Advertisement

126 ಕೊರೊನಾ ಸೋಂಕಿತರು ಗುಣಮುಖ

02:50 PM Jan 19, 2022 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರ ದಾಖಲೆಪ್ರಮಾಣದಲ್ಲಿ 126 ಸೋಂಕಿತರು ಗುಣಮುಖರಾಗಿಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.ಕೊರೊನಾ ಹೆಚ್ಚುತ್ತಿರುವ ನಡುವೆಯೂ ಸೋಂಕಿತರುಗುಣ ಮುಖರಾಗುತ್ತಿರುವುದು ವಿಶೇಷ. ಇದೇ ಮೊದಲಬಾರಿಗೆ ಗುಣಮುಖರಾದವರ ಸಂಖ್ಯೆ ಶತಕದ ಗಡಿದಾಟಿದೆ.

Advertisement

ದಾವಣಗೆರೆ ನಗರ, ತಾಲೂಕಿನಲ್ಲಿ 70, ಹರಿಹರದಲ್ಲಿ 5,ಜಗಳೂರಿನಲ್ಲಿ 14, ಚನ್ನಗಿರಿಯಲ್ಲಿ 25, ಹೊನ್ನಾಳಿ ಯಲ್ಲಿನಾಲ್ವರು, ಹೊರ ಜಿಲ್ಲೆಯ ಎಂಟು ಜನ ಸೋಂಕಿತರು ಸೇರಿ126 ಜನರು ಡಿಸಾcರ್ಜ್‌ ಆಗಿದ್ದಾರೆ.ಮತ್ತೆ ಜಿಲ್ಲೆಯಲ್ಲಿ ಒಂದೇ ದಿನ ಕೊರೊನಾ ಪ್ರಕರಣಗಳಸಂಖ್ಯೆ ದ್ವಿಶತಕದ ಗಡಿ ದಾಟಿದೆ. ದಿನದಿಂದ ದಿನಕ್ಕೆಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ಬರೋಬರಿ 257 ಜನರಲ್ಲಿಕೊರೊನಾ ದೃಢಪಟ್ಟಿದೆ.ದಾವಣಗೆರೆ ನಗರ ಮತ್ತು ತಾಲೂಕಿನ ಇತರೆಡೆ ಅತಿ ಹೆಚ್ಚು146, ಹರಿಹರದಲ್ಲಿ 40, ಜಗಳೂರಿನಲ್ಲಿ 20, ಚನ್ನಗಿರಿಯಲ್ಲಿ29, ಹೊನ್ನಾಳಿಯಲ್ಲಿ 22 ಜನರು ಸೇರಿದಂತೆ 257ಜನರಲ್ಲಿ ಕೊರೊನಾ ದೃಢಪಟ್ಟಿದೆ. ಕಳೆದ ವರ್ಷ ಕೊರೊನಾಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 27782,ಹರಿಹರದಲ್ಲಿ 7004, ಜಗಳೂರಿನಲ್ಲಿ 2833, ಚನ್ನಗಿರಿಯಲ್ಲಿ6568, ಹೊನ್ನಾಳಿಯಲ್ಲಿ 6519, ಹೊರ ಜಿಲ್ಲೆಯ 1630ಜನರು ಸೇರಿದಂತೆ ಈವರೆಗೆ ಒಟ್ಟು 53,376 ಜನರುಸೋಂಕಿಗೆ ಒಳಗಾಗಿದ್ದಾರೆ.ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ26759, ಹರಿಹರದಲ್ಲಿ 6818, ಜಗಳೂರಿನಲ್ಲಿ 2751,ಚನ್ನಗಿರಿಯಲ್ಲಿ 6459, ಹೊನ್ನಾಳಿಯಲ್ಲಿ 6380, ಹೊರಜಿಲ್ಲೆಯ 1565 ಜನರು ಸೇರಿದಂತೆ 50, 372 ಸೋಂಕಿತರುಗುಣಮುಖರಾಗಿದ್ದಾರೆ. ಸುಮಾರು ಎರಡೂವರೆ ತಿಂಗಳಬಳಿಕ ಜಿಲ್ಲೆಯಲ್ಲಿ ಕೊರೊನಾದಿಂದ ವಯೋವೃದ್ಧೆಯೊಬ್ಬರುಮೃತಪಟ್ಟಿದ್ದಾರೆ.

ಹೊನ್ನಾಳಿ ಪಟ್ಟಣದ ಸೊಪ್ಪಿನಕೇರಿಯ80 ವರ್ಷದ ವಯೋವೃದ್ಧೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿನಿಧನರಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಈವರೆಗೆಕೊರೊನಾಕ್ಕೆ 609 ಜನರು ಬಲಿಯಾಗಿದ್ದಾರೆ. ಸಕ್ರಿಯಪ್ರಕರಣಗಳ ಸಂಖ್ಯೆ 1036ಕ್ಕೆ ಏರಿದೆ.ದಾವಣಗೆರೆ ಜಿಲ್ಲೆಯಲ್ಲಿ ಜ.18ರ ಮಂಗಳವಾರ 5ವರ್ಷದೊಳಗಿನ 7 ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡಿದೆ.6ರಿಂದ 8 ವರ್ಷದೊಳಗಿನ ಒಟ್ಟು 50 ಹಾಗೂ 6 ರಿಂದ 18ವರ್ಷದೊಳಗಿನ 281 ಮಕ್ಕಳಲ್ಲಿ ಕೊರೊನಾ ಪಾಸಿಟಿವ್‌ಕಾಣಿಸಿಕೊಂಡಿದೆ. ಮಂಗಳವಾರದವರೆಗೆ ಒಟ್ಟು 57 ಜನರುವಿವಿಧ ಆಸ್ಪತ್ರೆಯಲ್ಲಿ ಕೊರೊನಾಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 39, ವಿವಿಧ ಖಾಸಗಿಆಸ್ಪತ್ರೆಯಲ್ಲಿ 18 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 979 ಜನಸೋಂಕಿತರು ಹೋಂ ಐಸೋಲೇಷನ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next