Advertisement

18 ರಿಂದ ಬೃಹತ್‌ ಕೃಷಿ ಮೇಳ: ಮಹದೇವಪ್ಪ

03:46 PM Feb 11, 2022 | Team Udayavani |

ದಾವಣಗೆರೆ: ಕೃಷಿ, ತೋಟಗಾರಿಕೆ ಒಳಗೊಂಡಂತೆವಿವಿಧ ಇಲಾಖೆಗಳ ಸಹಕಾರದಲ್ಲಿ ಫೆ.18 ರಿಂದ20ರವರೆಗೆ ಸರ್ಕಾರಿ ಬಾಲಕರ ಪ್ರೌಢಶಾಲಾಮೈದಾನದಲ್ಲಿ ಕೃಷಿಮೇಳ ಆಯೋಜಿಸಲಾಗಿದೆಎಂದು ರಾಜ್ಯ ಕೃಷಿ ಅಭಿಯಾನ ಟ್ರಸ್ಟ್‌ ನಿರ್ದೇಶಕಮಹದೇವಪ್ಪ ದಿದ್ದಗಿ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ದಾವಣಗೆರೆಯಲ್ಲಿ ಇದೇ ಪ್ರಥಮ ಬಾರಿಗೆಯು.ಎಸ್‌. ಕಮ್ಯೂನಿಕೇಷನ್‌, ಹುಬಳ್ಳಿಯದೇಶಪಾಂಡೆ ಫೌಂಡೇಷನ್‌ ಹಾಗೂ ಸರ್ಕಾರದವಿವಿಧ ಇಲಾಖೆ ಸಹಕಾರದಲ್ಲಿ ಬೃಹತ್‌ ಕೃಷಿಮೇಳ ನಡೆಸಲಾಗುತ್ತಿದೆ ಎಂದರು.

ಫೆ. 18ರಂದು ಬೆಳಗ್ಗೆ 11:45 ಗಂಟೆಗೆಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕೃಷಿಮೇಳಉದ್ಘಾಟಿಸುವರು. ಜಿಲ್ಲಾ ಪಂಚಾಯತ್‌ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಡಾ|ವಿಜಯ ಮಹಾಂತೇಶ್‌ ದಾನಮ್ಮನವರ್‌, ಜಿಲ್ಲಾರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್‌, ಮೇಯರ್‌ಎಸ್‌.ಟಿ. ವೀರೇಶ್‌, ಕೃಷಿ ಇಲಾಖೆ ಜಂಟಿನಿರ್ದೇಶಕ ಡಾ| ಶ್ರೀನಿವಾಸ್‌ ಚಿಂತಾಲ್‌ ಇತರರು ಭಾಗವಹಿಸುವರು.

ಫೆ. 19ರಂದು ಸಂಜೆ 6:30ಕ್ಕೆನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ಸಂಸದಡಾ| ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್‌.ಎ.ರವೀಂದ್ರನಾಥ್‌, ಡಾ| ಶಾಮನೂರು ಶಿವಶಂಕರಪ್ಪ,ಎಸ್‌.ವಿ. ರಾಮಚಂದ್ರ, ಪ್ರೊ| ಎನ್‌. ಲಿಂಗಣ್ಣ,ಎಸ್‌. ರಾಮಪ್ಪ, ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಸಾವಯವಕೃಷಿ ತಜ್ಞ ಡಾ| ಕೆ.ಆರ್‌. ಹುಲ್ಲುನಾಚೇಗೌಡ, ಕೃಷಿಸಲಹೆಗಾರ ಡಾ| ನಾಗನಗೌಡ ಮಲಕಾಜಿ, ಬಿಜೆಪಿರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್‌ಇತರರು ಭಾಗವಹಿಸುವರು ಎಂದು ಹೇಳಿದರು.

ಒಂದೇ ಸೂರಿನಡಿ ರೈತರಿಗೆ ಜಿಲ್ಲೆಯ ವಿವಿಧಕೃಷಿ, ಇತರೆ ಉದ್ಯಮಗಳ ಪರಿಚಯ, ಸುಧಾರಿತ,ಸಮಗ್ರ ಸುಸ್ಥಿರ ಕೃಷಿ ಪದ್ಧತಿ ಮಾಹಿತಿ, ತಾಂತ್ರಿಕಸಾವಯವ ಕೃಷಿ, ಮಣ್ಣಿನ ಫಲವತ್ತತೆ ಕುರಿತುವಿಚಾರಧಾರೆ, ಪ್ರಾತ್ಯಕ್ಷಿಕೆ, ಹಸ್ತ, ಯಂತ್ರಚಾಲಿತಅತ್ಯಾಧುನಿಕ, ಆಧುನಿಕ ಯಂತ್ರಗಳ ಪ್ರದರ್ಶನಮಾಹಿತಿ ನೀಡಲಾಗುವುದು.ಈಗಾಗಲೇ 130ಮಳಿಗೆಗಳು ನೋಂದಣಿಯಾಗಿವೆ. 180-200ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟದವ್ಯವಸ್ಥೆ ಮಾಡಲಾಗುವುದು. ರೈತಾಪಿ ವರ್ಗದವರಿಗೆಉಚಿತ ಪ್ರವೇಶಾವಕಾಶ ಇದೆ ಎಂದರು.ಯು.ಎಸ್‌. ಕಮ್ಯುನಿಕೇಷನ್‌ನ ಎಂ.ಎಸ್‌.ಕೆಉಮಾಪತಿ, ಕಲ್ಮೇಶ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next