್ಲ. ಹಾಗಾಗಿ ಲಕ್ಷಾಂತರ ಜನರು ಉತ್ತಮಶಿಕ್ಷಣ, ಆರೋಗ್ಯಸೇವೆಯಿಂದ ವಂಚಿತರಾಗಿದ್ದಾರೆ.

Advertisement

ಜನಗಳಿ ಂದ ಆಯ್ಕೆಯಾಗಿರುವ ಸರ್ಕಾರಕ್ಕೆ ಪ್ರಜೆಗಳಿಗೆಉಚಿತವಾಗಿ ಉತ್ತಮ ಆರೋಗ್ಯ, ಶಿಕ್ಷಣದ ವ್ಯವಸ್ಥೆಮಾಡುವ ಗುರುತರ ಜವಾಬ್ದಾರಿ ಹೊಂದಿರುತ್ತದೆ.ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಸರ್ವರಿಗೂಉಚಿತವಾಗಿ ಶಿಕ್ಷಣ, ಆರೋಗ್ಯ ಸೇವೆ ಒದಗಿಸುವಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next