Advertisement

ಪೋಲಿಯೋ ಅಭಿಯಾನ ಯಶಸ್ವಿಗೊಳಿಸಿ

12:47 PM Jan 30, 2022 | Team Udayavani |

ದಾವಣಗೆರೆ: ಜಿಲ್ಲೆಯಾದ್ಯಂತ ಫೆಬ್ರವರಿ 27ರಿಂದಮಾರ್ಚ್‌ 2ವರೆಗೆ ಪಲ್ಸ್‌ ಪೋಲಿಯೋ ಅಭಿಯಾನ ನಡೆಯಲಿದ್ದು ವಿವಿಧ ಇಲಾಖೆಗಳು ಸಹಕಾರ ನೀಡುವಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾಖೆ ಕಚೇರಿಯಲ್ಲಿ ಶನಿವಾರ ನಡೆದ 2021-22ನೇಸಾಲಿನ ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನದಪೂರ್ವಸಿದ್ಧತಾ ಸಭೆ ಹಾಗೂ ಸ್ಪರ್ಶ್‌ ಕುಷ್ಠರೋಗಅರಿವು ಆಂದೋಲನ ಜಿಲ್ಲಾ ಸಮನ್ವಯ ಸಮಿತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನವನ್ನು ಅಗತ್ಯಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕಯಶಸ್ವಿಗೊಳಿಸಬೇಕು.

ಬೂತ್‌ಗೆ ಬರಲು ಆಗದೇಇರುವ ಮಕ್ಕಳಿಗೆ ಮನೆಗೆ ತೆರಳಿ ಲಸಿಕೆ ನೀಡಬೇಕು.ಬಸ್‌ನಿಲ್ದಾಣಗಳಲ್ಲಿ ಲಸಿಕಾ ಬೂತ್‌ ನಿರ್ಮಿಸಿ ಬೇರೆಡೆಗೆತೆರಳುವ ಮಕ್ಕಳಿಗೂ ತಪ್ಪದೇ ಲಸಿಕೆ ನೀಡಬೇಕು ಎಂದರು.
ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರ ಡಾ| ಶ್ರೀಧರ್‌ಮಾತನಾಡಿ, ಫೆ. 27ರಂದು ಬೂತ್‌ಗಳಲ್ಲಿ 0-5ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಹಾಕಲಾಗುವುದು.

ಫೆ. 28 ರಿಂದ ಮಾರ್ಚ್‌ 2ವರೆಗೆಮೂರು ದಿನಗಳ ಕಾಲ ಮನೆ ಮನೆ ಭೇಟಿ ಮಾಡಿಬಿಟ್ಟು ಹೋದ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. 0-5 ವರ್ಷದ ಯಾವುದೇ ಮಗುಪೋಲಿಯೋ ಹನಿ ಹಾಕಿಸದೇ ಉಳಿಯಲಾರದಂತೆಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next