Advertisement

ಇ-ಟೆಂಡರ್‌ನಲ್ಲಿ ಮೆಕ್ಕೆಜೋಳ ಖರೀದಿ ವಿಸ್ತರಣೆ

04:41 PM Feb 02, 2022 | Team Udayavani |

ದಾವಣಗೆರೆ: ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುವ ರಾಜ್ಯದಎಲ್ಲ ಜಿಲ್ಲೆಗಳಲ್ಲಿ ಮೆಕ್ಕೆಜೋಳವನ್ನು ಇ-ಟೆಂಡರ್‌ ವ್ಯವಸ್ಥೆಮೂಲಕ ಖರೀದಿಸಲು ರಾಜ್ಯ ಕೃಷಿ ಉತ್ನನ್ನ ಮಾರುಕಟ್ಟೆಸಮಿತಿ ಚಿಂತನೆ ನಡೆಸಿದೆ. ರಾಜ್ಯದಲ್ಲಿ ದಾವಣಗೆರೆಯ ಕೃಷಿ ಉತ್ಪನ್ನಮಾರುಕಟ್ಟೆಯಲ್ಲಿ ಮೆಕ್ಕೆಜೋಳವನ್ನು ಇ-ಟೆಂಡರ್‌ವ್ಯವಸ್ಥೆಯಲ್ಲಿ ಖರೀದಿಗೆ ಅವಕಾಶ ಮಾಡಿಕೊಟ್ಟ ಬಳಿಕಮೆಕ್ಕೆಜೋಳಕ್ಕೆ ಉತ್ತಮ ಧಾರಣೆ ದೊರಕಿದೆ.

Advertisement

ಪ್ರತಿ ಕ್ವಿಂಟಲ್‌ಗೆ ಸರಾಸರಿ 1400 ರೂ. ಆಸುಪಾಸು ಇದ್ದ ಮೆಕ್ಕೆಜೋಳದರ ಈಗ 2000 ರೂ. ದಾಟಿದೆ. ಹೀಗಾಗಿ ದಾವಣಗೆರೆಎಪಿಎಂಸಿಯನ್ನೇ ಮಾದರಿಯನ್ನಾಗಿಟ್ಟುಕೊಂಡುಮೆಕ್ಕೆಜೋಳ ಬೆಳೆಯುವ ಉಳಿದ ರಾಜ್ಯದಜಿಲ್ಲೆಗಳಲ್ಲಿಯೂ ಇ-ಟೆಂಡರ್‌ ವ್ಯವಸ್ಥೆಯಲ್ಲಿಮೆಕ್ಕೆಜೋಳ ತಂದು ಬೆಳೆಗಾರರಿಗೆ ಅನುಕೂಲ ಕಲ್ಪಿಸಲುಎಪಿಎಂಸಿ ಮುಂದಾಗಿದೆ.

ಎಪಿಎಂಸಿ ನಿರ್ದೇಶಕರಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ (ವಿಡಿಯೋಕಾನ್‌#ರೆನ್ಸ್‌) ಸಭೆಯಲ್ಲಿ ಈ ಕುರಿತು ಎಪಿಎಂಸಿಗಳಿಗೆನಿರ್ದೇಶನವನ್ನೂ ನೀಡಲಾಗಿದೆ.ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 150 ಲಕ್ಷಮೆಟ್ರಿಕ್‌ ಟನ್‌ ಮೆಕ್ಕೆಜೋಳ ಉತ್ಪಾದನೆಯಾಗುತ್ತಿದೆ.

ಎಪಿಎಂಸಿಯ ಈ ಮಹತ್ವದ ನಿರ್ಧಾರ ಸಮರ್ಪಕವಾಗಿಅನುಷ್ಠಾನವಾದರೆ ರಾಜ್ಯದ ಹಾವೇರಿ, ಬಳ್ಳಾರಿ,ಕೊಪ್ಪಳ, ಗದಗ, ಬಾಗಲಕೋಟೆ, ಬೆಳಗಾವಿ,ವಿಜಯಪುರ,ಚಿತ್ರದುರ್ಗ, ಹಾಸನ, ಶಿವಮೊಗ್ಗ,ಮಂಡ್ಯ, ಮೈಸೂರು ಸೇರಿದಂತೆ ಇನ್ನಿತರ ಜಿಲ್ಲೆಗಳಎಪಿಎಂಸಿಗಳಲ್ಲಿಯೂ ಮೆಕ್ಕೆಜೋಳ ಇ-ಟೆಂಡರ್‌ಮೂಲಕ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ.

ಈವ್ಯವಸ್ಥೆ ಆರಂಭಿಸುವ ಮುನ್ನ ವರ್ತಕರು, ದಲ್ಲಾಳಿಗಳು,ರೈತರು ಹಾಗೂ ಹಮಾಲಿ ಕಾರ್ಮಿಕರ ಸಭೆ ನಡೆಸಿ,ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯಬೇಕಾಗಿದೆ.

Advertisement

ಇ-ಟೆಂಡರ್‌ ವ್ಯವಸ್ಥೆಯಲ್ಲಿ ಹೆಚ್ಚಿನ ವರ್ತಕರುಭಾಗವಹಿಸುವುದರಿಂದ ರೈತರ ಬೆಳೆಗೆ ಸ್ಪರ್ಧಾತ್ಮಕಬೆಲೆ ಸಿಗುತ್ತದೆ. ರೈತರಿಗೆ ಅನುಕೂಲ ಆಗುವ ಜತೆಗೆಎಪಿಎಂಸಿಗೆ ಹೆಚ್ಚಿನ ಆವಕ ಬಂದು ತೆರಿಗೆಯೂ ಹೆಚ್ಚುಬರಲಿದೆ. ಇದು ಎಪಿಎಂಸಿಗಳ ಮೂಲಸೌಕರ್ಯಅಭಿವೃದ್ಧಿಗೂ ಸಹಕಾರಿಯಾಗಲಿದೆ.

ಎಲ್ಲಕ್ಕಿಂತಮುಖ್ಯವಾಗಿ ರೈತರ ಖಾತೆಗೆ ಮಾರಾಟದ ಹಣ ಜಮೆಆಗಲಿದೆ. ವರ್ತಕರು, ದಲ್ಲಾಳಿಗಳಿಂದ ರೈತರಿಗಾಗುವಹಣ ಜಮೆ, ತೂಕ, ಸ್ಯಾಂಪಲ್‌ ಸೇರಿದಂತೆ ಇನ್ನಿತರವಿಚಾರಗಳಲ್ಲಿ ಆಗುವ ಮೋಸ ತಪ್ಪಲಿದೆ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next