ದಾವಣಗೆರೆ: ಕೊರೊನಾದ ಮೂರನೇಅಲೆಯನ್ನು ಸಮರ್ಥವಾಗಿ ಎದುರಿಸುವನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮತೆಗೆದುಕೊಳ್ಳಬೇಕು. ಕೊರೊನಾದಿಂದಮೃತಪಟ್ಟವರ ಕುಟುಂಬಕ್ಕೆ ನಿಗದಿತಅವಧಿಯಲ್ಲಿ ಪರಿಹಾರ ನೀಡಬೇಕುಎಂದು ಒತ್ತಾಯಿಸಿ ಸೋಮವಾರಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್‌ಇಂಡಿಯಾ ಕಾರ್ಯಕರ್ತರು ಆನ್‌ಲೈನ್‌ಪ್ರತಿಭಟನೆ ನಡೆಸಿದರು.ಕೊರೊನಾ ಸೋಂಕಿತರ ಸಂಖ್ಯೆಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೇ. 96ರಷ್ಟುಸೋಂಕಿತರು ಮನೆ ಆರೈಕೆಯಲ್ಲೇಇದ್ದಾರೆ.
ಆದರೆ ಅವರಿಗೆ ಅಗತ್ಯನೆರವು ಲಭಿಸುತ್ತಿಲ್ಲ. ಪರಿಣಾಮವಾಗಿಪ್ರತ್ಯೇಕ ವಾಸದಲ್ಲಿರುವ ಸೋಂಕಿತರಪರಿಸ್ಥಿತಿ ಬಿಗಡಾಯಿಸುತ್ತಿದೆ. ದೊಡ್ಡಸಂಖ್ಯೆಯಲ್ಲಿರುವ ಅಸಂಘಟಿತವಲಯದ ಶ್ರಮಿಕರಿಗೆ ಉಚಿತಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳುಲಭ್ಯವಿಲ್ಲದಾಗಿದೆ. ಕೂಡಲೇ ಸರ್ಕಾರಅಗತ್ಯ ಸೌಲಭ್ಯ ಒದಗಿಸಬೇಕು ಎಂದುಒತ್ತಾಯಿಸಿದರು.
ಕೊರೊನಾದ ಮೊದಲ ಮತ್ತುಎರಡನೇ ಅಲೆಯ ವೇಳೆ ಸೋಂಕಿತರಿಗೆಹಾಸಿಗೆ, ಆಮ್ಲಜನಕ, ಐಸಿಯು, ಔಷಧಿಒದಗಿಸುವಲ್ಲಿ ಕೊರತೆಗಳು, ಖಾಸಗಿಆಸ್ಪತ್ರೆಗಳ ಅಸಹಕಾರ ಸಾರ್ವಜನಿಕಆರೋಗ್ಯ ವ್ಯವಸ್ಥೆ ಬಲಪಡಿಸಬೇಕಾದಅವಶ್ಯಕತೆಯನ್ನು ಎತ್ತಿ ತೋರಿದೆ.ಆರೋಗ್ಯ ತುರ್ತು ಅರ್ಥಮಾಡಿಕೊಂಡು ಸರ್ಕಾರ ಸಾರ್ವಜನಿಕಆರೋಗ್ಯ ವ್ಯವಸ್ಥೆ ಬಲಪಡಿಸಬೇಕು.
ಮನೆ ಆರೈಕೆಯಲ್ಲಿರುವ ಸೋಂಕಿತರಿಗೆಅಗತ್ಯ ನೆರವು ನೀಡಬೇಕು.ವಾರ್ಡ್ ವಾರು ನಿರ್ದಿಷ್ಟ ಸಿಬ್ಬಂದಿನಿಯೋಜಿಸಿ, ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸಿ ಉಚಿತ ಪೌಷ್ಟಿಕ ಆಹಾರ ಒದಗಿಸಬೇಕು. ಮೃತರಕುಟುಂಬದವರಿಗೆ ತಲಾ 4 ಲಕ್ಷ ರೂ.ಪರಿಹಾರ ನೀಡಬೇಕು. ಕೋವಿಡ್‌ವಾರಿಯರ್ ಜೀವನ ಭದ್ರತೆಗೆಅಗತ್ಯ ಕ್ರಮ ವಹಿಸಬೇಕು.
ಸರ್ಕಾರಿಆಸ್ಪತ್ರೆಗಳನ್ನು ಹೆಚ್ಚಿಸಬೇಕು. ಆರೋಗ್ಯವಲಯಕ್ಕೆ ಬಜೆಟ್ ಅನುದಾನ ಹೆಚ್ಚಿಸಿಸಾರ್ವಜನಿಕ ಆರೋಗ್ಯ ವ್ಯವಸ್ಥೆಬಲಪಡಿಸಬೇಕು ಎಂದರು.ಅಪರ್ಣಾ, ಮಂಜುನಾಥ್ ಕೈದಾಳೆ,ಡಾ| ಸುನೀತ್‌ಕುಮಾರ್, ಪೂಜಾನಂದಿಹಳ್ಳಿ, ಕಾವ್ಯ, ಪುಷ್ಪಾ ಇತರರುಭಾಗವಹಿಸಿದ್ದರು.