Advertisement

ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

02:02 PM Jan 26, 2022 | Team Udayavani |

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ 16ನೇ ವಾಡ್‌ìನ ವಿನೋಬ ನಗರದಲ್ಲಿ ಸಾವಿರಾರುನೈಜ ಮತದಾರರನ್ನು ಪಟ್ಟಿಯಿಂದಕೈಬಿಟ್ಟಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ವಿನೋಬನಗರ ನಿವಾಸಿಗಳುಮಹಾನಗರ ಪಾಲಿಕೆ ಆವರಣದಲ್ಲಿನಡೆದ ರಾಷ್ಟ್ರೀಯ ಮತದಾರರದಿನಾಚರಣೆ ಸ್ಥಳದ ಬಳಿ ಪ್ರತಿಭಟನೆ ನಡೆಸಿದರು.

Advertisement

ನಗರ ಪಾಲಿಕೆ ವ್ಯಾಪ್ತಿಯ 16ನೇವಾರ್ಡ್‌ನ ವಿನೋಬನಗರದಲ್ಲಿಹಲವಾರು ವರ್ಷಗಳಿಂದ ವಾಸಮಾಡುತ್ತಿ ರುವ ಸಾವಿರಾರುಮತದಾರರನ್ನು ಏಕಾಏಕಿ ಮತದಾರರಪಟ್ಟಿಯಿಂದ ತೆಗೆದು ಹಾಕಲಾಗಿದೆ.

ಅನೇಕ ಲೋಕಸಭೆ, ವಿಧಾನಸಭೆ,ನಗರಪಾಲಿಕೆ, ವಿವಿಧ ಚುನಾವಣೆಯಲ್ಲಿಮತದಾನ ಮಾಡಿರುವಂತಹ ಎರಡುಸಾವಿರಕ್ಕೂ ಹೆಚ್ಚು ಜನರ ಹೆಸರುಗಳುಈಚೆಗೆ ಪ್ರಕಟಗೊಂಡ ಮತದಾರರಪಟ್ಟಿಯಲ್ಲೇ ಇಲ್ಲ. ನೈಜ ಮತದಾರರನ್ನುಕೈ ಬಿಟ್ಟಿರುವ ಸಂಬಂಧಿತರ ವಿರುದ್ಧಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮತದಾರರ ಪಟ್ಟಿಯಿಂದಹೆಸರುಗಳನ್ನು ತೆಗೆದು ಹಾಕುವ ಮುನ್ನಏನಾದರೂ ಲೋಪ ದೋಷಗಳಿದ್ದರೆಸಂಬಂಧಿತರ ಗಮನಕ್ಕೆ ತರಬೇಕಿತ್ತು.ಆದರೆ ಯಾವುದನ್ನೂ ಗಮನಕ್ಕೂ ತರದೆ ಕೈಬಿಡಲಾಗಿದೆ. ಈವರೆಗೆ ಮತದಾನಮಾಡಿರುವಂಥವರ ಹೆಸರುಗಳೇ ಇಲ್ಲ ಎನ್ನುವುದು ಸಂವಿಧಾನ ಮತ್ತುಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾದುದುಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next